ರೇಣುಕಸ್ವಾಮಿ ಕೊಲೆ ಪ್ರಕರಣ : ಆರೋಪಿ ವಕೀಲರಿಗೆ ದಂಡ ವಿಧಿಸಿದ ನ್ಯಾಯಾಲಯ
ಪ್ರಕರಣದ ಮೂರನೇ ಆರೋಪಿ ಪವನ್ ಪರ ವಕೀಲರಿಂದ ಕೋರ್ಟ್ ದಂಡ ಕೂಡ ವಿಧಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳ ವಿರುದ್ಧವೇ ಗೂಬೆ ಕೂರಿಸಲು ಹೊರಟ ಆರೋಪಿ ಪರ ವಕೀಲರ ಕೋರ್ಟ್ನ ನ್ಯಾಯಾಧೀಶರಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗವೊಂದು ನಡೆದಿದೆ. ಪ್ರಕರಣದ ಮೂರನೇ ಆರೋಪಿ ಪವನ್ ಪರ ವಕೀಲರಿಂದ ಕೋರ್ಟ್ ದಂಡ ಕೂಡ ವಿಧಿಸಿದೆ.
ಬೆಂಗಳೂರಿ 57ನೇ ಸಿಸಿಎಚ್ ನ್ಯಾಯಾಲಯವು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಪ್ರಕರಣದ ಆರೋಪಿ ಪವನ್ ಪರ ವಕೀಲರು ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಹೊರಿಸಿದ್ದರು. ಪೊಲೀಸರು ಆರೋಪಿಗಳ ಮೊಬೈಲ್ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಫೋಟೋದಲ್ಲಿನ ಟೈಲ್ಸ್ ಬಣ್ಣ ಬದಲಾದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪವನ್ ಪರ ವಕೀಲರು ತನಿಖಾಧಿಕಾರಿ ಚಂದನ್ ವಿರುದ್ಧ ಸಾಕ್ಷ್ಯ ತಿದ್ದಿರುವ ಆರೋಪ ಮಾಡಿದ್ದರು.
ಆದರೆ ಈ ಸಂಬಂಧ ವಾದ – ವಿವಾದ ಆಲಿಸಿದ ನ್ಯಾಯಾಧೀಶರು, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ಅಲ್ಲದೇ ಕೋರ್ಟ್ನ ಅಮೂಲ್ಯ ಸಮಯ ವ್ಯರ್ಥ ಮಾಡಿದ ಪವನ್ ಪರ ವಕೀಲರಿಗೆ ನ್ಯಾಯಾಧೀಶರು 5000 ರೂಪಾಯಿಗಳ ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪವನ್ ಪರ ವಕೀಲರು ಪಾವತಿ ಮಾಡಬೇಕಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ನಟ ದರ್ಶನ್‌ಗೆ ಬಿಗ್ ರಿಲೀಫ್
ಇನ್ನು ಈ ನಡುವೆ ಜೈಲಿನ ಒಳಸಂದರ್ಶನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ ಆರೋಪಿ ದರ್ಶನ್ ಮನವಿಗೆ ಕೋರ್ಟ್ ಸಮ್ಮತಿ ಸೂಚಿಸಿದೆ. ಆದರೆ ಜೈಲು ಸೂಪರಿಟೆಂಡೆಂಟ್ಗೆ ಅಂತಿಮ ಅಧಿಕಾರ ನೀಡಲಾಗಿದೆ. ಸೂಪರಿಟೆಂಡೆಂಟ್ ಅನುಮತಿ ನೀಡಿದರೆ ಮಾತ್ರ ಈ ಅವಕಾಶ ದರ್ಶನ್‌ಗೆ ಸಿಗಲಿದೆ. ಭದ್ರತಾ ಕಾರಣ ನೀಡಿದ ಸೂಪರಿಟೆಂಡೆಂಟ್ ಅನುಮತಿ ನಿರಾಕರಿಸಿದರೆ ನ್ಯಾಯಾಲಯದ ಆದೇಶ ಮಾನ್ಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ .



