ಕಾರ್ಕಳ: ಸ್ಫೋಟಕ ತಿಂದು ಸಾಕುನಾಯಿ ಸಾವು – ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು

Karkala Pet Dog Dies : ಕಾರ್ಕಳ: ಪ್ರಾಣಿ ಹಿಂಸೆ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ಇಟ್ಟಿದ್ದ ಸ್ಫೋಟಕವನ್ನು ತಿಂದು ಸಾಕುನಾಯಿಯೊಂದು ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಸಂಭವಿಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನಾಟ್ಲ ದರ್ಖಾಸ್ ನಿವಾಸಿ ರವೀಂದ್ರ ಪೂಜಾರಿ (62 ವರ್ಷ) ಎಂಬವರು ತಮ್ಮ ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ದರು. ಫೆಬ್ರವರಿ 1ರಂದು ಸಂಜೆ ಸುಮಾರು 6:15 ಗಂಟೆಗೆ ಮನೆಯಿಂದ ಹೊರಗೆ ಹೋದ ನಾಯಿಯು ರಾತ್ರಿಯಾದರೂ ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಮಾಲೀಕರು ಮರುದಿನ ಬೆಳಿಗ್ಗೆ ಅಂದರೆ ಫೆಬ್ರವರಿ 2 ರಂದು ಮುಂಜಾನೆ 5:45ಕ್ಕೆ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.
Also Read : ಬೈಕ್ ನಿಯಂತ್ರಣ ತಪ್ಪಿ ಪಲ್ಟಿ: ಸವಾರ ಸ್ಥಳದಲ್ಲೇ ಸಾವು
ಈ ವೇಳೆ ಮನೆಯ ಸಮೀಪದ ಹಾಡಿಯಲ್ಲಿ ನಾಯಿಯು ಮೃತದೇಹ ಪತ್ತೆಯಾಗಿದೆ. ಸ್ಫೋಟಕದ ತೀವ್ರತೆಗೆ ನಾಯಿಯ ತಲೆ ಮತ್ತು ಮುಖದ ಭಾಗವು ಸಂಪೂರ್ಣವಾಗಿ ಛಿದ್ರಗೊಂಡಿರುವುದು ಕಂಡುಬಂದಿದೆ. ಯಾರೋ ಅಪರಿಚಿತ ವ್ಯಕ್ತಿಗಳು ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದಲೇ ಹಾಡಿಯಲ್ಲಿ ಸ್ಫೋಟಕಗಳನ್ನು ಇಟ್ಟಿದ್ದು, ಅದನ್ನು ನಾಯಿ ಆಹಾರವೆಂದು ಭಾವಿಸಿ ಕಚ್ಚಿದಾಗ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
Also Read : ಬಿಜೆಪಿ ಮಾಜಿ ಮುಖಂಡನ ಪುತ್ರನ ಲವ್ ಸೆಕ್ಸ್ ದೋಖಾ ಪ್ರಕರಣ : ಕೊನೆಗೂ ಸಂತ್ರಸ್ತೆಯೊಂದಿಗೆ ವಿವಾಹಕ್ಕೆ ಕೃಷ್ಣ ಸಮ್ಮತಿ
ಈ ಅಮಾನವೀಯ ಘಟನೆಯ ಕುರಿತು ರವೀಂದ್ರ ಪೂಜಾರಿ ಅವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಅಪರಾಧ ಕ್ರಮಾಂಕ 21/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 325 ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ರ ಕಲಂ 11(D) ಹಾಗೂ 3, 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Karkala Pet Dog Dies After Consuming Explosives Case Filed Against Miscreants
English News for Click : https://newsnext.live/



