ಬೇರು ಸಹಿತ ಕಿತ್ತು ಹಾಕುತ್ತೇವೆ’ : ದೆಹಲಿ ಸ್ಫೋಟದ ಹಿಂದಿನ ರೂವಾರಿಗಳಿಗೆ ಪ್ರಧಾನಿ ಮೋದಿ ಖಡಕ್​ ವಾರ್ನಿಂಗ್​

Delhi blast: ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಸಮೀಪ ನಡೆದ ಭೀಕರ ಕಾರು ಸ್ಫೋಟದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಚಿಕಿತ್ಸೆ ಒದಗಿಸಲಾಗುತ್ತಿದೆ. ದೆಹಲಿಯಲ್ಲಿ ಸಂಭವಿಸಿದ ಈ ದುರಂತದ ಬಳಿಕ ದೇಶಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ. ಸ್ಫೋಟ ಪ್ರಕರಣವು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಈ ಎಲ್ಲದರ ನಡುವೆ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮಾಡಿ ಈ ಘಟನೆ ಸಂಬಂಧ ಅಲ್ಲಿಂದಲೇ ಮಾತನಾಡಿದ್ದು ಸ್ಫೋಟದ ಹಿಂದಿರುವ ದುಷ್ಕರ್ಮಿಗಳಿಗೆ ಖಡಕ್​ ಸಂದೇಶ ರವಾನಿಸಿದ್ದಾರೆ.

ಭೂತಾನ್​ ಪ್ರವಾಸದ ನಡುವೆಯೇ ಅಲ್ಲಿಂದಲೇ ಈ ವಿಚಾರವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದುರಂತದಲ್ಲಿ ಮಡಿದ ಅಮಾಯಕರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಈ ಘಟನೆಯ ಹಿಂದಿನ ರೂವಾರಿಗಳಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ.

ಭೂತಾನ್​ಗೆ ನಾನು ಭಾರವಾದ ಹೃದಯದೊಂದಿಗೆ ಪ್ರಯಾಣಿಸಿದ್ದೇನೆ. ದೆಹಲಿಯಲ್ಲಿ ನಿನ್ನೆ ಸಂಭವಿಸಿದ ಘಟನೆ ಆಘಾತಕಾರಿ. ಪ್ರೀತಿಪಾತ್ರರನ್ನು ಕಳೆದುಕೊಂಡ ಆ ಕುಟುಂಬಗಳ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ದುಃಖದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳ ಜೊತೆ ಇಡೀ ದೇಶವೇ ನಿಂತಿದೆ ಎಂದು ಹೇಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

Also Read: ದೆಹಲಿಯಲ್ಲಿ ನಡೆದಿರುವುದು ಆತ್ಮಾಹುತಿ ದಾಳಿ ಶಂಕೆ: 3 ಗಂಟೆಗಳ ಕಾಲ ಕಾರಿನಿಂದಿಳಿಯದೇ ಕುಳಿತಿದ್ದ ಚಾಲಕ

ರಾತ್ರಿಯಿಂದಲೇ ವೈಯಕ್ತಿಕವಾಗಿ ಪರಿಸ್ಥಿತಿ ಅವಲೋಕನ ಮಾಡುತ್ತಿರುವೆ. ಭದ್ರತಾ ಸಂಸ್ಥೆಗಳು ಘಟನೆಯ ಆಳಕ್ಕಿಳಿದು ತನಿಖೆ ನಡೆಸುತ್ತಿವೆ. ಎಲ್ಲಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವೆ. ಈ ಘಟನೆಯ ಹಿಂದೆ ಯಾರಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಂತೂ ನಿಶ್ಚಿತ. ಒಬ್ಬೊಬ್ಬರನ್ನೂ ಬಿಡುವುದಿಲ್ಲ, ಬೇರು ಸಹಿತ ಕಿತ್ತು ಹಾಕುತ್ತೇವೆ ಎಂದು ಗುಡುಗಿದ್ದಾರೆ.

ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಹರಿಯಾಣದ ಫರಿದಾಬಾದ್​ ಸೆಕ್ಟರ್​ 37ರ ಸೆಕೆಂಡ್​ ಗಹ್ಯಾಂಡ್​ ಕಾರು ಡೀಲರ್​ನಿಂದ ಈ ಹುಂಡೈ i20 ಕಾರು ಖರೀದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಜೊತೆಯಲ್ಲಿ ಫರೀದಾಬಾದ್​ನಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ದೆಹಲಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸರು ತನಿಖೆ ಕೂಡ ಚುರುಕುಗೊಳಿಸಿದ್ದು ಶೀಘ್ರದಲ್ಲೇ ಆರೋಪಿಗಳು ಪತ್ತೆಯಾಗುವ ವಿಶ್ವಾಸವಿದೆ.

Also Read: ದೆಹಲಿ ಕೆಂಪುಕೋಟೆ ಬಳಿ ಕಾರು ಸ್ಫೋಟ : ಸ್ಥಳಕ್ಕೆ ಎನ್‌ಐಎ- ಹೈ ಅಲರ್ಟ್‌ ಘೋಷಣೆ

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories