ಕೊಳೆಯಾದ ಬಾತ್‌ರೂಮ್ ಸ್ವಚ್ಛ ಮಾಡಲು ಈ ಉಪಾಯ ಬಳಸಿ

ಆರೋಗ್ಯ ಹಾಗೂ ನೈರ್ಮಲ್ಯದ ದೃಷ್ಟಿಯಿಂದ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ.ಅದರಲ್ಲೂ ಬಾತ್ರೂಮ್ ಸ್ವಚ್ಛವಾಗಿರಿಲೇ ಬೇಕು. ಏಕೆಂದರೆ ಅಲ್ಲಿನ ಬ್ಯಾಕ್ಟೀರಿಯಾಗಳಿಂದ ನಮ್ಮ ಆರೋಗ್ಯದಲ್ಲಿ ತೊಂದರೆಯಾಗುತ್ತದೆ. ಕೊಳೆಯಾದ ಬಾತ್ರೂಮ್ ನ್ನು ಸ್ವಚ್ಛಗೊಳಿಸುವುದು ಕಷ್ಟಕರ ಎನ್ನಿಸಬಹುದು. ಆದರೆ ಕ್ರಮಬದ್ಧ ವಿಧಾನಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಅದನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂಬ ಬಗ್ಗೆ ಹಂತ-ಹಂತವಾದ ವಿಸ್ತೃತ ಮಾಹಿತಿ ಇಲ್ಲಿದೆ.
- ಬಾತ್ ರೂಮ್ ನ ಮೇಲ್ಮೈ ತೆರವು ಗೊಳಿಸಿ
ಒಂದು ಟಬ್ ನಲ್ಲಿ ನಿಮ್ಮ ಶಾಂಪೂ, ಕಂಡಿಷನರ್ ಮತ್ತು ಇತರ ಯಾವುದೇ ಉತ್ಪನ್ನಗಳನ್ನು ಸಂಗ್ರಹಿಸಿ ಸಿಂಕ್ ನಿಂದ ವಸ್ತುಗಳನ್ನು ತೆಗೆಯಿರಿ. ಇದರಿಂದ ಸುಲಭವಾಗಿ ಪ್ರತಿಯೊಂದು ಜಾಗವನ್ನೂ ಸ್ವಚ್ಛಗೊಳಿಸಲು ಸಾಧ್ಯ. - ಬಾತ್ ರೂಮ್ ನ ಧೂಳನ್ನು ತೆಗೆಯಿರಿ
ಬಾತ್ ರೂಮ್ ನ ಮೂಲೆ ಮೂಲೆಗಳಲ್ಲಿ ಉಳಿದಿರುವ ಹಾಗೂ ಮೇಲ್ಬಾಗದಲ್ಲಿನ ಜೇಡರ ಬಲೆ, ಬಾಗಿಲಿನ ಹಿಂದೆ ಸ್ವಚ್ಛವಾಗಿ ಗುಡಿಸಿ ಮೈಕೋ ಫೈಬರ್ ಡಸ್ಟರ್ ಅಥವಾ ಬಟ್ಟೆ ಮೂಲಕ ಸ್ವಚ್ಛಗೊಳಿಸಿ. - ಶವರ್ ಅಥವಾ ಟಬ್ ನ್ನು ಸ್ಕ್ರಬ್ ಮಾಡಿ ತೊಳೆವುದು
ಬಾತ್ ರೂಮ್ ಕ್ಲೀನರ್ ಗಳನ್ನು ಎಲ್ಲಾ ಕಡೆ ಹರಡಿ ಸ್ವಲ್ಪ ಸಮಯ ಹಾಗೆ ಬಿಡಿ. ತದನಂತರ ಬ್ರಷ್ ನ ಮೂಲಕ ಎಲ್ಲಾಕಡೆ ಚೆನ್ನಾಗಿ ಸ್ಕ್ರಬ್ ಮಾಡಿ ತೊಳೆಯಿರಿ. ಗಾಜಿನ ಕಿಟಕಿ, ಕನ್ನಡಿಯನ್ನು ಗಾಜಿನ ಕ್ಲೀನರ್ ಬಳಸಿ ಒರೆಸಿ. - ಸಿಂಕ್ ಹಾಗೂ ಇತರೆ ಜಾಗ ಸ್ವಚ್ಛಗೊಳಿಸಿ
ನಲ್ಲಿಗಳು ಬೇಸಿನ್ ಮತ್ತು ಕೌಂಟರ್ ಟಾಪ್ ಗಳ ಮೇಲೆ ಬಾತ್ ರೂಮ್ ಕ್ಲೀನಿಂಗ್ ದ್ರವ ಹಾಕಿ ಸ್ಕ್ರಬ್ ಮಾಡಿ ಹಾಗೇ ಸೋಪ್ ನ ಕೆಲ ಕಲ್ಮಶಗಳು ಸಿಂಕ್ ನಲ್ಲಿ ಉಳಿದಿದ್ದರೆ ಬ್ರಷ್ ಮೂಲಕ ಉಜ್ಜಿ ನಂತರ ನೀರನ್ನು ಸುರಿದು ಬಟ್ಟೆಯಿಂದ ಒರೆಸಿ. - ಶೌಚಾಲಯ ಸ್ವಚ್ಛ ಮಾಡಿ
ಶೌಚಾಲಯ ತೋಳೆಯುವ ಲಿಕ್ವಿಡ್ ಎಲ್ಲಾ ಕಡೆ ಹಾಕಿ ಎಲ್ಲಾಕಡೆ ಬ್ರಷ್ ಮೂಲಕ ಚೆನ್ನಾಗಿ ಉಜ್ಜಿ ತೊಳೆಯಿರಿ ನಂತರ ನೀರು ಸುರಿದು ಸ್ವಚ್ಛಗೊಳಿಸಿ. - ಬಾತ್ ರೂಮ್ ನ ನೆಲ
ಒಂದು ಟಬ್ ನಲ್ಲಿ ಬೆಚ್ಚನೆ ನೀರಿನೊಂದಿಗೆ ಕ್ಲೀನರ್ ನ್ನು ಸೇರಿಸಿ ಮಾಪ್ ನ ಸಹಾಯದಿಂದ ಸ್ಕ್ರಬ್ ಮಾಡಿ ನಂತರ ನೀರನ್ನು ಸುರಿದು ಸ್ವಚ್ಛಗೊಳಿಸಿ. - ನೀವು ಮೊದಲೇ ತೆರವು ಮಾಡಿದ ವಸ್ತುಗಳನ್ನು ಪುನಃ ಜೋಡಿಸುವ ಮೊದಲು ಅವುಗಳನ್ನು ಒದ್ದೆ ಬಟ್ಟೆಯಿಂದ ಒರೆಸಿ ವ್ಯವಸ್ಥಿತವಾಗಿ ಜೋಡಿಸಿ.
- ದಿನನಿತ್ಯ ಬಾತ್ ರೂಮ್ ಬಳಕೆ ನಂತರ ಮೇಲ್ಮೈ ಒರೆಸಿ. ಹಾಗೂ ಕಲ್ಮಶ ತಪ್ಪಿಸಲು ಡ್ರೈನ್ ಕವರ್ ಬಳಸಿ ಇದರಿಂದ ಕಲೆಗಳನ್ನು ನಿಯಮಿತವಾಗಿ ತಡೆಯಬಹುದು.
- ಟೈಲ್ಸ ಗಳಲ್ಲಿ ಸಂಗ್ರಹವಾದ ಕೊಳೆಯನ್ನು ನೀರಿನೊಂದಿಗೆ ಅಡಿಗೆ ಸೋಡಾ ಬೆರೆಸಿ ಈ ಮಿಶ್ರಣದಿಂದ ಕಲೆ ತೆಗೆಯಬಹುದು.
ಈ ಎಲ್ಲ ವಿಧಾನಗಳ ಮೂಲಕ ಸುಲಭವಾಗಿ ಬಾತ್ ರೂಮ್ ನ್ನು ಸ್ವಚ್ಛಗೊಳಿಸಬಹುದು.



