ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ.. ಹಲವು ಪ್ರಮುಖ ವಿಧೇಯಕಗಳ ಮಂಡನೆಗೆ ಅಸ್ತು

Belagavi Session 2025 : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಬಹುನಿರೀಕ್ಷಿತ ಒಳ ಮೀಸಲಾತಿ ಅಡಿಯಲ್ಲಿ ಬಡ್ತಿ ನೀಡುವುದು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪಂದ್ಯ ಆಡಿಸುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಕ್ಯಾಬಿನೇಟ್​ (Belagavi Session 2025) ಸಮ್ಮತಿ ನೀಡಿದೆ. ಆದರೆ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.

ಎಸ್ಸಿ, ಎಸ್ಟಿ ಒಳ ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೊಸ ಅಫಿಡವಿಟ್​ ಸಲ್ಲಿಕೆಗೆ ಕ್ಯಾಬಿನೇಟ್​ ನಿರ್ಧರಿಸಿದೆ. ಅಲೆಮಾರಿ ಸಮುದಾಯಕ್ಕೆ ಬಲ ಅಥವಾ ಎಡ ಸಮುದಾಯಗಳ ಪಂಗಡಕ್ಕೆ ಸೇರಿಸಲು ಚರ್ಚೆ ನಡೆದಿತ್ತು. ಆದರೆ ಇದಕ್ಕೆ ಸಂಪುಟ ಸಭೆಯಲ್ಲಿ ಸಮ್ಮತಿ ಸಿಗದ ಕಾರಣ ಯಾವುದೇ ಬದಲಾವಣೆ ಇಲ್ಲದೇ ಮೊದಲಿದ್ದಂತೆ ಜಾರಿಗೆ ನಿರ್ಣಯ ಕೈಗೊಳ್ಳಲಾಗಿದೆ.
ಆರ್​ಸಿಬಿ ವಿಜಯೋತ್ಸವ ದುರಂತದ ಬಳಿಕ ಯಾವುದೇ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೊಳ್ಳದಿರುವುದು ಕ್ರಿಕೆಟ್​ ಅಭಿಮಾನಿಗಳಿಗೆ ಭಾರಿ ನಿರಾಶೆಗೆ ಕಾರಣವಾಗಿತ್ತು.ಆದರೆ ಸಂಪುಟ ಸಭೆಯಲ್ಲಿ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಆಡಿಸಲು ಹಸಿರುನಿಶಾನೆ ದೊರಕಿದೆ. ನಿವೃತ್ತ ನ್ಯಾಯಮೂರ್ತಿ ಕುನ್ಹಾ ವರದಿ ಅಳವಡಿಸಿಕೊಂಡು ಕ್ರಿಕೆಟ್​ ಮ್ಯಾಚ್​ ಆಡಿಸುವ ಜವಾಬ್ದಾರಿಯನ್ನು ಗೃಹ ಇಲಾಖೆಗೆ ನೀಡಲಾಗಿದೆ.

ಇದನ್ನೂ ಓದಿ: ವಿಮಾನಯಾನಕ್ಕೆ ₹47 ಕೋಟಿಗೂ ಅಧಿಕ ಖರ್ಚು ಮಾಡಿದ ಸ’ಮಜಾ’ವಾದಿ ಸಿಎಂ ಸಿದ್ದರಾಮಯ್ಯ..!

ಇನ್ನುಳಿದಂತೆ ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ ಮಂಡಿಸಲಿದ್ದು, ಎಲ್ಲಾ ಮಾದರಿಯ ವಾಹನಗಳಿಗೆ 1000 ರೂಪಾಯಿ ಸೆಸ್​ ವಿಧಿಸಲಾಗಿದೆ. 307 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಲ್ಕ್ ರಸ್ತೆ ಜಂಕ್ಷನ್ ನಿಂದ ಕೆ.ಆರ್ ಪುರದವರೆಗೆ ಜಾಗತಿಕ ಮಟ್ಟದ ರಸ್ತೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. ಖಾಸಗಿ ಆಂಬ್ಯುಲೆನ್ಸ್​ಗಳ ನಿಯಂತ್ರಣ ಹಾಗೂ ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆ ಎಂದು ನೋಂದಾಯಿಸಲು ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಸೇರಿದಂತೆ ಅನೇಕ ವಿಧೇಯಕಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories