ಜನಸಾಮಾನ್ಯರಿಗೆ ಬೆಲೆ ಏರಿಕೆ ಡಬಲ್ ಶಾಕ್: ಔಷಧಿ ದರ ಏರಿಕೆ ಜೊತೆ ಸಿಎನ್ಜಿ ದರವೂ ಹೆಚ್ಚಳ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಮೇಲಿಂದ ಮೇಲೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ದಿನಬಳಕೆಯ ಒಂದೊಂದೇ ವಸ್ತುಗಳ ದರ ಏರಿಕೆಯಾಗುತ್ತಲೇ ಇದ್ದು ಶ್ರೀ ಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ ಈ ಸಾಲಿಗೆ ಜೀವ ರಕ್ಷಕ ಔಷಧಿಗಳು ಸೇರಿವೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಮೇಲಿಂದ ಮೇಲೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ದಿನಬಳಕೆಯ ಒಂದೊಂದೇ ವಸ್ತುಗಳ ದರ ಏರಿಕೆಯಾಗುತ್ತಲೇ ಇದ್ದು ಶ್ರೀ ಸಾಮಾನ್ಯರು ಕಂಗಾಲಾಗಿದ್ದಾರೆ. ಇದೀಗ ಈ ಸಾಲಿಗೆ ಜೀವ ರಕ್ಷಕ ಔಷಧಿಗಳು ಸೇರಿವೆ. ಈ ಸಂಬಂಧ ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ಮಾಹಿತಿ ನೀಡಿದೆ.
ಮಾತ್ರೆಗಳ ತಯಾರಿಕೆಗೆ ಪೆಟ್ರೋ ಕೆಮಿಕಲ್ಸ್ ಕಚ್ಛಾವಸ್ತುವಿನ ಅಗತ್ಯತೆ ಇರುತ್ತದೆ. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯತ್ತಿರುವ ಯುದ್ಧದಿಂದಾಗಿ ಈ ಕಚ್ಛಾವಸ್ತುಗಳ ಪೂರೈಕೆಯಲ್ಲಿ ತೀವ್ರ ಏರುಪೇರು ಕಂಡು ಬರುತ್ತಿದೆ. ಹೀಗಾಗಿ ಶೀತ, ಜ್ವರ ಸೇರಿದಂತೆ ವಿವಿಧ ಔಷಧಿಗಳ ಮೇಲೆ ಸರಾಸರಿ 15 ರಿಂದ 20 ಪರ್ಸೆಂಟ್ ದರ ಏರಿಕೆ ಮಾಡಲಾಗಿದೆ. ಮುಂಬರುವ ಬ್ಯಾಚ್ನ ಔಷಧಿಗಳಲ್ಲಿ ದರ ಏರಿಕೆಯನ್ನು ಕಾಣಬಹುದು ಎಂದು ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಶನ್ ಹೇಳಿದೆ.
Also Read: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ: ಸಿಡಿಲಿಗೆ ಮೂವರು ಬಲಿ, ಶಿವಮೊಗ್ಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತ
ಇನ್ನು ಇದರ ಜೊತೆಯಲ್ಲಿ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ ಎಂಬಂತೆ ಸಾಂದ್ರೀಕೃತ ನೈಸರ್ಗಿಕ ಅನಿಲ ಅಂದರೆ ಸಿಎನ್ಜಿ ದರವನ್ನು ಪ್ರತಿ ಕೆಜಿಗೆ 1 ರೂಪಾಯಿ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರವು ಭಾನುವಾರದಿಂದಲೇ ಜಾರಿಗೆ ಬಂದಿದೆ. ಗುರುವಾರವಷ್ಟೇ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಲಾಗಿತ್ತು. ಒಂದೇ ವಾರದಲ್ಲಿ ಸಿಎನ್ಜಿ ದರವು ಪ್ರತಿ ಕೆ.ಜಿಗೆ ಒಟ್ಟೂ 3 ರೂಪಾಯಿ ಏರಿಕೆ ಆದಂತಾಗಿದೆ.
Price hike a double shock for the common man Along with the increase in medicine prices CNG prices also increased



