ಪುತ್ರಶೋಕದಿಂದ 21000 ಕೋಟಿ ಆಸ್ತಿ ದಾನ ಮಾಡಲು ನಿರ್ಧರಿಸಿದ ತಂದೆ

Vedanta’s Anil Agarwal Donation: ವೇದಾಂತ ಗ್ರೂಪ್‌ನ ಸಂಸ್ಥಾಪಕ ಮತ್ತು ಭಾರತದ ಪ್ರಮುಖ ಉದ್ಯಮಿ ಅನಿಲ್ ಅಗರ್ವಾಲ್ ಅವರ ಹಿರಿಯ ಪುತ್ರ ಅಗ್ನಿವೇಶ್ ಅಗರ್ವಾಲ್ (49) ಅವರು ಜನವರಿ 7, 2026ರ ಬುಧವಾರದಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ. ಇದು ಅಗರ್ವಾಲ್ ಕುಟುಂಬಕ್ಕೆ ಭರಿಸಲಾಗದ ದುಃಖ ತಂದಿದೆ.

ಕೆಲ ದಿನಗಳ ಹಿಂದೆ ಅಗ್ನಿವೇಶ್ ಅವರು ಸ್ಕೀಯಿಂಗ್ ಮಾಡುವಾಗ ಅಪಘಾತಕ್ಕೀಡಾಗಿದ್ದರು. ನಂತರ ಅವರನ್ನು ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಚೇತರಿಸಿಕೊಳ್ಳುತ್ತಿದ್ದ ಹಂತದಲ್ಲೇ ಅನಿರೀಕ್ಷಿತವಾಗಿ ಸಂಭವಿಸಿದ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ.

ಪುತ್ರನ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ಅನಿಲ್ ಅಗರ್ವಾಲ್ ಅವರು ‘X’ ಜಾಲತಾಣದಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. “ಇದು ನನ್ನ ಜೀವನದ ಅತ್ಯಂತ ಕತ್ತಲೆಯ ದಿನ. ಮಗ ತಂದೆಗಿಂತ ಮೊದಲೇ ಹೋಗಬಾರದು” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅಗ್ನಿವೇಶ್ ಕೇವಲ ಮಗನಾಗಿರದೆ ತಮಗೆ ಆಪ್ತ ಸ್ನೇಹಿತನಂತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಅನಿಲ್ ಅಗರ್ವಾಲ್ ಅವರು ತಮ್ಮ ಪುತ್ರನಿಗೆ ನೀಡಿದ್ದ ದೊಡ್ಡ ವಾಗ್ದಾನವೊಂದನ್ನು ನೆನಪಿಸಿಕೊಂಡಿದ್ದಾರೆ. ಸಮಾಜದ ಏಳಿಗೆಗಾಗಿ ಮತ್ತು ಬಡ ಮಕ್ಕಳ ಹಸಿವು ನೀಗಿಸಲು ತಾವು ಗಳಿಸಿದ ಆಸ್ತಿಯಲ್ಲಿ ಶೇಕಡಾ 75 ರಷ್ಟನ್ನು ದಾನ ಮಾಡುವುದಾಗಿ ಅಗ್ನಿವೇಶ್‌ಗೆ ಮಾತು ನೀಡಿದ್ದರು. ಈಗ ಪುತ್ರನ ನೆನಪಿಗಾಗಿ ಆ ಮಾತನ್ನು ಈಡೇರಿಸಲು ನಿರ್ಧರಿಸಿದ್ದಾರೆ.

LIC ಹೊಸ ‘ಜೀವನ್ ಉತ್ಸವ್ ಸಿಂಗಲ್ ಪ್ರೀಮಿಯಂ’ ಯೋಜನೆ ಬಿಡುಗಡೆ: ಒಮ್ಮೆ ಹಣ ಹೂಡಿ, ಜೀವನಪೂರ್ತಿ ಆದಾಯ!

ಅನಿಲ್ ಅಗರ್ವಾಲ್ ಅವರು ಸದ್ಯ ಸುಮಾರು 4.2 ಬಿಲಿಯನ್ ಡಾಲರ್ (ಸುಮಾರು 35,000 ಕೋಟಿ ರೂಪಾಯಿಗೂ ಅಧಿಕ) ಆಸ್ತಿಯನ್ನು ಹೊಂದಿದ್ದಾರೆ. ಈಗ ಅವರು ಮಾಡಿರುವ ಘೋಷಣೆಯಂತೆ, ತಮ್ಮ ಒಟ್ಟು ಸಂಪತ್ತಿನ ಬಹುಪಾಲು ಅಂದರೆ ಸುಮಾರು 26,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಲಿದ್ದಾರೆ.

ಅಗ್ನಿವೇಶ್ ಅಗರ್ವಾಲ್ ಅವರು ವೇದಾಂತ ಗ್ರೂಪ್‌ನ ಪ್ರಮುಖ ಅಂಗಸಂಸ್ಥೆಗಳಾದ ಹಿಂದುಸ್ತಾನ್ ಜಿಂಕ್ ಮತ್ತು ತಲ್ವಂಡಿ ಸಾಬೋ ಪವರ್ ಲಿಮಿಟೆಡ್‌ನಲ್ಲಿ ಅಧ್ಯಕ್ಷರಾಗಿ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories