ಆಪಲ್ 50ನೇ ವಾರ್ಷಿಕೋತ್ಸವ ಸಂಭ್ರಮ: iPhone 17 Pro Max ಭರ್ಜರಿ ಡಿಸ್ಕೌಂಟ್, ಅತೀ ಕಡಿಮೆ ಬೆಲೆಗೆ ಆಪಲ್ ಉತ್ಪನ್ನ
ಅಧಿಕೃತ ರಿಸೆಲ್ಲರ್ ಆಗಿರುವ 'ಮೈ ಇಮ್ಯಾಜಿನ್ ಸ್ಟೋರ್' (MyImagine Store) ಮೂಲಕ ಈ ಕೊಡುಗೆಗಳು ಲಭ್ಯವಿದ್ದು, ನೇರ ರಿಯಾಯಿತಿ, ಕ್ಯಾಶ್ಬ್ಯಾಕ್ ಮತ್ತು ಎಕ್ಸ್ಚೇಂಜ್ ಆಫರ್ಗಳ ಲಾಭವನ್ನು ಗ್ರಾಹಕರು ಪಡೆಯಬಹುದಾಗಿದೆ.

ಟೆಕ್ ದೈತ್ಯ ಆಪಲ್ ಸಂಸ್ಥೆಯು ತನ್ನ 50ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಈ ವಿಶೇಷ ಸಂದರ್ಭವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲು ಮುಂದಾಗಿದೆ. ತನ್ನ ಇತ್ತೀಚಿನ ಐಫೋನ್ 17 ಸರಣಿ ಸೇರಿದಂತೆ ಐಪ್ಯಾಡ್ಗಳು ಮತ್ತು ಆಪಲ್ ವಾಚ್ಗಳ ಮೇಲೆ ಹಿಂದೆಂದೂ ಕಾಣದ ಭರ್ಜರಿ ಬೆಲೆ ಕಡಿತ ಹಾಗೂ ಆಕರ್ಷಕ ಆಫರ್ಗಳನ್ನು ಘೋಷಿಸಿದೆ.
ನೀವು ಹೊಸ ಐಫೋನ್ ಅಥವಾ ಆಪಲ್ ಉತ್ಪನ್ನಗಳನ್ನು ಖರೀದಿಸಲು ಕಾಯುತ್ತಿದ್ದರೆ, ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. ಪ್ರಮುಖ ಅಧಿಕೃತ ರಿಸೆಲ್ಲರ್ ಆಗಿರುವ ‘ಮೈ ಇಮ್ಯಾಜಿನ್ ಸ್ಟೋರ್’ (MyImagine Store) ಮೂಲಕ ಈ ಕೊಡುಗೆಗಳು ಲಭ್ಯವಿದ್ದು, ನೇರ ರಿಯಾಯಿತಿ, ಕ್ಯಾಶ್ಬ್ಯಾಕ್ ಮತ್ತು ಎಕ್ಸ್ಚೇಂಜ್ ಆಫರ್ಗಳ ಲಾಭವನ್ನು ಗ್ರಾಹಕರು ಪಡೆಯಬಹುದಾಗಿದೆ.
iPhone 17 Pro Max ಮೇಲೆ ಸಿಗಲಿದೆ ಭಾರಿ ರಿಯಾಯಿತಿ
ಆಪಲ್ನ ಅತ್ಯಂತ ಪ್ರೀಮಿಯಂ ಫೋನ್ ಎನಿಸಿಕೊಂಡಿರುವ iPhone 17 Pro Max ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಇದರ ಮೂಲ ಬೆಲೆ ಸುಮಾರು 1,49,900 ರೂಪಾಯಿಗಳಷ್ಟಿದೆ. ಆದರೆ ವಾರ್ಷಿಕೋತ್ಸವದ ಆಫರ್ನಲ್ಲಿ ನೇರ ರಿಯಾಯಿತಿ, ಕ್ಯಾಶ್ಬ್ಯಾಕ್ ಮತ್ತು ಹಳೆಯ ಫೋನ್ ಎಕ್ಸ್ಚೇಂಜ್ ಕೊಡುಗೆಗಳನ್ನು ಬಳಸಿಕೊಂಡರೆ, ಇದನ್ನು ಕೇವಲ 1,02,900 ರೂಪಾಯಿಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. ಇದರೊಂದಿಗೆ ಗ್ರಾಹಕರಿಗೆ ಹೆಚ್ಚುವರಿಯಾಗಿ 1,000 ರೂ.ಗಳ ಇನ್ಸ್ಟಂಟ್ ಸೇವಿಂಗ್ಸ್ ಮತ್ತು 4,000 ರೂ.ಗಳವರೆಗೆ ಬ್ಯಾಂಕ್ ಕ್ಯಾಶ್ಬ್ಯಾಕ್ ಕೂಡ ಲಭ್ಯವಿದೆ.
Also Read : Redmi 15A 5G ಲಾಂಚ್: ಕೇವಲ 12,999 ರೂಪಾಯಿಗೆ 6,300mAh ಬ್ಯಾಟರಿ, 120Hz ಡಿಸ್ಪ್ಲೇ
iPhone 17 Pro ಮತ್ತು iPhone Air ಮೇಲೆ ಆಫರ್ ಮಹಾಪೂರ
ಐಫೋನ್ 17 ಪ್ರೊ ಸರಣಿಯಲ್ಲೂ ಉತ್ತಮ ಉಳಿತಾಯಕ್ಕೆ ಅವಕಾಶವಿದೆ. iPhone 17 Pro 256GB ಮಾದರಿಯ ಮೂಲ ಬೆಲೆ 82,900 ರೂಪಾಯಿಗಳಾಗಿದ್ದು, ಎಲ್ಲಾ ಆಫರ್ಗಳನ್ನು ಸೇರಿಸಿದರೆ ಗ್ರಾಹಕರು ಇದನ್ನು ಕೇವಲ 37,900 ರೂಪಾಯಿಗಳ ಆಕರ್ಷಕ ಬೆಲೆಗೆ ಪಡೆಯಬಹುದು. ಹಾಗೆಯೇ ಇದರ 512GB ಮಾದರಿಯು 57,900 ರೂಪಾಯಿಗಳಿಗೆ ಲಭ್ಯವಿದೆ.
ಇನ್ನು ಇದೇ ಮೊದಲ ಬಾರಿಗೆ iPhone Air ಮಾದರಿಗಳ ಮೇಲೂ ಆಫರ್ ನೀಡಲಾಗುತ್ತಿದೆ. ಇದರ 256GB ಆವೃತ್ತಿ 56,900 ರೂಪಾಯಿಗಳಿಗೆ ಹಾಗೂ 512GB ಆವೃತ್ತಿ 76,900 ರೂಪಾಯಿಗಳಿಗೆ ಸಿಗಲಿದೆ. ಆರ್ಥಿಕ ಹೊರೆ ತಗ್ಗಿಸಲು ಆಪಲ್ 24 ತಿಂಗಳವರೆಗೆ ನೋ-ಕಾಸ್ಟ್ ಇಎಂಐ (No-cost EMI) ಸೌಲಭ್ಯವನ್ನೂ ನೀಡುತ್ತಿದ್ದು, ತಿಂಗಳಿಗೆ ಕೇವಲ 3,413 ರೂಪಾಯಿಗಳಿಂದ ಕಂತುಗಳು ಪ್ರಾರಂಭವಾಗುತ್ತವೆ.
Also Read : Oppo Find X9s Pro : 200MP ಕ್ಯಾಮೆರಾ, 7000mAh ಬ್ಯಾಟರಿ ಒಪ್ಪೋ ಫೈಂಡ್ ಎಕ್ಸ್9ಎಸ್ ಪ್ರೊ ಏಪ್ರಿಲ್ 21ಕ್ಕೆ ಲಾಂಚ್
ಐಪ್ಯಾಡ್ ಮತ್ತು ಆಪಲ್ ವಾಚ್ ಅಲ್ಟ್ರಾ 3 ಮೇಲೂ ರಿಯಾಯಿತಿ
ಕೇವಲ ಐಫೋನ್ ಮಾತ್ರವಲ್ಲದೆ ಆಪಲ್ನ ಇತರೆ ಸಾಧನಗಳೂ ಈ ಸೇಲ್ನಲ್ಲಿ ಅಗ್ಗವಾಗಿವೆ:
- iPad 2025 (128GB): ಇದರ ಬೆಲೆ 34,900 ರೂ.ಗಳಿಂದ 31,900 ರೂ.ಗಳಿಗೆ ಇಳಿಕೆಯಾಗಿದೆ.
- iPad Pro M5 (256GB): ವೈ-ಫೈ ಮಾದರಿಯು 94,900 ರೂಪಾಯಿಗಳಿಗೆ ಲಭ್ಯವಿದ್ದರೆ, 13-ಇಂಚಿನ ಮಾದರಿಯು 1,24,900 ರೂಪಾಯಿಗಳಿಗೆ ಲಭ್ಯವಿದೆ.
- Apple Watch Ultra 3: 89,900 ರೂ. ಮೂಲ ಬೆಲೆಯ ಈ ವಾಚ್ ಈಗ 84,400 ರೂ.ಗಳಿಗೆ ಸಿಗುತ್ತಿದೆ. ಜೊತೆಗೆ ಬ್ಯಾಂಕ್ ಕ್ಯಾಶ್ಬ್ಯಾಕ್ ರೂಪದಲ್ಲಿ ಹೆಚ್ಚುವರಿ 5,500 ರೂ.ಗಳವರೆಗೆ ಉಳಿತಾಯ ಮಾಡಬಹುದು.
ಒಟ್ಟಾರೆಯಾಗಿ ಆಪಲ್ ಪ್ರಿಯರಿಗೆ ಇದು ಹಬ್ಬದ ಸಂಭ್ರಮ ತಂದಿದ್ದು, ಸ್ಟಾಕ್ ಇರುವವರೆಗೆ ಈ ಆಫರ್ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.
Apple 50th Anniversary Sale iPhone 17 Pro Max Discounts Kannada



