ಶಾಲಾ ಮುಖ್ಯಶಿಕ್ಷಕರಿಗೆ ಸಂಕಷ್ಟ ತಂದ ಮೊಟ್ಟೆ : ಸಾಲುತ್ತಿಲ್ಲ ರಾಜ್ಯ ಸರ್ಕಾರದ ಅನುದಾನ

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ರೂಪದಲ್ಲಿ ಮೊಟ್ಟೆಯನ್ನೂ ಪೂರೈಕೆ ಮಾಡಬೇಕೆಂಬ ನಿಯಮಿದೆ. ರಾಜ್ಯದಲ್ಲಿ ಪ್ರಸ್ತುತ ಒಂದು ಮೊಟ್ಟೆಯ ಬೆಲೆ 8 ರೂಪಾಯಿ ತಲುಪಿದೆ. ಹೊಸ ವರ್ಷಾಚರಣೆ ಹಾಗೂ ಕ್ರಿಸ್​ಮಸ್​ ಸಂದರ್ಭದಲ್ಲಿ ಸಾಮಾನ್ಯವಾಗಿ ಮೊಟ್ಟೆಯ ಬೆಲೆ ಗಗನಕ್ಕೇರುತ್ತದೆ. ಅದೇ ರೀತಿ ಈ ಬಾರಿ ಮೊಟ್ಟೆಯ ದರದಲ್ಲಿ ದಾಖಲೆಯ ಏರಿಕೆ ಕಂಡಿದೆ.

ಆದರೆ ರಾಜ್ಯ ಸರ್ಕಾರ ಮಾತ್ರ ಇಂದಿಗೂ ಶಾಲೆಗಳಿಗೆ 1 ಮೊಟ್ಟೆಗೆ 6 ರೂಪಾಯಿಗಳ ಲೆಕ್ಕದಲ್ಲಿಯೇ ಹಣ ನೀಡುತ್ತಿದೆ. ಹೀಗಾಗಿ ತುಮಕೂರಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹೆಚ್ಚುವರಿ ಹಣವನ್ನು ತಮ್ಮ ಕೈಯಿಂದ ಭರಿಸುವ ಮೂಲಕ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ.
ಪ್ರತಿ ಮೊಟ್ಟೆಗೆ ಶಾಲಾ ಮುಖ್ಯ ಶಿಕ್ಷಕರಿಗೆ 2.80 ರೂಪಾಯಿಗಳಿಂದ 3 ರೂಪಾಯಿ ಖರ್ಚು ಬೀಳುತ್ತಿದೆ. ಕನಿಷ್ಠ 100 ಮಕ್ಕಳಿರುವ ಶಾಲೆಗಳಲ್ಲಿ ತಿಂಗಳಿಗೆ 10 ಸಾವಿರ ರೂಪಾಯಿಗಳವರೆಗೆ ಶಾಲಾ ಮುಖ್ಯ ಶಿಕ್ಷಕರು ಕೈಯಿಂದ ಖರ್ಚು ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳಿಗೆ 10 ದಿನಗಳ ಕ್ರಿಸ್ಮಸ್ ರಜೆ ವಿಚಾರ : ಧರ್ಮಸಂಘರ್ಷಕ್ಕೆ ಇಳಿದ ಶ್ರೀರಾಮಸೇನೆ

ಇದರಿಂದ ನಮಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ತಿಂಗಳಿಗೆ 10 ಸಾವಿರ ರೂಪಾಯಿಗಳನ್ನು ನಮ್ಮ ಕೈಯಿಂದ ಖರ್ಚು ಮಾಡಿ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆ ದೊರಕುವಂತೆ ಮಾಡುತ್ತಿದ್ದೇವೆ. ಹೀಗಾಗಿ ಸರ್ಕಾರ ಈ ಸಂಬಂಧ ಶೀಘ್ರ ಪರಿಹಾರ ಕಾರ್ಯ ಕೈಗೊಳ್ಳಬೇಕಿದೆ ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories