ಯಾವ ಮುಹೂರ್ತದಲ್ಲಿ ಆಚರಿಸಬೇಕು ತುಳಸಿ ವಿವಾಹ : ಇಲ್ಲಿದೆ ಸಂಪೂರ್ಣ ಮಾಹಿತಿ

Tulsi wedding : ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ಪುರಾಣ ಕತೆಗಳಲ್ಲಿ ಈ ದಿನವು ಅತ್ಯಂತ ಮಹತ್ವತೆಯನ್ನು ಹೊಂದಿದೆ. ಹಿಂದೂ ಸಂಪ್ರದಾಯಗಳಲ್ಲಿ ಈ ದಿನವನ್ನು ಅತ್ಯಂತ ಶುಭದಿನ ಎಂದು ಪರಿಗಣಿಸಲಾಗುತ್ತದೆ.

ಏಕೆಂದರೆ ಈ ದಿನದಿಂದ ಭಗವಾನ್​ ವಿಷ್ಣುವು ತನ್ನ ನಾಲ್ಕು ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಂಡು ಭೂಮಿಯ ಮೇಲೆ ಶುಭ ಚಟುವಟಿಕೆಗಳನ್ನು ಆರಂಭಿಸಿದ ಎಂಬ ನಂಬಿಕೆಯಿದೆ.

ದೇವುತನಿ ಏಕಾದಶಿಯ ಮರುದಿನ ಅಂದರೆ ಕಾರ್ತಿಕ ಶುಕ್ಲ ದ್ವಾದಶಿಯಂದು ತಾಯಿ ತುಳಸಿಯು ವಿಷ್ಣುವಿನ ಶಾಲಿಗ್ರಾಮ ರೂಪವನ್ನು ಮದುವೆಯಾಗುತ್ತಾಳೆ.ಈ ದಿನದಂದು, ಪ್ರತಿಯೊಂದು ಮನೆಯೂ ಹಬ್ಬದ ವಾತಾವರಣದಿಂದ ತುಂಬಿರುತ್ತದೆ.

ತುಳಸಿ ವಿವಾಹ ಸಮಾರಂಭವನ್ನು ಮಾಡುವುದರಿಂದ ಮನೆಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ಬರುತ್ತದೆ ಎಂಬ ನಂಬಿಕೆ ಸನಾತನ ಧರ್ಮದಲ್ಲಿದೆ.

Tulsi wedding : ತುಳಸಿ ವಿವಾಹದ ಶುಭ ಮುಹೂರ್ತ :

ಪಂಚಾಂಗದ ಪ್ರಕಾರ, ತುಳಸಿ ವಿವಾಹವನ್ನು ನವೆಂಬರ್ 2 ರಂದು ಆಚರಿಸಲಾಗುತ್ತದೆ. ಈ ಬಾರಿ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ನವೆಂಬರ್ 2 ರಂದು ಬೆಳಿಗ್ಗೆ 7:31 ಕ್ಕೆ ಪ್ರಾರಂಭವಾಗಿ ನವೆಂಬರ್ 3 ರಂದು ಬೆಳಿಗ್ಗೆ 5:07 ಕ್ಕೆ ಕೊನೆಗೊಳ್ಳುತ್ತದೆ.

ಇದನ್ನೂ ಓದಿ : ಮಲಗುವಾಗ ಈ 5 ವಸ್ತುಗಳನ್ನು ಪಕ್ಕಕ್ಕಿಟ್ಟು ಮಲಗಬೇಡಿ : ಆರ್ಥಿಕ ಸಂಕಷ್ಟ ಎದುರಾಗಬಹುದು

ಈ ಶುಭದಿನದಂದು ನಡೆಯುತ್ತದೆ ತುಳಸಿ ವಿವಾಹ :

ತುಳಸಿ ವಿವಾಹದ ದಿನದವನ್ನು ಅತ್ಯಂತ ಶುಭ ದಿನ ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸ ಶುಕ್ಲ ಪಕ್ಷದ ಪ್ರಕಾಶಮಾನವಾದ ಹದಿನೈದು ದಿನಗಳ ಪೈಕಿ ಹನ್ನೆರಡನೇ ದಿನದಂದು ತುಳಸಿ ವಿವಾಹ ಸಮಾರಂಭವನ್ನು ಆಚರಿಸಲಾಗುತ್ತದೆ. ದೇವುತಾನಿ ಏಕಾದಶಿಯ ದಿನಂದು ಭಗವಾನ್​ ವಿಷ್ಣುವನ್ನು ಹಾಗೂ ತುಳಸಿ ಮಾತೆಯನ್ನು ಪೂಜಿಸುವುದರಿಂದ ಶುಭ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಹೇಗೆ ಮಾಡಬೇಕು ತುಳಸಿ ವಿವಾಹ :

ತುಳಸಿ ವಿವಾಹದ ದಿನವನ್ನು ಸಾಮಾನ್ಯವಾಗಿ ಕರಾವಳಿ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ ಆಚರಿಸಲಾಗುತ್ತದೆ. ಒಂದು ರೀತಿಯಲ್ಲಿ ದೀಪಾವಳಿ ಹಬ್ಬದ ವಾತಾವರಣೇ ಈ ದಿನವೂ ಮನೆಯಲ್ಲಿ ಇರುತ್ತದೆ. ಮನೆಯ ತುಂಬಾ ದೀಪವನ್ನು ಹಚ್ಚಿ, ತುಳಸಿ ಕಟ್ಟೆಯ ಎದುರು ದೊಡ್ಡ ರಂಗೋಲಿ ಹಾಕಿ ತುಳಸಿ ಗಿಡವನ್ನು ಅಲಂಕರಿಸಲಾಗುತ್ತದೆ.

ಇದನ್ನೂ ಓದಿ : ಪ್ರತಿದಿನ ಬೆಳಗ್ಗೆ ಇವಿಷ್ಟು ಕೆಲಸ ಮಾಡಿ ಸಾಕು : ನಿಮ್ಮ ಅದೃಷ್ಟವೇ ಬದಲಾಗುವುದನ್ನು ನೋಡಿ

ತುಳಸಿ ಕಟ್ಟೆಗೆ ನೆಲ್ಲಿಕಾಯಿ ಹಾಗೂ ಹುಣಸೆ ಗಿಡಗಳನ್ನು ಇರಿಸಲಾಗುತ್ತದೆ. ನೆಲ್ಲಿಕಾಯಿ ವಿಷ್ಣುವಿನ ರೂಪ ಎಂಬ ನಂಬಿಕೆ ಈ ಭಾಗದ ಜನರದ್ದು . ಮನೆ ಮಂದಿಯೆಲ್ಲ ಸೇರಿ ಶುಭ ಮುಹೂರ್ತದಲ್ಲಿ ತುಳಸಿ ಮಾತೆಗೆ ಹಾಗೂ ಕಳಶ ರೂಪದಲ್ಲಿರುವ ವಿಷ್ಣುವಿಗೆ ಪೂಜೆ ಮಾಡುತ್ತಾರೆ.

In which Muhurta should Tulsi wedding be celebrated: Here is complete information

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories