ಭಾರತಕ್ಕೆ ಮತ್ತಷ್ಟು ‘ಗ್ಯಾಸ್​ ಸಂಕಷ್ಟ’ : ಕತಾರ್​ನ ಪ್ರಮುಖ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್ ದಾಳಿ

ಇಡೀ ವಿಶ್ವಕ್ಕೆ 17 ಪ್ರತಿಶತ ಎಲ್​ಪಿಜಿ ಅನಿಲ ಪೂರೈಕೆ ಮಾಡುವ ಕತಾರ್​ನ ಜಗತ್ತಿನ ಅತೀ ದೊಡ್ಡ ಅನಿಲ ಘಟಕದ ಇರಾನ್​​ ಕ್ಷಿಪಣಿ ದಾಳಿ ನಡೆಸಿದೆ.

ಅಮೆರಿಕ-ಇಸ್ರೇಲ್​ ಹಾಗೂ ಇರಾನ್​ ನಡುವಿನ ಯುದ್ಧದಿಂದಾಗಿ ಸಂಪೂರ್ಣ ವಿಶ್ವವೇ ತಲ್ಲಣಿಸಿದೆ. ಭಾರತವಂತೂ ಅಗತ್ಯ ಪ್ರಮಾಣದಲ್ಲಿ ಗ್ಯಾಸ್​ ಪೂರೈಕೆ ಮಾಡಲಾಗದೇ ತೀವ್ರ ಸಂಕಷ್ಟದಲ್ಲಿದೆ. ವಾಣಿಜ್ಯ ಸಿಲಿಂಡರ್​ ಅವಲಂಬಿಸಿ ನಡೆಯುವ ಎಲ್ಲಾ ಉದ್ಯಮಗಳು ನೆಲಕಚ್ಚುವ ಅಪಾಯದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಮತ್ತೊಂದು ಶಾಕ್​ ಎದುರಾಗಿದೆ. ಇಡೀ ವಿಶ್ವಕ್ಕೆ 17 ಪ್ರತಿಶತ ಎಲ್​ಪಿಜಿ ಅನಿಲ ಪೂರೈಕೆ ಮಾಡುವ ಕತಾರ್​ನ ಜಗತ್ತಿನ ಅತೀ ದೊಡ್ಡ ಅನಿಲ ಘಟಕದ ಇರಾನ್​​ ಕ್ಷಿಪಣಿ ದಾಳಿ ನಡೆಸಿದೆ.

ಇರಾನ್​ನ ಈ ಕ್ಷಿಪಣಿ ದಾಳಿಯಿಂದಾಗಿ ಭಾರತದ ಗ್ಯಾಸ್​ ಟ್ರಬಲ್​ ಮತ್ತಷ್ಟು ಹೆಚ್ಚಲಿದೆ. ಭಾರತಕ್ಕೆ ಅವಶ್ಯವಿರುವ ನೈಸರ್ಗಿಕ ಅನಿಲ ಶೇಕಡಾ 47ರಷ್ಟು ಕತಾರ್​ನಿಂದಲೇ ಪೂರೈಕೆ ಆಗುತ್ತಿತ್ತು. ಇಷ್ಟು ದಿನ ಹಾರ್ಮುಜ್​ ಜಲಸಂಧಿಯ ಬಂದ್​ನಿಂದಲೇ ಈ ಮಟ್ಟಿಗೆ ಎಫೆಕ್ಟ್​ ಅನುಭವಿಸಿದ್ದ ಭಾರತಕ್ಕೆ ಇರಾನ್​ನ ಈ ದಾಳಿ ಬಹುದೊಡ್ಡ ಮರ್ಮಾಘಾತವನ್ನೇ ನೀಡಿದೆ. ಈ ಅನಿಲ ಘಟಕ ದುರಸ್ಥಿ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ 5 ವರ್ಷ ಬೇಕಾಗಲಿದ್ದು. ಅಲ್ಲಿಯವರೆಗೂ ಭಾರತ ನೈಸರ್ಗಿಕ ಅನಿಲ ಪೂರೈಕೆಗೆ ಯಾವ ಮಾರ್ಗ ಕಂಡುಕೊಳ್ಳುತ್ತದೆ ಎಂಬುದೇ ಸದ್ಯದ ಯಕ್ಷಪ್ರಶ್ನೆಯಾಗಿದೆ.

Also Read:  ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ಹೊಸ ಇತಿಹಾಸ : ಇಸ್ರೇಲ್​ ಸಂಸತ್ತಿನ ಅತ್ಯುನ್ನತ ಗೌರವ ಪಡೆದ ವಿಶ್ವ ಮೊದಲ ನಾಯಕ ಗರಿಮೆ

ಯುದ್ಧದಿಂದ ಉಂಟಾಗಿರುವ ಗ್ಯಾಸ್​ ಎಮೆರ್ಜೆನ್ಸಿ ಇದೀಗ ಕರ್ನಾಟಕದ ಪ್ರತಿಷ್ಠಿತ ಕೆಎಂಎಫ್​ಗೂ ತಟ್ಟಿದೆ. ನಂದಿನಿ ಹಾಲಿನ ಉತ್ಪನ್ನಗಳ ತಯಾರಿಕೆಗೆ ಪ್ರತಿ ತಿಂಗಳು 428 ವಾಣಿಜ್ಯ ಸಿಲಿಂಡರ್​ಗಳನ್ನು ಕೆಎಂಎಫ್​ ಬಳಕೆ ಮಾಡುತ್ತಿದೆ. ಆದರೆ ಈಗ ಕೆಎಂಎಫ್​ನಲ್ಲಿಯೂ ವಾಣಿಜ್ಯ ಸಿಲಿಂಡರ್​ನ ಅಭಾವ ಸೃಷ್ಠಿಯಾಗಿದ್ದು ಗ್ಯಾಸ್​ ಪೂರೈಕೆಗಾಗಿ ಐಓಸಿ ಮೊರೆ ಹೋಗಿದೆ. ಇಂಡಿಯನ್​ ಆಯಿಲ್​ಗೆ ಪತ್ರ ಬರೆದಿರುವ ಕೆಎಂಎಫ್​ ಹೆಚ್ಚಿನ ವಾಣಿಜ್ಯ ಸಿಲಿಂಡರ್​ ಪೂರೈಕೆಗೆ ಮನವಿ ಮಾಡಿದೆ.

Further gas crisis for India Iran attack on Qatars major natural gas plant

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories