5 ಗಂಟೆ ಕೆಲಸ ಮಾಡಿ 1,000 ಗಳಿಸಿ! ಪಾರ್ಟ್ ಟೈಮ್ ಕೆಲಸದಲ್ಲಿ ಭರ್ಜರಿ ದುಡಿಮೆ, ಕನ್ನಡ ಕಟ್ಟುವ ಸಾಹಸ
Part Time Jobs in Bangalore: ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು:
Jobs in Bengaluru: ಬೆಂಗಳೂರು: ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಜೊತೆಗೆ ಆಸಕ್ತರಿಗೆ ಆದಾಯ ಗಳಿಸುವ ಅವಕಾಶವನ್ನು ‘ವೀರಲೋಕ ಬುಕ್ಸ್’ ಸಂಸ್ಥೆ (Veeraloka Books) ಕಲ್ಪಿಸಿಕೊಟ್ಟಿದೆ. ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪಾರ್ಟ್-ಟೈಮ್ (Part Time Jobs in Bangalore) ಸಿಬ್ಬಂದಿಗಳ ಅಗತ್ಯವಿದೆ.
ಉದ್ಯೋಗದ ವಿವರ:
-
ಕೆಲಸ: ಪ್ರತಿ ತಿಂಗಳ 2ನೇ ಭಾನುವಾರ ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡುವುದು.
-
ಸಮಯ: ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ (ಒಟ್ಟು 5.5 ಗಂಟೆಗಳು).
-
ಸಂಬಳ: ಕೇವಲ 5 ಗಂಟೆಗಳ ಕೆಲಸಕ್ಕೆ ₹1,000/- ಸಂಭಾವನೆ ನೀಡಲಾಗುವುದು.
ಯಾರು ಭಾಗವಹಿಸಬಹುದು?
ಕನ್ನಡ ಸಾಹಿತ್ಯದ ಮೇಲೆ ಅಭಿಮಾನವಿರುವ ವಿದ್ಯಾರ್ಥಿಗಳು ಮತ್ತು ಕನ್ನಡ ಕಟ್ಟುವ ಕೆಲಸದಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಈ ಕೆಲಸಕ್ಕೆ ಸೇರಬಹುದು. ಇದಕ್ಕೆ ಯಾವುದೇ ವಿಶೇಷ ಶೈಕ್ಷಣಿಕ ಅರ್ಹತೆ ಅಥವಾ ರೆಸ್ಯೂಮ್ (Resume) ಅವಶ್ಯಕತೆ ಇಲ್ಲ.
ಇನ್ನೊಂದು ಯುದ್ಧ ಶುರು? ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ
ಸಂಪರ್ಕಿಸಿ
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು:
-
ದೂರವಾಣಿ: 7022122121, 8861212172
-
ಇಮೇಲ್: veeralokamanager@gmail.com
ಇದು ಬರೀ ಆದಾಯ ತರುವ ಕೆಲಸವಲ್ಲ, ಕನ್ನಡವನ್ನು ಜನಮನಕ್ಕೆ ತಲುಪಿಸುವ ಒಂದು ಸತ್ಕಾರ್ಯ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.
[youtube https://www.youtube.com/watch?v=ApMaJ-7pro4]



