ಕುಲದೇವ ಸಾಲಿಗ್ರಾಮ ಶ್ರೀ ಗುರು ನರಸಿಂಹರ ದರ್ಶನ ಪಡೆದ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬ

Real Star Upendra | Shri Guru Narasimha in Saligrama: ಉಡುಪಿ: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ, ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಅವರು ಇಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕುಲದೇವರಾದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ದೇವಳಕ್ಕೆ ದೇವಳಕ್ಕೆ ಬೆಳಿಗ್ಗೆಯೇ ಆಗಮಿಸಿದ ದಂಪತಿಗಳು ಮೊದಲು ಶ್ರೀ ದೇವರ ದರ್ಶನ ಪಡೆದು ಕುಟುಂಬ ಸಮೇತರಾಗಿ ವಿಶೇಷ ಅರ್ಚನೆ ಮತ್ತು ಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ದೇವಳದ ವತಿಯಿಂದ ಸ್ವಾಗತ ನೀಡಿ, ಪ್ರಸಾದ ವಿತರಿಸಲಾಯಿತು.

ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಂಕೇತ್​ ಕೊಲೆ ಪ್ರಕರಣ : ಅನ್ಯಕೋಮಿನ ಐವರು ವಿದ್ಯಾರ್ಥಿಗಳು ವಶಕ್ಕೆ

ಕುಲದೇವರ ದರ್ಶನವು ಕುಟುಂಬದ ಪರಂಪರೆಯ ಭಾಗವಾಗಿದ್ದು, ವಿಶೇಷ ಸಂದರ್ಭಗಳಲ್ಲಿ ದೇವಳಕ್ಕೆ ಭೇಟಿ ನೀಡುವುದು ತಮ್ಮ ಸಂಪ್ರದಾಯ ಎಂದು ಉಪೇಂದ್ರ ತಿಳಿಸಿದರು. ದೇವರ ಆಶೀರ್ವಾದವನ್ನು ಪಡೆದು ಕುಟುಂಬ ಸಮೇತರಾಗಿ ಕೆಲವು ಕ್ಷಣಗಳು ದೇವಳ ಆವರಣದಲ್ಲಿ ಕಳೆದರು. ದಂಪತಿಗಳ ಆಗಮನದ ಸುದ್ದಿ ತಿಳಿದ ಸ್ಥಳೀಯ ಭಕ್ತರು ಹಾಗೂ ಅಭಿಮಾನಿಗಳು ದೇವಳದ ಬಳಿ ಸೇರಿ ಸಂತಸ ವ್ಯಕ್ತಪಡಿಸಿದರು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories