World tallest Lord Ram Statue : ವಿಶ್ವದ ಅತೀ ಎತ್ತರದ ಶ್ರೀರಾಮ ವಿಗ್ರಹ : ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ

World tallest Lord Ram Statue : ಗೋವಾ : ಗೋವಾದ ಕಾಂಕೋಣ್ ನಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಲಾದ ವಿಶ್ವದ ಅತೀ ಎತ್ತರದ 77 ಅಡಿ ಎತ್ತರದ ಶ್ರೀರಾಮನ ಮೂರ್ತಿಯನ್ನು ಪ್ರಧಾನಿ ಮೋದಿ ಅವರು ಇಂದು ಲೋಕಾರ್ಪಣೆ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಬರೋಬ್ಬರಿ 77 ಅಡಿ ಎತ್ತರದ ಕಂಚಿನ ರಾಮನ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಶಿಲ್ಪಿರಾಮ್ ವಿ. ಸೂತಾರ್ (ಸ್ಟ್ಯಾಚೂ ಆಫ್ ಯೂನಿಟಿಯ ವಿನ್ಯಾಸಗಾರರು ಈ ಮೂರ್ತಿಯನ್ನು ನಿರ್ಮಾಣ ಮಾಡಿದ್ದರು.

ರಾಮನ ಮೂರ್ತಿ ಅನಾವರಣದ ಜೊತೆಗೆ, ಪ್ರಧಾನಿ ಮೋದಿ ಅವರು ಮಠದ ಆವರಣದಲ್ಲಿ ನಿರ್ಮಿಸಲಾದ ಸುಂದರವಾದ ರಾಮಾಯಣ ಥೀಮ್ ಪಾರ್ಕ್ ಉದ್ಯಾನವನವನ್ನೂ ಉದ್ಘಾಟಿಸಿದರು.
ಮಠದ 550ನೇ ವರ್ಷಾಚರಣೆಯ ಪ್ರಯುಕ್ತ ಪ್ರಧಾನಿ ಮೋದಿ ಅವರು ವಿಶೇಷ ಅಂಚೆ ಚೀಟಿ (Special Postage Stamp) ಮತ್ತು ಸ್ಮರಣಾರ್ಥ ನಾಣ್ಯವನ್ನೂ (Commemorative Coin) ಬಿಡುಗಡೆ ಮಾಡಿ ಮಠದ ಕೊಡುಗೆಯನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು. ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿಹಿಡಿದರು. “ರಾಮ ಎಂಬುದು ಕೇವಲ ಹೆಸರಲ್ಲ, ಅದು ಭಾರತದ ಸಂಸ್ಕೃತಿಯ ಆತ್ಮ.
ಗೋವಾದ ಈ ಪುಣ್ಯಭೂಮಿಯಲ್ಲಿ ರಾಮ ಮಂದಿರದ ತರುವಾಯ ಅತೀ ಎತ್ತರದ ರಾಮನ ವಿಗ್ರಹ ಅನಾವರಣವಾಗುತ್ತಿರುವುದು ದೇಶದ ಪಾಲಿಗೆ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಮಠದ ಸ್ವಚ್ಛತೆ, ಸೇವಾ ಕಾರ್ಯಗಳು ಮತ್ತು ಆಧ್ಯಾತ್ಮಿಕ ಜಾಗೃತಿ ಕುರಿತ ಕಾರ್ಯಗಳನ್ನು ಮೋದಿ ಶ್ಲಾಘಿಸಿದರು.

ದಕ್ಷಿಣ ಭಾರತದ ಅಯೋಧ್ಯೆ..!
ಪರ್ತಗಾಳಿ ಮಠದಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮನ ಮೂರ್ತಿಯ ಮೂಲಕ ಇದನ್ನು ದಕ್ಷಿಣ ಭಾರತ ಅಯೋಧ್ಯೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ರಾಮ ವಿಗ್ರಹದ ಪ್ರತಿಷ್ಠಾಪನೆಯು ಮಠದ ವಾರ್ಷಿಕೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ದಕ್ಷಿಣ ಭಾರತವನ್ನು ಅಯೋಧ್ಯೆಯಂತೆ ಭಕ್ತಿ ಕೇಂದ್ರವನ್ನಾಗಿಸುವ ಗುರಿಯೊಂದಿಗೆ ಮಠವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಠದ ಭಕ್ತರು ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ 550 ಕೋಟಿ ರಾಮನಾಮ ಜಪ ಮಂತ್ರಗಳನ್ನು ಬರೆದು ಪೂರ್ಣಗೊಳಿಸಿದ್ದಾರೆ. ಈ ಮಂತ್ರಗಳನ್ನು ವಿಗ್ರಹದ ಆವರಣದಲ್ಲಿ ಸುರಕ್ಷಿತವಾಗಿ ಇರಿಸಲಾಗುವುದು ಎಂದು ತಿಳಿದು ಬಂದಿದೆ.
11 ದಿನಗಳ ‘ಸಾರ್ಧ ಪಂಚಸ್ತಮಾನೋತ್ಸವ’ಮಠದ 550ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ಒಟ್ಟು 11 ದಿನಗಳ ಕಾಲ ಈ ಬೃಹತ್ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಹವನ, ಪಾರಾಯಣ ಯಜ್ಞ, ಧರ್ಮ ಸಭೆಗಳು ಹಾಗೂ ದೇಶದ ಖ್ಯಾತ ಕಲಾವಿದರಿಂದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
World tallest Lord Ram Statue Unveiled Prime Minister Narendra Modi Inaugurates Shree Saunsthan Gokarn Partagali Jeevottam Math



