Smriti Mandana: ಮದುವೆ ರದ್ದತಿ ಬಳಿಕ ಮೊದಲ ಬಾರಿ ಇನ್ಸ್ಟಾದಲ್ಲಿ ಸ್ಮೃತಿ ಮಂದಾನ ಪ್ರತ್ಯಕ್ಷ : ನಿಶ್ಚಿತಾರ್ಥದ ಉಂಗುರು ಮಾಯ
Smriti Mandana: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂದಾನ ಸದ್ಯ ತಮ್ಮ ಮದುವೆಯ ಕಾರಣದಿಂದಲೇ ಸುದ್ದಿಯಲ್ಲಿದ್ದಾರೆ. ಅದ್ಧೂರಿ ಸಂಗೀತ್, ಮೆಹಂದಿ ಕಾರ್ಯಕ್ರಮಗಳ ಬಳಿಕ ಏಕಾಏಕಿ ಸ್ಮೃತಿ ಮಂದಾನ ಮದುವೆ ರದ್ದಾಗಿತ್ತು. ಸ್ಮೃತಿ ಮಂದಾನ ಮದುವೆಯ ದಿನದಂದೇ ಅವರ ತಂದೆ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾಗಿದ್ದು ಮದುವೆ ಮುಂದೂಡಲ್ಪಟ್ಟಿತ್ತು.
ಪರಸ್ಪರ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದ ಸ್ಮೃತಿ ಮಂದಾನ ಹಾಗೂ ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ವಿಚಾರ ಭಾರೀ ಚರ್ಚೆಯಾಗಿತ್ತು. ಒಂದೆಡೆ ಸ್ಮೃತಿ ತಂದೆ ಶ್ರೀನಿವಾಸ್ ಹಾಗೂ ಪಲಾಶ್ ಮುಚ್ಚಲ್ ಆಸ್ಪತ್ರೆ ಸೇರಿದ್ರೆ ಇತ್ತ ಸ್ಮೃತಿ ಮಂದಾನ ತಮ್ಮ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದರು.
ಈ ಎಲ್ಲದರ ನಡುವೆ ಇದೀಗ ಸ್ಮೃತಿ ಮಂದಾನ ಮತ್ತೊಮ್ಮೆ ಇನ್ಸ್ಟಾಗ್ರಾಂನಲ್ಲಿ ಪ್ರತ್ಯಕ್ಷರಾಗಿದ್ದಾರೆ . ಟೂತ್ಪೇಸ್ಟ್ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ಸ್ಮೃತಿ ಮಂದಾನಾ ಕಾಣಿಸಿಕೊಂಡಿದ್ದು ಈ ಜಾಹಿರಾತನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಚಾರ ಏನಂದ್ರೆ ಈ ಜಾಹಿರಾತಿನಲ್ಲಿ ಮಂದಾನಾ ಅವರ ಕೈಯಲ್ಲಿ ಎಂಗೇಜ್ಮೇಂಟ್ ರಿಂಗ್ ಇಲ್ಲದಿರುವುದು ಅಭಿಮಾನಿಗಳ ಗಮನಕ್ಕೆ ಬಂದಿದೆ.ಆದರೆ ಇದು ನಿಶ್ಚಿತಾರ್ಥಕ್ಕೂ ಮುನ್ನ ಚಿತ್ರೀಕರಿಸಿದ ಜಾಹಿರಾತು ಆಗಿರಬಬಹುದೇ ಎಂಬ ಅನುಮಾನ ಕೂಡ ಇದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸ್ಮತಿ ಮಂದಾನ ಹಾಗೂ ಮುಚ್ಚಲ್ ನವೆಂಬರ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.ಆದರೆ ವಿವಾಹದ ದಿನದಂದೇ ಸ್ಮೃತಿ ತಂದೆ ಶ್ರೀನಿವಾಸ್ ಅನಾರೋಗ್ಯದಿಂದ ಸಾಂಗ್ಲಿಯ ಆಸ್ಪತ್ರೆಗೆ ದಾಖಲಾಗಿದ್ದರು.ಹೀಗಾಗಿ ಮದುವೆ ಅನಿಶ್ಚಿತವಾಗಿ ಮುಂದೂಡಲ್ಪಟ್ಟಿತ್ತು.
ಇದಾದ ಬಳಿಕ ಮಾರನೇ ದಿನವೇ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಮದುವೆಯ ಮರುದಿನಾಂಕದ ಬಗ್ಗೆ ಎರಡೂ ಕುಟುಂಬಗಳಿಂದ ಈವರೆಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ .



