ನಿರ್ಧಾರ ತೆಗೆದುಕೊಳ್ಳಲು ಬರಲ್ವಾ ರಕ್ಷಿತಾಗೆ? ಮನೆಯವರೆಲ್ಲಾ ಮುಗಿಬಿದ್ರು ಚಿಕ್ಕ ಹುಡುಗಿ ಮೇಲೆ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರು ಬಿಗ್ ಬಾಸ್ ಶೋನಲ್ಲಿ ರಕ್ಷಿತಾ ಶೆಟ್ಟಿ ತುಂಬಾ ಫ್ಯಾನ್ಸ್ ಇದ್ದಾರೆ. ಅವಳ ಮಾತು, ಅವಳ ಡ್ಯಾನ್ಸ್, ಅವಳ ನಿರ್ಧಾರ ಎಲ್ಲರಿಗೂ ಇಷ್ಟ ಆಗುತ್ತೆ. ಆದ್ರೆ ಕೆಲವೊಮ್ಮೆ ಓವರ್ ಆಗಿ ಮಾಡ್ತಾರೆ ಎನ್ನುವುದು ಹಲವರ ಅಭಿಪ್ರಾಯ. ಅಲ್ಲದೇ ರಕ್ಷಿತಾ ಶೆಟ್ಟಿಗೆ ನಿರ್ಧಾರ ತೆಗೆದುಕೊಳ್ಳಲು ಬರಲ್ಲ ಎಂದು ಇತರೆ ಸ್ಪರ್ಧಿಗಳ ವಾದ. ಅದಕ್ಕೆ ಈ ವಾರ ರಕ್ಷಿತಾ ಕಳಪೆಗೆ ಹೋಗೋ ಸಾಧ್ಯತೆ ಇದೆ.
ನಿರ್ಧಾರ ತೆಗೆದುಕೊಳ್ಳಲು ಬರಲ್ಲ
ಸರಿಯಾದ ನಿರ್ಧಾರ ತೆಗೆದುಕೊಳ್ಳು ಬಾರದ ವ್ಯಕ್ತಿ ಯಾರೆಂದು ಹೇಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಮನೆಯ ಅರ್ಧದಷ್ಟು ಜನ ರಕ್ಷಿತಾಗೆ ಹೇಳಿದ್ದಾರೆ. ರಕ್ಷಿತಾಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರಲ್ಲ ಎಂದಿದ್ದಾರೆ.
ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲ
ನಾಮಿನೇಟ್ ಮಾಡುವಾಗ ರಕ್ಷಿತಾ ಕೊಟ್ಟ ಕಾರಣ ಇಷ್ಟ ಆಗಲಿಲ್ಲ. ಯಾವುದಕ್ಕೂ ಅರ್ಥ ಇರಲ್ಲ. ರಕ್ಷಿತಾಗೆ ನಿರ್ಧಾರ ತೆಗೆದುಕೊಳ್ಳಲು ಯೋಗ್ಯತೆ ಇಲ್ಲ ಎಂದು ಸ್ಪಂದನಾ ಹೇಳಿದ್ದಾರೆ.
ಸ್ಮಾರ್ಟ್ ಆಟನಾ ರಕ್ಷಿತಾದು?
ಇನ್ನು ಕಾವ್ಯ ಸಹ ಇವರಿಗೆ ಮತ ಹಾಕಿದ್ದು, ಚಿಕ್ಕ ಹುಡುಗಿ ನಿರ್ಧಾರ ತೆಗೆದುಕೊಳ್ಳಲು ಬರಲ್ಲ ಎಂದುಕೊಳ್ಳಬೇಕಾ? ಅಥವಾ ಸ್ಮಾರ್ಟ್ ಗೇಮ್ ಆಡ್ತಾ ಇದಾರಾ ಗೊತ್ತಿಲ್ಲ ಎಂದು ಕಾವ್ಯ ಹೇಳಿದ್ದಾರೆ.
ಅಭಿಷೇಕ್ ಸಹ ಗರಂ
ಪ್ಯಾನಿಕ್ ಆಗಿ ಯಾವುದು ತಲೆಗೆ ಬರುತ್ತೋ ಆ ನಿರ್ಧಾರ ಹೇಳಿ ಬಿಡ್ತಾಳೆ. ಅವಳು ಯೋಚನೆಯನ್ನೇ ಮಾಡಲ್ಲ ಎಂದು ಕ್ಯಾಪ್ಟನ್ ಅಭಿಷೇಕ್ ಹೇಳಿದ್ದಾರೆ.
ಇದನ್ನೂ ಓದಿ: https://kannada.newsnext.live/cinema/rajat-chaitra-enter-bigg-boss-as-wild-card-contests/
ನನ್ನ ನಿರ್ಧಾರವೇ ಸರಿ
ಇನ್ನು ರಕ್ಷಿತಾ ಮನೆಯವರು ಏನೇ ಹೇಳಿದ್ರೂ ತಲೆ ಕೆಡಿಸಿಕೊಂಡಿಲ್ಲ. ನನಗೆ ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕು ಅನ್ನಿಸುತ್ತೋ ಆವಾಗ ತೆಗೆದುಕೊಂಡಿದ್ದೇನೆ. ನನ್ನ ನಿರ್ಧಾರವೇ ಸರಿ ಎಂದು ವಾದಿಸಿದ್ದಾಳೆ.
ಚಿಕ್ಕ ಹುಡುಗಿ ಮೇಲೆ ಮುಗಿ ಬಿದ್ರಾ ಮನೆ ಮಂದಿ?
ರಕ್ಷಿತಾ ಎಲ್ಲರಿಗೂ ನೇರವಾಗಿ ಹೇಳುವುದರಿಂದ ಕೆಲವೊಬ್ಬರಿಗೆ ಇಷ್ಟ ಆಗಲ್ಲ. ಅಲ್ಲದೇ ವಯಸ್ಸಿನಲ್ಲೂ ಚಿಕ್ಕವಳು. ಅದಕ್ಕೆ ಎಲ್ಲರೂ ಆಕೆಯ ಮೇಲೆ ಮುಗಿಬಿದ್ರಾ ಎಂದು ಪ್ರೇಕ್ಷಕರು ಕೇಳ್ತಾ ಇದ್ದಾರೆ.



