ಜೈಲೂಟ ಸಾಲುತ್ತಿಲ್ಲ ಎಂದು ನ್ಯಾಯಾಧೀಶರ ಎದುರು ನಟ ದರ್ಶನ್​ ಕಣ್ಣೀರು..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಮಾಡಿದ ಪ್ರಮಾದ ದರ್ಶನ್​ರಿಗೆ ಭಾರೀ ಬೆಲೆ ತೆರುವಂತೆ ಮಾಡ್ತಿದೆ. ಜೈಲಿನಲ್ಲಿ ಒಂದು ಟಿವಿ ವ್ಯವಸ್ಥೆಗೆ ಮನವಿ ಮಾಡಿದ್ದ ನಟ ದರ್ಶನ್​ ಮನವಿಗೆ ಕೋರ್ಟ್ ಅಸ್ತು ಎಂದಿದ್ದು, ನ್ಯಾಯಾಧೀಶರಿಗೆ ವಿಚಾರಣೆಯ ಸಂದರ್ಭದಲ್ಲಿ ನಟ ದರ್ಶನ್​ ಧನ್ಯವಾದ ಅರ್ಪಿಸಿದ್ದಾರೆ.
ಧನ್ಯವಾದ ಹೇಳುವ ಅಗತ್ಯವಿಲ್ಲ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ಎಂದು ಈ ಸಂದರ್ಭದಲ್ಲಿ ದರ್ಶನ್​ಗೆ ನ್ಯಾಯಾಧೀಶರು ಹೇಳಿದ್ದಾರೆ ಎನ್ನಲಾಗಿದೆ. ಇದರ ಜೊತೆಯಲ್ಲಿ ನೇರ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆಯೂ ನಟ ದರ್ಶನ್​ ಮನವಿ ಮಾಡಿದ್ದಾರೆ.
ಒಂದು ದಿನ ನೇರವಾಗಿ ಕೋರ್ಟ್ ವಿಚಾರಣೆಗೆ ಸಾಧ್ಯವಾದರೆ ಒಂದೊತ್ತು ಮನೆಯ ಊಟ ಸೇವಿಸಲು ಸಾಧ್ಯವಾಗುತ್ತದೆ. ಜೈಲಿನಲ್ಲಿ ಕೊಡುತ್ತಿರುವ ಊಟ ಸಾಲುತ್ತಿಲ್ಲ. ಹೀಗಾಗಿ ಖುದ್ದು ವಿಚಾರಣೆಗೆ ಹಾಜರಿಗೆ ಅವಕಾಶ ನೀಡುವಂತೆ ದರ್ಶನ್​ ಮನವಿ ಮಾಡಿದ್ದಾರೆ. ದರ್ಶನ್​ ಪರ ವಕೀಲರ ವಾದ ಆಲಿಸಿದ ನ್ಯಾಯಧೀಶರು ಈ ಸಂಬಂಧ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ : ಕೊಲೆ ಕೇಸ್​ನಿಂದ ಕೈಬಿಡುವಂತೆ ಹೈಕೋರ್ಟ್ ಮೆಟ್ಟಿಲೇರಿದ ಡಿ ಗ್ಯಾಂಗ್​ ಸದಸ್ಯ

ಇನ್ನು ಇದರ ಜೊತೆಯಲ್ಲಿ ಕುಟುಂಬದವರು ನನ್ನ ಭೇಟಿ ಬಂದಾಗ ಒಳ ಸಂದರ್ಶನಕ್ಕೆ ಅವಕಾಶ ನೀಡಿ ಎಂದೂ ದರ್ಶನ್​ ಬೇಡಿಕೆ ಮುಂದಿಟ್ಟಿದ್ದಾರೆ. ಕೋರ್ಟ್ ದರ್ಶನ್​ರ ಯಾವೆಲ್ಲ ಮನವಿಗಳನ್ನು ಪರಿಗಣಿಸುತ್ತೆ ಅನ್ನೊದನ್ನ ಕಾದು ನೋಡ್ಬೇಕಿದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories