ಆಭರಣ ಪ್ರಿಯರಿಗೆ ಬಿಗ್​ ಶಾಕ್​ : ಸಂಕ್ರಾಂತಿ ಬಳಿಕ ಚಿನ್ನ – ಬೆಳ್ಳಿ ದರವಾಗಲಿದೆ ದುಪ್ಪಟ್ಟು..!

ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದ್ದು ಶ್ರೀ ಸಾಮಾನ್ಯ ಕಂಗಾಲಾಗಿದ್ದಾರೆ. ಹಳದಿ ಲೋಹ ನಿಜಕ್ಕೂ ಕೈಗೆಟುಕದ ದ್ರಾಕ್ಷಿ ಎಂಬಂತಹ ವಾತಾವರಣವೇ ನಿರ್ಮಾಣವಾಗುತ್ತಿದೆ. ಇತ್ತೀಚಿಗೆ ಕೈಗಾರಿಕೆಗಳ ಮೆಷಿನರಿಗಳಲ್ಲಿ ಬೆಳ್ಳಿ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ ದರ ಕೂಡ ಗಗನಕ್ಕೇರಿದೆ. ಈ ಎಲ್ಲದರ ನಡುವೆ ಸಂಕ್ರಾಂತಿ ಹಬ್ಬದ ಬಳಿಕ ಚಿನ್ನ ಹಾಗೂ ಬೆಳ್ಳಿಯ ದರ ದುಪ್ಪಟ್ಟಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ 1 ಕೆ.ಜಿ ಬೆಳ್ಳಿಯ ದರ 2.14 ಲಕ್ಷ ರೂಪಾಯಿ ಇದ್ದರೆ, ಸಂಕ್ರಾಂತಿ ಹಬ್ಬದ ಬಳಿಕ ಈ ದರವು 2.50 ಲಕ್ಷ ರೂಪಾಯಿ ತಲುಪಲಿದೆ ಎನ್ನಲಾಗಿದೆ. ಭೌತಿಕವಾಗಿ ಹಾಗೂ ಡಿಜಿಟಲ್​ ರೂಪದಲ್ಲಿ ಚಿನ್ನ ಖರೀದಿ ಮಾಡುವವರ ಸಂಖ್ಯೆಯೂ ಮಿತಿಮೀರಿದ್ದು ಚಿನ್ನದ ಮೇಲೆ ಹೂಡಿಕೆದಾರರ ಸಂಖ್ಯೆ 15 ಪ್ರತಿಶತ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ. ರಾಮಾಚಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ; ರೈತರ ಏಳಿಗೆಗಾಗಿ ಸಮಗ್ರ ಯೋಜನೆ!

ಭಾರತದಲ್ಲಿ 1 ಪ್ರತಿಶತ ಬೆಳ್ಳಿ ಹಾಗೂ ಶೇಕಡಾ 0.1ರಷ್ಟು ಚಿನ್ನ ಮಾತ್ರ ಉತ್ಪಾದನೆಯಾಗುತ್ತದೆ. ಮಿಕ್ಕೆಲ್ಲ ಲೋಹ ವಿದೇಶಗಳಿಂದಲೇ ಆಮದಾಗಬೇಕು. ಹೀಗಾಗಿ ರೂಪಾಯಿ ಮೌಲ್ಯ, ರಾಜಕೀಯ ಅನಿಶ್ಚಿತತೆಗಳು, ಷೇರು ಮಾರುಕಟ್ಟೆ ಏರಿಳಿತ ಎಲ್ಲವೂ ಬೆಳ್ಳಿ ಹಾಗೂ ಬಂಗಾರದ ದರದ ಮೇಲೆ ಪರಿಣಾಮ ಬೀರುತ್ತದೆ. ಚಿನ್ನ ಹಾಗೂ ಬೆಳ್ಳಿಯ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಎಂಬ ಭಾವನೆ ಇರೋದ್ರಿಂದ ಹೆಚ್ಚಿನ ಜನರು ಈ ಲೋಹಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಹಳದಿ ಹಾಗೂ ಬಿಳಿ ಲೋಹಗಳ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories