ರಾಜ್ಯ ರಾಜಧಾನಿಯಿಂದ ರಾಜ್ಯ ಕರಾವಳಿ ಭಾಗವನ್ನೂ ಒಳಗೊಂಡು ಗೋವಾಕ್ಕೆ ತೆರಳಲು ಹೈ ಸ್ಪೀಡ್ ರೈಲು ಸಂಪರ್ಕ ಬೇಕು ಎಂಬುದು ಬಹುದಿನಗಳ ಬೇಡಿಕೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದು ಕರಾವಳಿಗರಲ್ಲಿ ಮತ್ತೊಮ್ಮೆ ವಂದೇ ಭಾರತ್ ರೈಲಿನ ಕನಸು ಚಿಗುರೊಡೆದಿದೆ.
ಬೆಂಗಳೂರು – ಮಂಗಳೂರು – ಕಾರವಾರ – ಮಡಂಗಾವ್ ಮಾರ್ಗವಾಗಿ ವಂದೇಭಾರತ್ ಎಕ್ಸ್ಪ್ರೆಸ್ ರೈಲು ಆರಂಭಿಸಿ ಎಂದು ಮನವಿ ಮಾಡಿ ಕೇಂದ್ರ ರೈಲ್ವೆ ಸ್ವಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆಯಲಾಗಿದೆ.
ಕರ್ನಾಟಕ ಕರಾವಳಿ ಪ್ರದೇಶ ಹಾಗೂ ಗೋವಾ ನಡುವೆ ವೇಗವಾಗ ರೈಲು ಸಂಪರ್ಕದ ಅಗತ್ಯವಿದೆ. ಈಗಾಗಲೇ ಘಾಟ್ ಪ್ರದೇಶದ ರೈಲ್ವೇ ಮಾರ್ಗದ ವಿದ್ಯುದೀಕರಣದ ಕಾಮಗಾರಿ ಕೂಡ ಪೂರ್ಣಗೊಂಡಿದೆ. ಹೀಗಾಗಿ ವಂದೇಭಾರತ್ ರೈಲು ಈ ಮಾರ್ಗದಲ್ಲಿ ಆರಂಭಿಸಲು ಯಾವುದೇ ತಾಂತ್ರಿಕ ತೊಂದರೆಗಳಿಲ್ಲ. ಆದ್ದರಿಂದ ಬೆಂಗಳೂರು-ಮಂಗಳೂರು-ಕಾರವಾರ-ಮಡಗಾವ್ ಮಾರ್ಗದಲ್ಲಿ ಶೀಘ್ರದಲ್ಲಿಯೇ ವಂದೇ ಭಾರತ್ ರೈಲು ಆರಂಭಿಸುವಂತೆ ಪತ್ರದಲ್ಲಿ ಎಚ್ಡಿಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಟಾಟಾ vs ಅದಾನಿ: ಭಾರತದ ಬಲಿಷ್ಠ ಕಂಪನಿಗಳ ಮಹಾಕಾಳಗ ಶುರು!
ಕರಾವಳಿ ಭಾಗದ ಜನತೆ ಈ ಮಾರ್ಗದಲ್ಲಿ ರೈಲು ಆರಂಭಿಸಬೇಕೆಂದು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಪ್ರವಾಸೋದ್ಯಮ, ವಾಣಿಜ್ಯದ ದೃಷ್ಠಿಯಿಂದ ಈ ರೈಲು ಸಾಕಷ್ಟು ಜನರಿಗೆ ಲಾಭ ತಂದುಕೊಡಲಿದೆ. ಅಲ್ಲದೇ ಕರ್ನಾಟಕ ಹಾಗೂ ಗೋವಾ ಸಂಪರ್ಕವನ್ನು ಈ ರೈಲು ಮಾರ್ಗವು ಬಲಪಡಿಸಲಿದೆ



