ಬಸ್ ಅಗ್ನಿ ದುರಂತ ತಡೆಗೆ ಹೊಸ ಕ್ರಮ : ಬಸ್ ಮಾಲೀಕರಿಗೆ ಈ 8 ನಿಯಮ ಪಾಲನೆ ಕಡ್ಡಾಯ
ರಾಜ್ಯದಲ್ಲಿ ಬಸ್ ಅಗ್ನಿ ದುರಂತಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಅಪಾಯ ತಡೆಗೆ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಬಸ್ಗಳಲ್ಲಿ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆ ಪ್ರಯಾಣಿಕರ ಸುರಕ್ಷತೆ ಕುರಿತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಈ ನಿಯಮಗಳನ್ನು ಕಡಾಖಂಡಿತವಾಗಿ ಪಾಲಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.
ಸ್ಲೀಪರ್ ಬಸ್ಗಳ ಮಾಲೀಕರು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಯಾವುವು ಎಂಬುದನ್ನು ನೋಡೋದಾದ್ರೆ, ಸ್ಲೀಪರ್ ಬರ್ತ್ಗಳಲ್ಲಿ ಸ್ಲೈಡರ್ ತೆಗೆಯಬೇಕು. ತಿಂಗಳೊಳಗಾಗಿ ಫೈರ್ ಡಿಟೆಕ್ಷನ್ ಅಳವಡಿಕೆ ಮಾಡಿರಬೇಕು. 10 ಕೆ.ಜಿ ತೂಕದ ಅಗ್ನಿಶಾಮಕ ಸಾಧನ ಅಳವಡಿಕೆ ಮಾಡಿರಲೇಬೇಕು. ಚಾಲಕರ ಹಿಂಬದಿ ಡೋರ್ ತೆಗೆಯಬೇಕು. ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್ಸಿ ಮಾಡಿಸಬೇಕು. ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಇತರ ಊರುಗಳ ಜನರಿಗಿಂತ ವರ್ಷಕ್ಕೆ 7 ದಿನ ಕಡಿಮೆ! ಏಕೆ ಗೊತ್ತಾ?
ಇನ್ನು ಈ ವಿಚಾರವಾಗಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಎಸಿ ಬಸ್ಗಳಲ್ಲಿ ಬಸ್ ಕಾಣಿಸಿಕೊಂಡರೆ ಹೇಗೆ ನಂದಿಸಬೇಕು? ಎಂಬುದರ ಬಗ್ಗೆ ಮಾರ್ಗಸೂಚಿ ನೀಡಬೇಕು. ಪ್ರಯಾಣಿಕರು ಡೋರ್ನಿಂದ ಜಂಪ್ ಮಾಡಲು ಮೆಟ್ಟಿಲು ವ್ಯವಸ್ಥೆ ಆಗಬೇಕು. ಎಕ್ಸಿಟ್ ಡೋರ್ಗಳ ಬಳಿ ಯುವಕರು ಹಾಗೂ ಮಧ್ಯವಯಸ್ಕರಿಗೆ ಸೀಟು ನೀಡಬೇಕು. ಬೆಂಕಿ ಕಾಣಿಸಿಕೊಂಡ ಕೂಡಲೇ ಪ್ರಯಾಣಿಕರನ್ನು ಎಚ್ಚರಿಸುವ ಸಲುವಾಗಿ ಡ್ರೈವರ್ಗೆ ಅಲಾರಂ ನೀಡಬೇಕು. ಈ ರೀತಿಯ ವ್ಯವಸ್ಥೆಗಳನ್ನು ಬಸ್ಗಳಲ್ಲಿ ಮಾಡಿಸುವಂತೆ ಖಾಸಗಿ ಬಸ್ ಮಾಲೀಕರು ಹಾಗೂ ಬಸ್ ತಯಾರಕರಿಗೆ ಸೂಚನೆ ನೀಡಿದ್ದಾರೆ.



