ರಾಜೀವ ಗಾಂಧಿ – ಜನಾರ್ದನ ಪೂಜಾರಿಗೆ ಜಯಲಲಿತಾ ಬಡಿಸಿದ್ಯಾಕೆ ಖಾರದ ಊಟ….! Inside Politics

Inside Politics : ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಮಾಜಿ ಪ್ರಧಾನಿ ರಾಜೀವ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವರ ಜನಾರ್ದನ ಪೂಜಾರಿ ಅವರಿಗೆ ಖಾರದ ಊಟ ಬಡಿಸಿದ್ದರು. ಕೋಪದಲ್ಲಿ ಜಯಲಲಿತಾ ಖಾರದ ಊಟ ಉಣಬಡಿಸಿದ್ದರು. ಹಾಗಾದ್ರೆ ಜನಾರ್ಧನ ಪೂಜಾರಿ ಅವರು ಜಯಲಲಿತಾಗೆ ಕೋಪ ತರಿಸಿದ್ದು ಯಾಕೆ ಅನ್ನೋ ಇಂಟರಸ್ಟಿಂಗ್‌ ಸ್ಟೋರಿ ಇಲ್ಲಿದೆ.

ಕರಾವಳಿಯ ರಾಜಕೀಯದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಕಾಂಗ್ರೆಸ್‌ ನಾಯಕರಲ್ಲಿ ಜನಾರ್ದನ ಪೂಜಾರಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಗಾಂಧಿ ಪರಿವಾರದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅಂದಿನ ಇಂದಿರಾ ಗಾಂಧಿಯಿಂದ ಹಿಡಿದು ಇಂದಿನ ಸೋನಿಯಾ ಗಾಂಧಿಯವರೆಗೂ ಜನಾರ್ದನ ಪೂಜಾರಿ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

ಜನಾರ್ದನ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ದೀರ್ಘ ಕಾಲದವರೆಗೆ ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದವರು. ಇಂದು ಸಕ್ರೀಯ ರಾಜಕಾರಣದಿಂದ ನೇಪಥ್ಯಕ್ಕೆ ಸರಿದಿದ್ದರೂ ಕೂಡ ರಾಷ್ಟ್ರ ರಾಜಕಾರಣದಲ್ಲಿಯೂ ಇಂದಿಗೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಎಂತಹಾ ಘಟಾನುಘಟಿ ನಾಯಕರೇ ಇದ್ರು ಕೂಡ ಜನಾರ್ದನ ಪೂಜಾರಿ ಅವರ ಮುಂದೆ ಮಾತಿಗೆ ನಿಲ್ಲುವುದಕ್ಕೆ ಭಯ ಪಡ್ತಾರೆ.

1997ರಲ್ಲಿ ಮೊದಲ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ 1980, 1984 ಹಾಗೂ 1989ರಲ್ಲಿ ಸತತ 4 ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಜನಾರ್ದನ ಪೂಜಾರಿ ಅವರು ಮೊದಲ ಬಾರಿಗೆ ಸಂಸದರಾದ ಸಂದರ್ಭದಲ್ಲಿ ದೇಶದಲ್ಲಿ ಕಾಂಗ್ರೆಸ್‌ ಸರಕಾರ ಸೋಲನ್ನು ಕಂಡು ಮೊರಾರ್ಜಿ ದೇಸಾಯಿ ಅವರ ನೇತೃತ್ವದ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು.

ಇದನ್ನೂ ಓದಿ : ಶೀಘ್ರದಲ್ಲೇ ಡಿಕೆ ಶಿವಕುಮಾರ್‌ ಈ ರಾಜ್ಯದ ಸಿಎಂ : ತುಳುನಾಡಿನ ದೈವದ ನುಡಿ

ಆದರೆ 1982ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಫುಜಾರಿ ಅವರು ಮರು ಆಯ್ಕೆ ಆಗ್ತಾರೆ. ಆಗ ಕೇಂದ್ರದಲ್ಲಿ ಇಂದಿರಾಗಾಂಧಿ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿತ್ತು. ಎರಡನೇ ಬಾರಿಗೆ ಆಯ್ಕೆಯಾಗಿದ್ದರೂ ಕೂಡ ಜನಾರ್ದನ ಪೂಜಾರಿ ಅವರಿಗೆ ಇಂದಿರಾ ಗಾಂಧಿ ಅವರ ಸಂಪುಟದಲ್ಲಿ ಸಚಿವರಾಗುವ ಅವಕಾಶ ದೊರಕಿತ್ತು. 1982 ರಿಂದ 1984ರವರೆಗೆ ಕೇಂದ್ರ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಅತ್ಯಂತ ಕಡಿಮೆ ವಯಸ್ಸಿನಲ್ಲೇ ಜನಾರ್ದನ ಪೂಜಾರಿ ಅವರಿಗೆ ಸಚಿವ ಸ್ಥಾನದ ಪಟ್ಟ

ಹಣಕಾಸು ಸಚಿವರಷ್ಟೇ ಅಲ್ಲಾ ಕೇಂದ್ರ ಗ್ರಾಮೀಣಾಭಿವೃದ್ದಿ ರಾಜ್ಯ ಸಚಿವರಾಗಿಯೂ ಜನಾರ್ದನ ಪೂಜಾರಿ ಅವರು ಕೆಲಸ ಮಾಡಿದ್ದಾರೆ. 1991ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರು ಬಿಜೆಪಿಯ ಧನಂಜಯ ಕುಮಾರ್‌ ಅವರ ವಿರುದ್ದ ಸೋಲನ್ನು ಕಾಣುತ್ತಾರೆ. 1994ರಲ್ಲಿ ಕಾಂಗ್ರೆಸ್‌ ಪಕ್ಷ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುತ್ತದೆ. 2008ರ ವರೆಗೆ ಅಂದ್ರೆ ನಾಲ್ಕು ಬಾರಿ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಗಾಂಧಿ ಪರಿವಾರದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಜನಾರ್ದನ ಪೂಜಾರಿ ಅವರಿಗೆ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶ ದೊರಕಿತ್ತು. ಆದರೂ ಜನಾರ್ದನ ಪೂಜಾರಿ ಅವರು ಕರ್ನಾಟಕದ ಮುಖ್ಯಮಂತ್ರಿ ಆಗೋದಕ್ಕೆ ಒಪ್ಪಲೇ ಇಲ್ಲ.

ಅದ್ರಲ್ಲೂ ಹಣಕಾಸು ಸಚಿವರಾಗಿದ್ದ ವೇಳೆಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗಾಗಿ ಸಹಾಯ ಮಾಡುವ ಸಲುವಾಗಿ ಲೋನ್‌ ಮೇಳವನ್ನು ಆಯೋಜಿಸಿದ್ದರು. ಬ್ಯಾಂಕುಗಳು ಆಗ ಜನರ ಬಳಿಗೆ ಬರುವಂತೆ ಮಾಡಿದ ಕೀರ್ತಿ ಜನಾರ್ದನ ಅವರಿಗೆ ಸಲ್ಲುತ್ತದೆ. ಜನಾರ್ದನ ಪೂಜಾರಿ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆಯುತ್ತೆ. ಜನಾರ್ದನ ಪೂಜಾರಿ ಅವರು ತಮ್ಮ ಆತ್ಮಕಥನದಲ್ಲಿಯೂ ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದಜನಾರ್ದನ ಪೂಜಾರಿ, ಅವರ ರಾಜಕೀಯ ಜೀವನದ ಇತಿಹಾಸದ ಪುಟಗಳಲ್ಲಿ ಬಹಳಷ್ಟು ಗಂಭೀರವಾದ ಸ್ವಾರಸ್ಯಕರವಾದ ಘಟನೆಗಳು ನಡೆದಿದೆ. ಜನಾರ್ದನ ಪೂಜಾರಿ ಎಂದರೆ ಖಡಕ್ ನಡೆ ನುಡಿ, ಖಡಕ್‌ ಮಾತುಗಳು.ಇಂತಹ ಜನಾರ್ಧನ ಪೂಜಾರಿ ಅವರು 1991ರ ಲೋಕಸಭಾ ಚುನಾವಣೆ ನಡೆಯುತ್ತಿತ್ತು.

ಇದನ್ನೂ ಓದಿ : ಆರ್‌ಎಸ್‌ಎಸ್‌ ನಿರ್ಬಂಧ : ಕಾಂಗ್ರೆಸ್‌ ಸರಕಾರಕ್ಕೆ ಸಡ್ಡು ಹೊಡೆಯಲು ಬಂದ್ರು ಮೋಹನ್‌ ಭಾಗವತ್‌

ಆಗ ಎಐಸಿಸಿ ಅಧ್ಯಕ್ಷರಾಗಿದ್ದವರು ರಾಜೀವ ಗಾಂಧಿ, ಜನಾರ್ದನ ಪೂಜಾರಿ ಅವರು ಎಪ್ರೀಲ್‌ 17ರಂದು ರಾಜೀವ ಗಾಂಧಿ ಅವರ ಜೊತೆಗೆ ಚೆನ್ನೈಗೆ ತೆರಳಿದ್ದರು. AIDMK ಜೊತೆ ಕಾಂಗ್ರೆಸ್‌ ಮೈತ್ರಿ ಮಾತುಕತೆ ನಡೆಸಬೇಕಾಗಿತ್ತು. ಅಂದು ಎಐಎಡಿಎಂಕೆ ಅಧ್ಯಕ್ಷೆಯಾಗಿದ್ದವರು ಜಯಲಲಿತಾ. ರಾಜೀವ ಗಾಂಧಿ ಹಾಗೂ ಜನಾರ್ದನ ಪೂಜಾರಿ ಅವರಿಗಾಗಿ ಜಯಲಲಿತ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಜಯಲಲಿತಾ ಅವರು ಇಬ್ಬರಿಗೂ ಕೂಡ ಖಾರದ ಊಟವನ್ನು ಉಣಬಡಿಸಿದ್ದರು. ಜಯಲಲಿತಾ ಅವರು ಹಾಕಿಸಿದ್ದ ಊಟ ಎಷ್ಟು ಖಾರವಾಗಿತ್ತು ಅನ್ನೋದನ್ನು ಸ್ವತಃ ಜನಾರ್ದನ ಪೂಜಾರಿ ಅವರೇ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.

ಜಯಲಲಿತಾ ತೆರಿಗೆ ಬಾಕಿ ಬಹಿರಂಗ ಪಡಿಸಿದ್ದ ಜನಾರ್ದನ ಪೂಜಾರಿ

ಜನಾರ್ದನ ಪೂಜಾರಿ ಅವರಿಗೆ ಖಾರದ ಊಟ ಬಡಿಸೋದಕ್ಕೂ ಒಂದು ಕಾರಣವಿತ್ತು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ತೆರಿಗೆ ಬಾಕಿಯ ಕುರಿತು ಜನಾರ್ದನ ಪೂಜಾರಿ ಬಹಿರಂಗಪಡಿಸಿದ್ದರು. ಸಹಜವಾಗಿಯೇ ಜಯಲಲಿತಾ ಅವರಿಗೆ ಜನಾರ್ದನ ಪೂಜಾರಿ ಅವರ ಮೇಲೆ ಅಸಮಧಾನ ಇತ್ತು.

ರಾಜೀವ ಗಾಂಧಿ ಹಾಗೂ ಜನಾರ್ದನ ಪೂಜಾರಿ ಅವರು ಊಟ ಮಾಡುವುದನ್ನು ಗಮನಿಸಿದ ಜಯಲಲಿತಾ ಅವರು ಪೂಜಾರಿ ಅವರು ಏನನ್ನೂ ತಿನ್ನುತ್ತಿಲ್ಲ ಅಂತಾ ರಾಜೀವ ಗಾಂಧಿ ಅವರ ಬಳಿಯಲ್ಲಿ ಹೇಳಿದ್ದಾರೆ. ಆಗ ರಾಜೀವ ಗಾಂಧಿ ಅವರು ಪೂಜಾರಿ ಊಟ ಮಾಡುವುದೇ ಕಡಿಮೆ ಅಂತ ಹಾಸ್ಯ ಚಟಾಕಿ ಹಾರಿಸಿದ್ರು.

ಊಟದ ನಂತರ ಜನಾರ್ದನ ಪೂಜಾರಿ ಹಾಗೂ ರಾಜೀವ ಗಾಂಧಿ ಅವರು ಮಾತಿಗೆ ಇಳಿಯುತ್ತಾರೆ. ಈ ವೇಳೆಯಲ್ಲಿ ನೀವು ಜಯಲಲಿತಾ ಅವರ ಬಗ್ಗೆ ಸುಳ್ಳು ಮಾಹಿತಿ ಬಹಿರಂಗ ಪಡಿಸಿದ್ದೀರಿ ಅಂತಾ ಮಾಹಿತಿ ಇದೆ ಅಂತಾ ಜನಾರ್ದನ ಪೂಜಾರಿ ಅವರಿಗೆ ರಾಜೀವ ಗಾಂಧಿ ಹೇಳಿದ್ದಾರೆ. ಹಾಗೇನಿಲ್ಲ ನನ್ನ ಬಳಿಯಲ್ಲಿ ಸೂಕ್ತ ದಾಖಲೆ ಇದೆ ಎಂದಿದ್ದಾರೆ. ನಿಮ್ಮ ಬಳಿಯಲ್ಲಿ ದಾಖಲೆ ದಾಖಲೆ ಇದ್ರೆ ಖಂಡಿತಾವಾಗಿಯೂ ಮುಂದುವರಿಯಿರಿ ಎಂದು ಜನಾರ್ದನ ಪೂಜಾರಿ ಅವರ ಬೆನ್ನತಟ್ಟಿದ್ದರು ರಾಜೀವ ಗಾಂಧಿ.

ಜನಾರ್ದನ ಅವರ ಮೇಲೆ ತಮಗಿದ್ದ ಅಸಮಾಧಾನವನ್ನು ತೋರ್ಪಡಿಸಲು ಜಯಲಲಿತಾ ಅವರು ರಾಜೀವ ಗಾಂಧಿ ಹಾಗೂ ಜನಾರ್ದನ ಪೂಜಾರಿ ಅವರಿಗೆ ಖಾರದ ಊಟ ಬಡಿಸಿದ್ದರು ಅನ್ನೋದು ಭಾರತದ ರಾಜಕೀಯ ಇತಿಹಾಸದಲ್ಲಿಯೇ ಸ್ವಾರಸ್ಯಕರ ಘಟನೆಯಾಗಿ ಉಳಿದುಕೊಂಡಿದೆ. ರಾಜಕೀಯದ ಮತ್ತೊಂದು ಸ್ವಾರಸ್ಯಕರ ಘಟನೆಯನ್ನು ನಿಮ್ಮ ಮುಂದೆ ಇಡ್ತೇವೆ. ಸುದ್ದಿ ಜಗತ್ತಿನ ಇಂಟರಸ್ಟಿಂಗ್‌ ಸಮಾಚಾರವನ್ನು ನೋಡಲು ನಮ್ಮ ನ್ಯೂಸ್‌ನೆಕ್ಸ್ಟ್‌ ಡಿಜಿಟಲ್‌ ವಾಹಿನಿಯನ್ನು ಸಬ್‌ಸ್ಕೈಬ್‌ ಮಾಡಿ.

Jayalalithaa served spicy food to Janardhan Poojary and Rajiv Gandhi – Inside Politics

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories