MLA Satish Sails : ಬೇಲಿಕೇರಿ ಅದಿರು ಪ್ರಕರಣ : ಕಾಂಗ್ರೆಸ್​ ಶಾಸಕ ಸತೀಶ್​ ಸೈಲ್ 21 ಕೋಟಿ ಆಸ್ತಿ ಜಪ್ತಿ

MLA Satish Sails : ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಾಟ ಮತ್ತು ಮಾರಾಟ ಮಾಡಿದ ಪ್ರಕರಣದ ಅಡಿಯಲ್ಲಿ ಕಾಂಗ್ರೆಸ್​ ಶಾಸಕ ಸತೀಶ್ ಸೈಲ್ (MLA Satish Sails)​ಗೆ ಸಂಕಷ್ಟ ಎದುರಾಗಿದೆ.

ಈ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ್​ ಸೈಲ್​ಗೆ ಸೇರಿದ 21 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಇಡಿಯಿಂದ ಜಪ್ತಿ ಮಾಡಲಾದ ಆಸ್ತಿಯಲ್ಲಿ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್​ ಪ್ರೈವೇಟ್​ ಲಿಮಿಟೆಡ್​ ಹೆಸರಿನಲ್ಲಿ ಗೋವಾದಲ್ಲಿರುವ ಕೃಷಿ ಭೂಮಿಗಳು ಮತ್ತು ವಾಣಿಜ್ಯ ಕಟ್ಟಡಗಳು ಸೇರಿವೆ.

ಇನ್ನು ಈ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಸತೀಶ್​ ಸೈಲ್​ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂಬ ಕಾರಣದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್​ ಶಾಸಕನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್​ ಕೂಡ ಜಾರಿ ಮಾಡಿದೆ.

Also Read : ಶೀಘ್ರದಲ್ಲೇ ಡಿಕೆ ಶಿವಕುಮಾರ್‌ ಈ ರಾಜ್ಯದ ಸಿಎಂ : ತುಳುನಾಡಿನ ದೈವದ ಭವಿಷ್ಯ

ಈ ಪ್ರಕರಣದ ವಿಚಾರಣೆಗೆ ಎಲ್ಲಾ ಸಾಕ್ಷಿಗಳು ಹಾಜರರಿರುವಾಗ ಕೇವಲ ಸತೀಶ್​ ಸೈಲ್​ ಮಾತ್ರ ಗೈರಾಗುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಈ ಆದೇಶ ಹೊರಡಿಸಿತ್ತು.

ಅರಣ್ಯ ಇಲಾಖೆ ಅಧಿಕಾರಿಗಳು ಬೇಲೆಕೇರಿ ಬಂದರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಅದಿರು ಪತ್ತೆಯಾಗಿತ್ತು. ಈ ಕಬ್ಬಿಣದ ಅದಿರು ಸೂಕ್ತ ಪರವಾನಿಗೆ ಹೊಂದಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು.

ಈ ಸಂದರ್ಭದಲ್ಲಿ ಸತೀಶ್​ ಸೈಲ್​ ತಾವು ವಿವಿಧ ಪೂರೈಕೆದಾರರಿಗೆ 1.5 ಲಕ್ಷ ಮೆಟ್ರಿಕ್​ ಟನ್​ ತೂಕದ ಅದಿರು ಖರೀದಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅಲ್ಲದೇ ಬಂದರು ಸಂರಕ್ಷಣಾ ಅಧಿಕಾರಿ ಜೊತೆ ಸೇರಿ ಕೊಲಂಬಿಯಾ ಮತ್ತು MV ಮ್ಯಾಂಡರಿನ್ ಹಾರ್ವೆಸ್ಟ್‌ನಂತಹ ಹಡಗುಗಳಲ್ಲಿ ಕಬ್ಬಿಣದ ಅದಿರುಗಳನ್ನು ಚೀನಾಗೆ ರಫ್ತು ಮಾಡಿದ್ದರು ಎಂದು ಇಡಿ ತಿಳಿಸಿತ್ತು.

Also Read : ಗೃಹಲಕ್ಷ್ಮೀ ಯೋಜನೆ : ಗೃಹಿಣಿಯರಿಗೆ ಭರ್ಜರಿ ಗುಡ್‌ನ್ಯೂಸ್‌

Belikeri case Congress MLA Satish Sails assets worth Rs 21 crore seized ED

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories