ದಿನದಿಂದ ದಿನಕ್ಕೆ ಕುಸಿಯುತ್ತಿದೆ ಕಾಫಿ ದರ… ಆತಂಕದಲ್ಲಿ ಬೆಳೆಗಾರರು

ಕಳೆದ ವರ್ಷ ದಾಖಲೆಯ ದರ ಏರಿಕೆ ಕಂಡಿದ್ದ ಕಾಫಿ ಬೆಳೆಗಾರರಿಗೆ ಈ ವರ್ಷದ ಮೊದಲ ತಿಂಗಳಲ್ಲೇ ನಿರಾಶೆ ಎದುರಾಗಿದೆ. ವರ್ಷದ ಆರಂಭದಲ್ಲಿ ಉತ್ತಮ ಬೆಲೆ ಹೊಂದಿದ್ದ ಕಾಫಿ ತಿಂಗಳಾಂತ್ಯದ ವೇಳೆಗೆ ದರ ಕುಸಿತದ ಅಪಾಯ ಎದುರಿಸುತ್ತಿದೆ. ಇದು ಕಾಫಿ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಅರೇಬಿಕಾ ಹಾಗೂ ರೊಬಸ್ಟಾ ಪಾರ್ಚ್ಮೆಂಟ್​ ಕಾಫಿ ದರ 50 ಕೆಜಿ ಚೀಲಕ್ಕೆ ಕ್ರಮವಾಗಿ 29 ಸಾವಿರ ರೂ. ಮತ್ತು 24 ಸಾವಿರ ರೂಪಾಯಿ ಆಗಿತ್ತು. ಆದರೆ ಈ ವರ್ಷ ಈ ಕಾಫಿ ಬೆಳೆಗಳಲ್ಲಿ ಗಣನೀಯ ಇಳಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಹೆಚ್ಚಿನ ದರ ದೊರಕಬಹುದು ಎಂಬ ನಿರೀಕ್ಷೆಯಲ್ಲಿ ಕಾಫಿ ಬೆಳೆ ಸಂಗ್ರಹಿಸಿ ಇಟ್ಟುಕೊಂಡಿದ್ದ ರೈತರಿಗೆ ಭಾರೀ ನಿರಾಶೆಯಾಗಿದೆ.
ಬ್ರೆಜಿಲ್‌, ವಿಯೆಟ್ನಾಂನಂತಹ ರಾಷ್ಟ್ರಗಳಲ್ಲಿ ಈ ಬಾರಿ ಗಣನೀಯ ಪ್ರಮಾಣದಲ್ಲಿ ಕಾಫಿ ಉತ್ಪಾದನೆ ಹೆಚ್ಚಿರುವುದರಿಂದ ಭಾರತದ ಕಾಫಿಗೆ ಡಿಮ್ಯಾಂಡ್ ಕಮ್ಮಿಯಾಗಿದೆ. ಯೂರೋಪ್‌ ಮತ್ತು ಅಮೆರಿಕದಂತಹ ಪ್ರಮುಖ ಕಾಫಿ ಬೇಡಿಕೆಯಿರುವ ಪ್ರದೇಶಗಳಲ್ಲಿ ಆರ್ಥಿಕ ಒತ್ತಡ, ಹಣದುಬ್ಬರ ಮತ್ತಿತರ ಕಾರಣಗಳಿಂದಾಗಿ ಕಾಫಿಗೆ ಬೇಡಿಕೆ ಕೂಡ ಕಮ್ಮಿಯಾಗಿದೆ. ಅಲ್ಲದೇ ಡಾಲರ್​ ಮತ್ತು ರೂಪಾಯಿ ದರದ ವಿನಿಮಯ ಅಸ್ಥಿರತೆ ಕೂಡ ಕಾಫಿ ದರ ಇಳಿಕೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಮಾವು ಬೆಳೆಗಾರರಿಗೆ ಕಂಟಕವಾಯ್ತು ಕೊರೆಯುವ ಚಳಿ : ಈ ಬಾರಿ ಇಳುವರಿ ಭಾರೀ ಕುಸಿತ

ಕಳೆದ ವರ್ಷ ಕಾಫಿಗೆ ದರ ಏರಿಕೆಯಾದ ಬಳಿಕ ಈ ವರ್ಷ ಮತ್ತಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಬಹುತೇಕ ಕಾಫಿ ಬೆಳೆಗಾರರು ಕಾಫಿ ಬೆಳೆಯನ್ನು ಹಾಗೆಯೇ ಸಂಗ್ರಹಿಸಿ ಇಟ್ಟಿದ್ದರು. ಇದರಿಂದಾಗಿ ಈ ವರ್ಷ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚು ಕಾಫಿ ಪೂರೈಕೆ ಆಗುತ್ತಿದೆ. ಇದು ಕೂಡ ಕಾಫಿ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories