ಎಚ್ಚರ.. ಎಚ್ಚರ..! ರಾಜ್ಯದಲ್ಲಿ ಹೆಚ್ಚಿದ ಇಲಿಜ್ವರ ಆತಂಕ : ಸೋಂಕಿತರ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ

Leptospirosis Scare Udupi : ಬೆಂಗಳೂರು / ಉಡುಪಿ : ರಾಜ್ಯದಲ್ಲಿ ಈ ಬಾರಿ ಲೆಪ್ಟೊಸ್ಪೈರೋಸಿಸ್‌ ಯಾನೆ ಇಲಿ ಜ್ವರದ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕರಾವಳಿ ಜಿಲ್ಲೆಗಳಲ್ಲಿಯೇ ಅತ್ಯಧಿಕ ಪ್ರಕರಣ ದಾಖಲಾಗ್ತಾ ಇರೋದು ಆತಂಕ್ಕೆ ಕಾರಣವಾಗಿದೆ.

ಈ ವರ್ಷ ರಾಜ್ಯದಲ್ಲಿ ಒಟ್ಟೂ 2029 ಇಲಿ ಜ್ವರದ ಪ್ರಕರಣಗಳು ದಾಖಲಾಗಿದೆ.ಇದು ಕಳೆದ ಮೂರು ವರ್ಷಗಳ ಅವಧಿಯಲ್ಲೇ ರಾಜ್ಯದಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ. ಇನ್ನು ಸೋಂಕಿತರ ಪಟ್ಟಿಯಲ್ಲಿ ಸಂಪೂರ್ಣ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದು ಕರಾವಳಿ ಜನತೆಗೆ ಆತಂಕಕ್ಕೆ ಕಾರಣವಾಗಿದೆ.

ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ ನೀಡಿರುವ ವರದಿಯ ಪ್ರಕಾರ, ರಾಜ್ಯದಲ್ಲಿ ಹಿಂದಿನ ವರ್ಷ 1879 ಹಾಗೂ 2023ರಲ್ಲಿ ಇಟ್ಟೂ 1340 ಇಲಿ ಜ್ವರದ ಪ್ರಕರಣಗಳು ದಾಖಲಾಗಿದ್ದವು. ಹಿಂದಿನ ವರ್ಷಗಳ ಇಲಿ ಜ್ವರದ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಈ ಬಾರಿ ಸೋಂಕಿತರ ಪಟ್ಟಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 452 ಪ್ರಕರಣಗಳು ವರದಿಯಾಗಿವೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 200 ಪ್ರಕರಣ ದಾಖಲಾಗಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 372, ಶಿವಮೊಗ್ಗದಲ್ಲಿ 288, ಉತ್ತರ ಕನ್ನಡ ಜಿಲ್ಲೆಯಲ್ಲಿ 250 ಪ್ರಕರಣ ಪತ್ತೆಯಾಗಿದೆ.

ಇಡೀ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ಕರ್ನಟಕದ ಕರಾವಳಿ ಭಾಗದಲ್ಲಿಯೇ ಅತೀ ಹೆಚ್ಚು ಇಲಿಜ್ವರ ಪ್ರಕರಣ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದಲೂ ಕರಾವಳಿ ಜಿಲ್ಲೆಗಳಲ್ಲಿ ಇಲಿಜ್ವರ ಪ್ರಕರಣ ಪತ್ತೆಯಾಗುತ್ತಿದೆ.

ಈ ಕಾಯಿಲೆಗೆ ತುತ್ತಾದ ಪ್ರಾಣಿಗಳ ಮೂತ್ರದಿಂದ ಇಲಿ ಜ್ವರ ಬರುತ್ತದೆ. ನೀರು, ಮಣ್ಣು ಅಥವಾ ಆಹಾರಗಳ ಮೂಲಕ ಮನುಷ್ಯನ ದೇಹಕ್ಕೆ ಈ ಸೋಂಕು ಪ್ರವೇಶಿಸುತ್ತಿದೆ. ಇಲಿ ಜ್ವರ ಸೋಂಕಿಗೆ ತುತ್ತಾದ ವ್ಯಕ್ತಿಗೆ ತೀವ್ರ ತಲೆನೋವು, ಜ್ವರ , ವಾಂತಿ , ಅತಿಸಾರ ಮತ್ತು ಚರ್ಮಗಳಲ್ಲಿ ದದ್ದು ಕಾಣಿಸಿಕೊಳ್ಳುತ್ತದೆ.

Leptospirosis Scare Udupi District Tops Karnataka in Rat Fever Cases

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories