ಕರ್ಪೂರದಲ್ಲಿದೆ ವಾಸ್ತು ದೋಷಕ್ಕೆ ಪರಿಹಾರ

Camphor Vastu Tips: ದೇವರ ಪೂಜೆ ಚಿಕ್ಕದಿರಲಿ ಅಥವಾ ದೊಡ್ಡದಿರಿಲಿ. ಕೆಲವು ನಿಯಮಗಳನ್ನಂತೂ ಎಲ್ಲರೂ ಪಾಲಿಸುತ್ತಾರೆ. ಅದೇ ರೀತಿ ದೇವರ ಪೂಜೆಗೆ ಕೆಲವು ವಸ್ತಗಳು ಅಗತ್ಯವಾಗಿ ಬೇಕು.

ದೀಪ, ಹೂವು, ಗಂಧ, ಊದಿನಕಡ್ಡಿ, ಕರ್ಪೂರ ಇವೆಲ್ಲವೂ ಪೂಜೆಯ ಭಾಗವಾಗಿದೆ. ಪೂಜೆಯಲ್ಲಿ ಬಳಕೆಯಾಗುವ ಕರ್ಪೂರದಿಂದ ಅನೇಕ ಪ್ರಯೋಜನಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಇದು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.

ಜೊತೆಗೆ ವಾಸ್ತು ದೋಷವನ್ನು ಹೋಗಲಾಡಿಸುತ್ತದೆ. ಕರ್ಪೂರವನ್ನು ಮನೆಯ ಕೆಲವು ಪ್ರಮುಖ ಭಾಗಗಳಲ್ಲಿ ಬೆಳಗಿಸುವುದರಿಂದ ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಹಾಗಾದರೆ ವಾಸ್ತು ಶಾಸ್ತ್ರದಲ್ಲಿ ಕರ್ಪೂರಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ನಿಯಮಗಳನ್ನು ಹೇಳಿದ್ದಾರೆ ಎಂದು ನೋಡೋಣ.

ಮೇಲಿಂದ ಮೇಲೆ ತೊಂದರೆಗಳಾಗುತ್ತಿದ್ದರೆ ಈ ಕೆಲಸ ಪ್ರತಿದಿನ ಮಾಡಿ

ಮನೆಯಲ್ಲಿ ಮೇಲಿಂದ ಮೇಲೆ ತೊಂದರೆಗಳಾಗಿ, ಕುಟುಂಬದವರೆಲ್ಲರೂ ತೊಂದರೆಗೊಳಗಾಗುತ್ತಿದ್ದರೆ ಅದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯಿಂದಿರಬಹುದು. ಅದಕ್ಕೆ ಪ್ರತಿದಿನ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಹಚ್ಚಿ.

ಇದು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪುನಃಸ್ಥಾಪಿಸುತ್ತದೆ. ಒಂದೊಂದೇ ಸಮಸ್ಯೆಗಳು ದೂರವಾಗುತ್ತ ಹೋಗುತ್ತದೆ. ತೊಂದರೆಗಳು ನಿವಾರಣೆಯಾಗುತ್ತವೆ.

ಆರ್ಥಿಕ ಸಮಸ್ಯೆಗೆ ಹೀಗೆ ಮಾಡಿ

ನೀವು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು ದಿಕ್ಕು ತೋಚದಂತಾಗಿದ್ದರೆ ಅದಕ್ಕೆ ವಾಸ್ತು ಶಾಸ್ತ್ರದಲ್ಲಿ ಸುಲಭದ ಪರಿಹಾರವೊಂದನ್ನು ಹೇಳಲಾಗಿದೆ. ಅದೇನೆಂದರೆ ಕರ್ಪೂರ ಮತ್ತು ಲವಂಗ ಎರಡನ್ನೂ ಸೇರಿಸಿ ಹಚ್ಚಿದರೆ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಆರ್ಥಿಕ ಹಿನ್ನಡೆಯಿಂದ ಮುಕ್ತಿ ದೊರೆಯುತ್ತದೆ.

ಇದನ್ನೂ ಓದಿ: ದೀಪಾವಳಿ 2025 ಯಾವಾಗ? ದಿನಾಂಕ, ತಿಥಿ, ಪೂಜಾ ಸಮಯ ತಿಳಿಯಿರಿ

ವಾಸ್ತು ದೋಷ ನಿವಾರಣೆಗೆ ಈ ಉಪಾಯ ಮಾಡಿ

ನೀವು ವಾಸಿಸುವ ಮನೆಗೆ ವಾಸ್ತು ದೋಷ ತಗುಲಿದ್ದರೆ, ಅದನ್ನು ತೆಗೆದುಹಾಕಲು ನೀವು ಕರ್ಪೂರದ ಸಹಾಯದಿಂದ ಕೆಲವು ಪರಿಹಾರಗಳನ್ನು ಪ್ರಯತ್ನಿಸಬಹುದು. ಮನೆಯ ಎಲ್ಲ ಮೂಲೆಗಳಲ್ಲಿ ಕರ್ಪೂರದ ತುಂಡುಗಳನ್ನು ಇರಿಸಿ.

ಈ ತುಂಡುಗಳು ಕರಗಿದ ನಂತರ, ಅವುಗಳನ್ನು ಬದಲಾಯಿಸಿ. ಹಾಗೆ ಮಾಡುವುದರಿಂದ ವಾಸ್ತು ದೋಷಗಳನ್ನು ನಿವಾರಿಸಲು ನಿಮಗೆ ಸಹಾಯವಾಗುತ್ತದೆ.

ಮನೆಯ ಈ ಸ್ಥಳಗಳಲ್ಲಿ ಕರ್ಪೂರವನ್ನು ಇರಿಸಿ

ವಾಸ್ತು ಪ್ರಕಾರ, ನೀವು ಮುಖ್ಯ ದ್ವಾರ, ದೇವರ ಮನೆ ಮತ್ತು ತಿಜೋರಿಯಲ್ಲಿ ಕರ್ಪೂರದ ತುಂಡನ್ನು ಇಡಬಹುದು. ಇದಲ್ಲದೆ, ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಇಡುವುದು ವೈವಾಹಿಕ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಮ್ಮ ದಿಂಬಿನ ಕೆಳಗೆ ಕರ್ಪೂರದ ತುಂಡನ್ನು ಇಟ್ಟುಕೊಂಡು ಮಲಗುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ, ಉತ್ತಮ ನಿದ್ರೆ ಬರುತ್ತದೆ. ಮನೆಯ ಈ ಪ್ರದೇಶಗಳಲ್ಲಿ ಕರ್ಪೂರವನ್ನು ಇಡುವುದರಿಂದ ವಾಸ್ತು ದೋಷಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ

(Camphor Vastu Tips easy and powerful remedies for vastu dosha)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories