ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಂಕೇತ್​ ಕೊಲೆ ಪ್ರಕರಣ : ಅನ್ಯಕೋಮಿನ ಐವರು ವಿದ್ಯಾರ್ಥಿಗಳು ವಶಕ್ಕೆ

ಶಿವಮೊಗ್ಗ ಹೊರವಲಯದ ಸೂಳೆಬೈಲು ಗ್ರಾಮದ ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿ ಸಂಕೇತ್​ ಕೊಲೆ ಪ್ರಕರಣ ಸಂಬಂಧ ತುಂಗಾ ನಗರದ ಪೊಲೀಸರು ಇದೇ ಗ್ರಾಮದ ಐವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಈ ಬಾಲಕರೇ ಸಂಕೇತ್​ನನ್ನು ಕೊಲೆಗೈದಿದ್ದು ಪೊಲೀಸರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ಇತ್ತ ಮೃತ ಸಂಕೇತ್​ ಶವವನ್ನು ಶಿವಮೊಗ್ಗದ ಮೆಗ್ಗಾನ್​ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು ಬಳಿಕ ಕುಟುಂಬಸ್ಥರಿಗೆ ಮೃತದೇಹ ರವಾನೆ ಮಾಡಲಾಗಿದೆ. ಶವಾಗಾರದ ಎದುರು ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದ್ದು ಸಂಕೇತ್​ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಏನಿದು ಪ್ರಕರಣ ?
ಎಸ್​.ಎಸ್​.ಎಲ್​.ಸಿ ವಿದ್ಯಾರ್ಥಿಯಾಗಿದ್ದ ಸಂಕೇತ್​ ನಿನ್ನೆ ರಾತ್ರಿ ಸ್ಪೆಶಲ್​ ಕ್ಲಾಸ್​ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇತರ ವಿದ್ಯಾರ್ಥಿಗಳು ಜಗಳ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ್ದ. ಈ ಜಗಳ ಬಿಡಿಸಲು ಹೋಗಿದ್ದ ಸಂಕೇತ್​ ಎದೆಗೆ ನಾಲ್ವರು ವಿದ್ಯಾರ್ಥಿಗಳು ಬಲವಾಗಿ ಗುದ್ದಿದ್ದರು. ಪ್ರಜ್ಞೆ ಕಳೆದುಕೊಂಡಿದ್ದ ಬಾಲಕ ಸಂಕೇತ್​ನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯ್ತಾದಾರೂ ಆತ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದ.

ಇದನ್ನೂ ಓದಿ: Kundapur Bus Accident : ಕುಂದಾಪುರ : ವಿದ್ಯಾರ್ಥಿಗಳಿದ್ದ ಬಸ್ ಉರುಳಿ ಅಪಘಾತ, ತಪ್ಪಿದ ಭಾರೀ ಅನಾಹುತ

ಈ ಬಾಲಕರೆಲ್ಲರೂ ಅದೇ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಗಲಾಟೆಯಲ್ಲಿ ಸಂಕೇತ್​ ಮತ್ತು ಗಿರೀಶ್​ ಎಂಬವರಿಗೆ ಗಾಯಗಳಾಗಿದೆ. ಗಿರೀಶ್​ನನ್ನು ಬಚಾವ್​ ಮಾಡಲು ಹೋದ ಸಂಕೇತ್​ ಮೇಲೆ ಅನ್ಯಕೋಮಿನ ಐವರು ಬಾಲಕರು ಹಲ್ಲೆ ನಡೆಸಿದ್ದರು. ಸದ್ಯ ಈ ಐವರು ಅನ್ಯಕೋಮಿನ ಬಾಲಕರನ್ನು ತುಂಗಾ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories