82ನೇ ವಯಸ್ಸಿನಲ್ಲಿ ವೃದ್ಧೆಯ ಬಂಗಿ ಜಂಪ್​ ಸಾಹಸ : ವೈರಲ್​ ಆಯ್ತು ವಿಡಿಯೋ

82-year-old woman bungee jump : ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಬಂಗಿ ಜಂಪ್​ ಮಾಡಬೇಕು ಎನ್ನುವುದು ಅನೇಕರ ಕನಸು. ಈ ಬಂಗಿ ಜಂಪ್​ ಮಾಡೋಕೆ ಎಂಟೆದೆ ಗುಂಡಿಗೆ ಕೂಡ ಬೇಕು. ಆದರೆ ಋಷಿಕೇಶದ ಶಿವಪುರಿಯಲ್ಲಿ ಬರೋಬ್ಬರಿ 82 ವರ್ಷದ ವೃದ್ಧೆಯೊಬ್ಬರು ಭಾರತದ ಅತೀ ಎತ್ತರದ ಬಂಗಿ ಜಂಪ್ ಪೂರ್ಣಗೊಳಿಸುವ ಮೂಲಕ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ವೃದ್ಧೆಯ ಬಂಗಿ ಜಂಪ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯು ಅತ್ಯಂತ ಉತ್ಸಾಹ ಹಾಗೂ ಆತ್ಮವಿಶ್ವಾಸದಿಂದ ಬಂಗಿಜಂಪ್​ಗೆ ಸಿದ್ಧವಾಗುತ್ತಿರುವುದನ್ನು ಕಾಣಬಹುದಾಗಿದೆ.

ಕನಿಷ್ಟ ಭಯವೂ ಇಲ್ಲದವರಂತೆ ಮಹಿಳೆಯು ಬಂಗಿ ಜಂಪ್​ ಮಾಡಿದ್ದು ನೋಡುಗರು ಬೆಕ್ಕಸ ಬೆರಗಾಗಿದ್ದಾರೆ. ಪ್ರಖ್ಯಾತ ಸಾಮಾಜಿಕ ಜಾಲತಾಣದ ವೇದಿಕೆ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್​ ಆಗಿದ್ದು ಜನರು ವೃದ್ಧೆಯ ಧೈರ್ಯವನ್ನು ಕೊಂಡಾಡಿದ್ದಾರೆ.

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಇವರು ಸಾಬೀತು ಪಡಿಸಿದ್ದಾರೆ ಎಂದು ಹಲವರು ಹೇಳಿದ್ದರೆ ಇನ್ನುಳಿದವರು ಆತ್ಮವಿಶ್ವಾಸ ಎಂದರೆ ಹೀಗಿರಬೇಕು ಅಂತಾ ವೃದ್ಧೆಗೆ ಶಹಬ್ಬಾಸ್​ ಗಿರಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಕೇವಲ ಹಣ್ಣು ಮಾತ್ರ ತಿಂದು ಬದುಕುತ್ತೇನೆಂದು ಹೊರಟಿದ್ದ ಯುವತಿ 27ರ ಹರೆಯದಲ್ಲೇ ಸಾವು

ಕ್ಯಾಮರಾ ಕಡೆ ವೃದ್ಧೆ ನೋಡದಿದ್ದರೂ ಸಹ ಅವರು ಅವರದೇ ಲೋಕದಲ್ಲಿ ತೇಲುತ್ತಿದ್ದರು. ಆ ಆನಂದವನ್ನು ನಾವೆಲ್ಲ ನೋಡಬೇಕಿದೆ ಎಂದು ಇನ್​ಸ್ಟಾಗ್ರಾಂ ಬಳಕೆದಾರರೊಬ್ಬರು ಕಮೆಂಟ್​ ಮಾಡಿದ್ದಾರೆ.

ಮತ್ತೊಬ್ಬ ಬಳಕೆದಾರರು ,ಅವರು ಇದೇ ರೀತಿ ಹಾರಾಟ ನಡೆಸಲಿ. ಬಂಗಿ ಜಂಪ್​ ಮಾಡುವಾಗ ಅವರು ನರ್ತಕಿಯಂತೆ ಕಾಣುತ್ತಿದ್ದರು. ಈ ವಯಸ್ಸಿನಲ್ಲಿ ಇವರು ಜೀವನವನ್ನು ನೋಡುತ್ತಿರುವ ರೀತಿ ನಮಗೆಲ್ಲ ಸ್ಪೂರ್ತಿಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೃದ್ಧೆಯ ಶಕ್ತಿ, ಸಾಹಸ ಹಾಗೂ ಆತ್ಮವಿಶ್ವಾಸವನ್ನು ಪ್ರತಿಯೊಬ್ಬರೂ ಕೊಂಡಾಡಿದ್ದಾರೆ.ಈ ವಯಸ್ಸಿನಲ್ಲಿ ಮಹಿಳೆಯ ಚೈತನ್ಯವನ್ನು ಶ್ಲಾಘಿಸುತ್ತಿದ್ದಾರೆ. ಇವರು ಬದುಕನ್ನು ಜೀವಿಸುತ್ತಿರುವ ರೀತಿ ಮಾದರಿ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ : ವೆಜ್‌ ಬಿರಿಯಾನಿ ಬದಲು ಮಾಂಸಹಾರಿ ಬಿರಿಯಾನಿ ನೀಡದಕ್ಕೆ ಹೋಟೆಲ್‌ ಮಾಲೀಕನ ಹತ್ಯೆ

82-year-old woman at India’s highest bungee jump in Rishikesh

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories