ಕೇವಲ ಹಣ್ಣು ಮಾತ್ರ ತಿಂದು ಬದುಕುತ್ತೇನೆಂದು ಹೊರಟಿದ್ದ ಯುವತಿ 27ರ ಹರೆಯದಲ್ಲೇ ಸಾವು

Viral News: ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಈ ಮಾತನ್ನು ಈಗ ನೆನಪಿಸಿಕೊಳ್ಳಲು ಕಾರಣವೂ ಇದೆ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಇಲ್ಲೊಬ್ಬ ಯುವತಿ ತಾನು ಕೇವಲ ಹಣ್ಣುಗಳನ್ನು ಮಾತ್ರ ತಿಂದು ಬದುಕುತ್ತೇನೆಂಬ ದುಸ್ಸಾಹಸಕ್ಕೆ ಇಳಿದು ಕೇವಲ 27ರ ಪ್ರಾಯದಲ್ಲೇ ಮೃತಪಟ್ಟಿದ್ದಾಳೆ.

ಈಕೆ ಕೇವಲ 22 ಕೆಜಿ ತೂಕ ಹೊಂದಿದ್ದಳು ಎನ್ನಲಾಗಿದೆ. ಹಸಿವಿನಿಂದ ಬಾಲಿಯ ಹೋಟೆಲ್​ ಕೋಣೆಯಲ್ಲಿ ಕರೋಲಿನಾ ಕ್ರೈಜಾಕ್​ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಕರೋಲಿನಾ ಆಸ್ಟಿಯೊಪೊರೋಸಿಸ್ ಮತ್ತು ಆಲ್ಬುಮಿನ್ ಕೊರತೆಯಿಂದ ಬಳಲುತ್ತಿದ್ದಳು ಎಂದು ವೈದ್ಯಕೀಯ ವರದಿಗಳು ಹೇಳಿವೆ.

ಈ ಎರಡೂ ಆರೋಗ್ಯ ಸಮಸ್ಯೆಗಳು ದೀರ್ಘಕಾಲದ ಹಸಿವು ಹಾಗೂ ಅಪೌಷ್ಠಿಕತೆಗೆ ಸಂಬಂಧಿಸಿದೆ. ತೂಕ ಇಳಿಕೆ ಮಾಡಿಕೊಳ್ಳುವಾಗ ಎಲ್ಲಾ ದೇಹಕ್ಕೆ ಎಲ್ಲಾ ರೀತಿಯ ಪೌಷ್ಠಿಕಾಂಶಗಳು ಒದಗುವಂತಹ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ತೂಕ ಇಳಿಕೆಗಾಗಿ ಕೇವಲ ಹಣ್ಣುಗಳನ್ನು ಮಾತ್ರ ಸೇವನೆ ಮಾಡುವುದು ಅತ್ಯಂತ ಕೆಟ್ಟ ಆಯ್ಕೆಯಾಗಿದೆ.

Also read: Delhi Viral News: 40 ಲಕ್ಷ ರೂಪಾಯಿ ಮೌಲ್ಯದ ದೇಗುಲದ ಕಳಶ ಕದ್ದ ಕಿರಾತಕ : ಕಳ್ಳತನದ ವಿಡಿಯೋ ವೈರಲ್​

ಕೇವಲ ಹಣ್ಣುಗಳನ್ನು ಮಾತ್ರ ಸೇವಿಸುವುದು ಏಕೆ ಅಪಾಯಕಾರಿ

ಮನುಷ್ಯನ ದೇಹ ಕೇವಲ ಹಣ್ಣುಗಳನ್ನು ಮಾತ್ರ ತಿಂದು ಬದುಕುವ ರೀತಿಯಲ್ಲಿ ವಿನ್ಯಾಸವಾಗಿಲ್ಲ. ಇದು ನಮ್ಮ ಆಹಾರ ಪದ್ಧತಿಯ ಹಳಿ ತಪ್ಪಿಸುವುದು ಮಾತ್ರವಲ್ಲದೇ ತೀವ್ರ ಪೌಷ್ಠಿಕಾಂಶದ ಕೊರತೆಗೆ ಕಾರಣವಾಗುತ್ತದೆ.

ಹಣ್ಣುಗಳಿಂದ ಉತ್ತಮ ಜೀವಸತ್ವ ಹಾಗೂ ಆಂಟಿಆಕ್ಸಿಡಂಟ್​ಗಳು ಲಭ್ಯವಾಗುತ್ತದೆಯಾದರೂ ಸಹ ಮನುಷ್ಯನ ದೇಹಕ್ಕೆ ಅಗತ್ಯವಾದ ಪ್ರೋಟೀನ್‌ಗಳು, ಕೊಬ್ಬುಗಳು, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಬಿ 12 ಮತ್ತು ಶಕ್ತಿಯ ಸಮತೋಲನಕ್ಕೆ ಅಗತ್ಯವಾದ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸಲು ಸಾಧ್ಯವಿಲ್ಲ. ಇದರಿಂದ ಕರುಳಿನ ಒಳಪದರವನ್ನು ದುರ್ಬಲಗೊಳ್ಳಬಹುದು., ಕರುಳಿನ ಚಲನಶೀಲತೆಯನ್ನು ನಿಧಾನಗೊಳಿಸುವ ಅಪಾಯವಿರುತ್ತದೆ.

ಯಕೃತ್ತು, ಮೇದೋಜ್ಜೀರಕ ಗ್ರಂಥಿ ಹಾಗೂ ಕರುಳು ಮಾತ್ರವಲ್ಲದೇ, ದೇಹದ ಪ್ರತಿಯೊಂದು ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಮತೋಲಿತ ಆಹಾರವನ್ನು ಮನುಷ್ಯ ಸೇವನೆ ಮಾಡಬೇಕು.

Also Read: ಪಾದ ತೊಳೆದು ನೀರು ಕುಡಿಯುವಂತೆ ಯುವಕನಿಗೆ ಚಿತ್ರಹಿಂಸೆ : ವೈರಲ್​ ಆಯ್ತು ಅಮಾನವೀಯ ವಿಡಿಯೋ

ನಮ್ಮ ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಅಡಿಪಾಯವಿದ್ದಂತೆ. ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು, ಹಾಗೆಂದು ಕೇವಲ ಹಣ್ಣುಗಳನ್ನೇ ತಿಂದು ಮನುಷ್ಯ ಬದುಕಲು ಸಾಧ್ಯವಿಲ್ಲ. ಹೀಗಾಗಿ ತೂಕ ಇಳಿಕೆ ಮಾಡುವ ನಿರ್ಧಾರಕ್ಕೆ ಬಂದ ಸಂದರ್ಭದಲ್ಲಿ ತಜ್ಞ ಪೋಷಕಾಂಶ ತಜ್ಞರನ್ನು ಭೇಟಿ ಮಾಡಿ ಅವರಿಂದ ಆಹಾರದ ಪಟ್ಟಿಯನ್ನು ಪಡೆದುಕೊಳ್ಳುವುದು ಉತ್ತಮ ಎಂದು ವೈದ್ಯ ಲೋಕ ಹೇಳುತ್ತದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories