ಪ್ರತಿದಿನ ಬೆಳಿಗ್ಗೆ ಇವಿಷ್ಟು ಕೆಲಸ ಮಾಡಿ ಸಾಕು: ನಿಮ್ಮ ಅದೃಷ್ಟವೇ ಬದಲಾಗುವುದನ್ನು ನೋಡಿ
Morning Vastu Tips: ಮುಂಜಾನೆ ಎಂಬುದು ಪ್ರತಿಯೊಬ್ಬರಿಗೂ ಹೊಸ ದಿನದ ಆರಂಭದ. ಜೀವನದಲ್ಲಿ ಹೊಸ ಉತ್ಸಾಹ, ಸಂತೋಷಗಳನ್ನು ತರುವ ಸುದಿನ.
ಬೆಳಗ್ಗಿನ ಆರಂಭ ಸಕಾರಾತ್ಮಕವಾಗಿ, ಉಲ್ಲಾಸ ಭರಿತವಾಗಿದ್ದರೆ ದಿನವಿಡೀ ಒಳ್ಳೆಯದೇ ಆಗುತ್ತದೆ ಎಂಬುದು ನಂಬಿಕೆ.
ಆದ್ದರಿಂದ ಎಲ್ಲರೂ ದಿನವನ್ನು ಸಂತೋಷ, ಹೊಸ ಉತ್ಸಾಹದಿಂದ ಪ್ರಾರಂಭಿಸಬೇಕು ಎಂದುಕೊಳ್ಳುತ್ತಾರೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಮಾತ್ರ ಜೀವನದಲ್ಲಿಯೂ ಧನಾತ್ಮಕ ಬದಲಾವಣೆಯನ್ನು ಕಾಣಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಬೆಳಿಗ್ಗೆ ಎದ್ದ ತಕ್ಷಣ ಕೆಲವು ಕೆಲಸಗಳನ್ನು ಮಾಡುವುದನ್ನು ರೂಢಿಮಾಡಿಕೊಳ್ಳಬೇಕು.
ಹಾಗೆ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮನೆಗೆ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಹಾಗಾದರೆ ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಕಾದ ಕೆಲಸಗಳೇನು ಎಂದು ತಿಳಿಯೋಣ.
ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚುವಂತೆ ಮಾಡಿ
ಬೆಳಿಗ್ಗೆ ಎದ್ದ ತಕ್ಷಣ ಮನೆಯ ಕಿಟಕಿ, ಬಾಗಿಲುಗಳನ್ನು ತೆರೆಯಿರಿ. ತಾಜಾ ಗಾಳಿ ಮನೆಯೊಳಗೆ ಪ್ರವೇಶಿಸುವುದರ ಮೂಲಕ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ.
ನೈಸರ್ಗಿಕ ಬೆಳಕು ಮನೆಗೆ ಶಕ್ತಿ ತುಂಬುತ್ತದೆ. ಪ್ರತಿದಿನ ಬೆಳಿಗ್ಗೆ ಮನೆಯ ಸ್ವಚ್ಛತೆಯ ಕಡೆ ಗಮನವಹಿಸಿ. ಧೂಳ, ಕಸ–ಕಡ್ಡಿಗಳನ್ನು ಮನೆಯಿಂದ ಹೊರ ಹಾಕಿ. ಸ್ವಚ್ಛ ವಾತಾವರಣವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಮನೆಯ ಮುಂದೆ ರಂಗೋಲಿ, ಹೂವು ಹಾಕಿ
ಮನೆಯ ಮುಖ್ಯ ದ್ವಾರದ ಬಳಿ ರಂಗೋಲಿ ಹಾಕುವುದು ಹಿಂದಿನಿಂದಲೂ ನೆಡೆದುಕೊಂಡು ಬಂದ ಸಂಪ್ರದಾಯ.
ಇದರ ಮೂಲ ಉದ್ದೇಶ ಮನೆಯೊಳಗೆ ಕೇವಲ ಧನಾತ್ಮಕ ಅಂಶಗಳು ಮಾತ್ರ ಪ್ರವೇಶಿಸಲಿ ಎಂಬುದಾಗಿದೆ. ರಂಗೋಲಿ ಧನಾತ್ಮಕತೆಯನ್ನು ಆಕರ್ಷಿಸುತ್ತದೆ.
ಜೊತೆಗೆ ಬಾಗಿಲ ಬಳಿ ಹೂವನ್ನು ಇಡಿ. ಶಾಸ್ತ್ರದಲ್ಲಿ ಅದನ್ನು ಶುಭವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವಿದ್ದರೆ ಅದಕ್ಕೂ ಹೂವು ಹಾಕಿ ಪೂಜೆ ಮಾಡಿ.
ತುಳಸಿ ಧನಾತ್ಮಕ ಶಕ್ತಿ ಮತ್ತು ಆರೋಗ್ಯವನ್ನು ತರುತ್ತದೆ. ಇದಲ್ಲದೆ, ಗಿಡದ ಬಳಿ ದೀಪವನ್ನು ಬೆಳಗಿಸಬಹುದು. ಬೆಳಗ್ಗಿನ ಪ್ರಶಾಂತ ವಾತಾವರಣದಲ್ಲಿ ದೇವರ ಧ್ಯಾನ, ಪ್ರಾಣಾಯಾಮಗಳನ್ನು ಮಾಡುವುದು ಮಾನಸಿಕ ಸಮತೋಲವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Vastu Shastra: ಗೃಹಾಲಂಕಾರಕ್ಕೆ ಈ ವಸ್ತುಗಳನ್ನೂ ತನ್ನಿ: ಮನೆಯ ಅಂದದ ಜೊತೆಗೆ ಸಮೃದ್ಧಿಯು ಹೆಚ್ಚುತ್ತದೆ
ಅನಗತ್ಯ ವಸ್ತುಗಳನ್ನು ಮನೆಯ ಮೂಲೆಯಲ್ಲಿ ಇಡಬೇಡಿ
ಮನೆಯ ಮೂಲೆಗಳಲ್ಲಿ ಅನಗತ್ಯ ವಸ್ತುಗಳನ್ನು ಎಂದಿಗೂ ಇಡಬೇಡಿ. ಪ್ರತಿದಿನ ಮನೆಯ ಮೂಲೆಗಳನ್ನು ಸದಾ ಸ್ವಚ್ಛವಾಗಿಡಬೇಕೆಂದು ವಾಸ್ತು ಹೇಳುತ್ತದೆ.
ಏಕೆಂದರೆ ಅನಗತ್ಯ ವಸ್ತುಗಳು ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವಂತೆ ಮಾಡುತ್ತದೆ. ಮನೆಯೊಳಗೆ ಸಕಾರಾತ್ಮಕ ಶಕ್ತಿ ತುಂಬಿದ್ದರೆ ಅದು ಕುಟುಂಬಸ್ಥರ ಮನೋಸ್ಥೈರ್ಯ ಹೆಚ್ಚಿಸುತ್ತದೆ.
ಊಟ ಮಾಡುವ ಜಾಗಕ್ಕೆ ವಿಶೇಷ ಕಾಳಜಿವಹಿಸಿ
ಅಡುಗೆಮನೆ ಮತ್ತು ಊಟದ ಕೋಣೆ ಪ್ರತಿಯೊಬ್ಬರಿಗೂ ಅತ್ಯಾಪ್ತವಾಗಿ ಇರುತ್ತದೆ. ಅಲ್ಲಿ ಕೆಂಪು ಅಥವಾ ಹಳದಿ ವಸ್ತುಗಳನ್ನು ಇಡುವುದು ಸೂಕ್ತ.
ಈ ಬಣ್ಣಗಳು ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅಲ್ಲದೆ, ಸ್ನಾನಗೃಹ ಮತ್ತು ಶೌಚಾಲಯವನ್ನು ಸ್ವಚ್ಛವಾಗಿ ಮತ್ತು ಪರಿಮಳಯುಕ್ತವಾಗಿಡಿ. ವಾಸ್ತು ಪ್ರಕಾರ, ಕೊಳಕು ಮತ್ತು ವಾಸನೆಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಈ ಪ್ರಾಣಿಗಳನ್ನು ಸಾಕುವುದರಿಂದ ಸಂತೃಪ್ತಳಾಗುತ್ತಾಳೆ ಅದೃಷ್ಟ ದೇವತೆ
(Follow these morning vastu tips everyday find yourself how your luck changes)



