ಕುಂದಾಪುರ: ಆನ್‌ಲೈನ್ ಸಿಮೆಂಟ್ ಖರೀದಿ, ₹12 ಲಕ್ಷ ರೂ. ವಂಚನೆ
ಕುಂದಾಪುರ :Online Fraud: ಆನ್‌ಲೈನ್ ಮೂಲಕ ಸಿಮೆಂಟ್ ಖರೀದಿಸಿದ ವ್ಯಕ್ತಿಯೋರ್ವರು 12 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ನಗು ಸ್ಕ್ವ್ಯಾರ್ ಪ್ರೈ ಲಿಮಿಟೆಡ್ ಕಂಪೆನಿಯ ಅಕೌಂಟೆಂಟ್ ಯು ಸತೀಶ್ ಕುಮಾರ್ ಶೆಟ್ಟಿ ಎಂಬವರೇ ವಂಚನೆಗೆ ಒಳಗಾದವರು.
ಕಂಪೆನಿಯ ಕಟ್ಟಡ ಕಾಮಗಾರಿಗಾಗಿ ಸಿಮೆಂಟ್ ಅಗತ್ಯವಿದ್ದ ಕಾರಣ, ಸತೀಶ್ ಕುಮಾರ್ ಅವರು ದಿನಾಂಕ ಅಕ್ಟೋಬರ್ 13ರಂದು ಇಂಡಿಯಾ ಮಾರ್ಟ್ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದ್ದರು.
ಆಗ ಅವರಿಗೆ ULTRATECH CEMENT LTD ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬನ ಸಂಪರ್ಕ ಸಿಕ್ಕಿದೆ. ಆರೋಪಿಯು ಒಂದು ಸಿಮೆಂಟ್ ಬ್ಯಾಗ್‌ಗೆ ₹300 ರಂತೆ 5000 ಸಿಮೆಂಟ್ ಬ್ಯಾಗ್‌ಗಳ ಒಟ್ಟು ₹15,00,000.66 ಮೌಲ್ಯದ ಕೊಟೇಶನ್ ಕಳುಹಿಸಿದ್ದಾನೆ.
Also Read: ಕಾರ್ಕಳ: ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಪೊಲೀಸರ ದಾಳಿ
ಕೊಟೇಶನ್ ನಿಜವೆಂದು ನಂಬಿದ ಕಂಪೆನಿಯು, ಆರೋಪಿಯ ಸೂಚನೆಯಂತೆ ಎರಡು ಕಂತುಗಳಲ್ಲಿ (ಅಕ್ಟೋಬರ್ 17 ರಂದು ₹6 ಲಕ್ಷ ಮತ್ತು ಅಕ್ಟೋಬರ್ 18 ರಂದು ₹6 ಲಕ್ಷ) ಒಟ್ಟು ₹12 ಲಕ್ಷ ಹಣವನ್ನು ಆತನ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.
ಅಕ್ಟೋಬರ್ 19 ರಂದು ಸತೀಶ್ ಕುಮಾರ್ ಶೆಟ್ಟಿ ಅವರು ಕರೆ ಮಾಡಿದ ಆರೋಪಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಸಿಮೆಂಟ್ ಪೂರೈಕೆ ಮಾಡದೆ ₹12 ಲಕ್ಷ ಹಣವನ್ನು ವಂಚಿಸಿರುವ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಆನ್‌ಲೈನ್ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದರೂ ಕೂಡ ಜನರು ಮಾತ್ರ ಮೂರ್ಖರಾಗುವುದು ತಪ್ಪುತ್ತಲೇ ಇಲ್ಲ.
Also Read: ಅಕ್ಟೋಬರ್ 25ರಂದು ದಿ.ಎಂ.ಕೆ ವಿಜಯ ಕುಮಾರ್ ನುಡಿನಮನ



