ಭಾರತದಲ್ಲಿ ವಾಹನ ನಿಯಮ ಉಲ್ಲಂಘನೆಯಲ್ಲಿ ಕಳಪೆ ಪ್ರದರ್ಶನ : ಕರ್ನಾಟಕವೇ ನಂ.1

ದೇಶದಲ್ಲಿ ಸಂಚರಿಸುತ್ತಿರುವ ವಾಹನಗಳ ಪೈಕಿ 70 ಪರ್ಸೆಂಟ್​ ವಾಹನಗಳು ಕಾನೂನು ಬದ್ಧ ದಾಖಲೆಗಳನ್ನು ಹೊಂದಿಲ್ಲ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ದೇಶದಲ್ಲಿ ಒಟ್ಟೂ 40.7 ಕೋಟಿ ವಾಹನಗಳಿದ್ದು ಇವುಗಳಲ್ಲಿ 70 ಪ್ರತಿಶತ ವಾಹನಗಳು ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನಗಳು ಸೂಕ್ತ ದಾಖಲೆಗಳನ್ನು ಹೊಂದಿಲ್ಲ ಎಂದು ರಸ್ತೆ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ. 23.5 ಕೋಟಿ ದ್ವಿಚಕ್ರ ವಾಹನಗಳು ಸೂಕ್ತ ದಾಖಲೆಗಳನ್ನು ಹೊಂದದೆಯೇ ರಸ್ತೆಯಲ್ಲಿ ಸಂಚಾರ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ, ಫಿಟ್ನೆಸ್​ ಪ್ರಮಾಣಪತ್ರದಂತಹ ದಾಖಲೆಗಳನ್ನು ಹೊಂದಿರದೆಯೇ ಸಂಚರಿಸುತ್ತಿರುವ ವಾಹನಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನ ಪಡೆದಿದೆ. ಒಟ್ಟು ವಾಹನಗಳ ಪೈಕಿ ಸುಮಾರು 40% ವಾಹನಗಳು ಅಗತ್ಯ ದಾಖಲೆಗಳಿಲ್ಲದೆ ರಸ್ತೆಗಿಳಿಯುತ್ತಿವೆ. ಇದರಿಂದ ಅಪರಾಧ ಪ್ರಮಾಣಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಕರ್ನಾಟಕದ ಹೊರತುಪಡಿಸಿ ದೊಡ್ಡ ರಾಜ್ಯಗಳಾದ ತಮಿಳುನಾಡು, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಶೇ. 40 ಕ್ಕೂ ಹೆಚ್ಚು ನೋಂದಾಯಿತ ವಾಹನಗಳು ನಿಯಮಗಳನ್ನು ಪಾಲಿಸುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಡಿಪಿಆರ್​​ಗಳಿಗೆ ಯೋಜನೆಗಳಿಗೆ ಕೇಂದ್ರದ ಅನುಮೋದನೆ

ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ದಾಖಲೆಗಳಲ್ಲಿದ ವಾಹನಗಳು 1 ವರ್ಷದ ಒಳಗಾಗಿ ದಾಖಲೆಗಳನ್ನು ಹೊಂದಿರಬೇಕು. 1 ವರ್ಷದ ಒಳಗೆ ದಾಖಲೆಗಳು ನವೀಕರಣವಾಗದಲ್ಲಿ ತಾತ್ಕಾಲಿಕ್​ ಅರ್ಕೈವ್​ ಗುಂಪಿಗೆ ವಾಹನಗಳು ಸೇರ್ಪಡೆಗೊಳ್ಳುತ್ತವೆ. ಸತತ 2 ವರ್ಷವಾದರೂ ದಾಖಲೆಗಳನ್ನು ಹೊಂದುವಲ್ಲಿ ಯಶಸ್ವಿಯಾಗದ ವಾಹನಗಳನ್ನು ಖಾಯಂ ಆಗಿ ರದ್ದುಗೊಳಿಸಲು ಯೋಜನೆ ರೂಪಿಸಲಾಗಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories