ಅಕ್ಟೋಬರ್ 25ರಂದು ದಿ.ಎಂ.ಕೆ ವಿಜಯ ಕುಮಾರ್ ನುಡಿನಮನ

ಕಾರ್ಕಳ : ಕಾರ್ಕಳ ಬಿಜೆಪಿಯ ವತಿಯಿಂದ ಇತ್ತೀಚಿಗೆ ವಿಧಿವಶರಾದ ಬಿಜೆಪಿಯ ಹಿರಿಯ ಮುಖಂಡ, ಖ್ಯಾತ ನ್ಯಾಯವಾದಿಗಳಾದ ಎಂಕೆ ವಿಜಯ್ ಕುಮಾರ್ (MK Vijaya Kumar) ಅವರ ನುಡಿನಮನ ಕಾರ್ಯಕ್ರಮ ಅಕ್ಟೋಬರ್ 25ರಂದು ನಡೆಯಲಿದೆ.
ಅಕ್ಟೋಬರ್ 03 2025ರಂದು ಎಂಕೆ ವಿಜಯ ಕುಮಾರ್ ಅವರು ಅಗಲಿದ್ದರು. ಅವರು ಕಾರ್ಕಳ ಬಿಜೆಪಿಗೆ, ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆತ್ಮಕ್ಕೆ ಸದ್ಗತಿ ಕೋರಿ ಕಾರ್ಕಳ ಬಿಜೆಪಿ ಮಂಡಲದ ವತಿಯಿಂದ ಕಾರ್ಕಳದ ಬಿ ಮಂಜುನಾಥ ಪೈ ಸಭಾಂಗಣದಲ್ಲಿ ಅಕ್ಟೋಬರ್ 25 ರಂದು ಬೆಳಿಗ್ಗೆ 10.00 ಗಂಟೆಗೆ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ.
Also Read : ಅನಾರೋಗ್ಯ ಪೀಡಿತ ಶಿಕ್ಷಕಿಯನ್ನು ಆಸ್ಪತ್ರೆಗೆ ಹೊತ್ತೊಯ್ದ ಯುವಕರು
ಈ ಕಾರ್ಯಕ್ರಮದಲ್ಲಿ ಉಡುಪಿ ದಕಿಣ ಕನ್ನಡ ಜಿಲ್ಲೆಯ ಬಿಜೆಪಿ ಹಿರಿಯರು, ಶಾಸಕರು, ಪ್ರಮುಖ̧ರು ಭಾಗವಹಿಸಲಿದ್ದಾರೆ. ಎಂ ಕೆ ವಿಜಯ ಕುಮಾರ್ ರವರ ಅಭಿಮಾನಿಗಳು, ಪಕ್ಷದ ಹಿರಿಯರು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಗಲಿದ ಹಿರಿಯ ಚೇತನಕ್ಕೆ ನಮನ ಸಲ್ಲಿಸಬೇಕು ಎಂದು ಕಾರ್ಕಳ ಬಿಜೆಪಿ ವಿನಂತಿಸಿಕೊಂಡಿದೆ.
Karkala BJP MK Vijaya Kumar Nudi Namana At October 25



