ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಮೃದಂಗ : ಕರ್ನಾಟಕಕ್ಕೆ 6ನೇ ಸ್ಥಾನ
ರಾಜ್ಯದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡು ಬರ್ತಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 18931 ಕಂದಮ್ಮಗಳು ಸಾವನ್ನಪ್ಪಿದೆ. ಈ ಮೂಲಕ ಹಸುಗೂಸುಗಳ ಸಾವಿನ ಪ್ರಮಾಣದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ 6 ನೇ ಸ್ಥಾನ ಪಡೆದುಕೊಂಡಂತಾಗಿದೆ.
ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿಯಲ್ಲಿ ಅತೀ ಹೆಚ್ಚು ಅಂದರೆ 2324 ನವಜಾತ ಶಿಶುಗಳು ಸಾವನ್ನಪ್ಪಿವೆ. ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 1450 ಮಕ್ಕಳು ಮರಣ ಹೊಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 1561 ಕಂದಮ್ಮಗಳ ಸಾವಿನ ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆ ನೀಡುತ್ತಿರುವ ಈ ಅಂಕಿ ಅಂಶಗಳು ನಿಜಕ್ಕೂ ಆತಂಕ ಮೂಡಿಸಿದೆ.
ಅವಧಿ ಪೂರ್ವ ಜನನ, ಜನನ ಸಮಯದಲ್ಲಿ ಉಸಿರುಗಟ್ಟುವಿಕೆ, ಕಡಿಮೆ ತೂಕದ ಮಗು, ನ್ಯುಮೋನಿಯಾ, ಹೃದಯ ಸಂಬಂಧಿ ಕಾಯಿಲೆಗಳು, ಜನ್ಮಜಾತ ತೊಂದರೆಗಳು, ಕಾಮಾಲೆ, ಶ್ವಾಸಕೋಶದ ಸೋಂಕು ಹೀಗೆ ನಾನಾ ಕಾರಣಗಳಿಂದ ಮಕ್ಕಳು ಜನನದ ಸಂದರ್ಭದಲ್ಲಿ ಸಾವಿಗೀಡಾಗುತ್ತಿದ್ದಾರೆ .
ಇದನ್ನೂ ಓದಿ:
ಹಸುಗೂಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು ಆರೋಗ್ಯ ಇಲಾಖೆ ಕೂಡಲೇ ಈ ಸಂಬಂಧ ಗಮನಹರಿಸಬೇಕಿದೆ. ನವಜಾತ ಶಿಶುಗಳ ಜನನದಲ್ಲಿ ಯಾವುದೇ ತೊಡಕಾಗದಂತೆ ಸಕಲ ವ್ಯವಸ್ಥೆ ಕೈಗೊಳ್ಳಬೇಕಿದೆ.



