Oppo Find X9s Pro : 200MP ಕ್ಯಾಮೆರಾ, 7000mAh ಬ್ಯಾಟರಿ ಒಪ್ಪೋ ಫೈಂಡ್ ಎಕ್ಸ್9ಎಸ್ ಪ್ರೊ ಏಪ್ರಿಲ್ 21ಕ್ಕೆ ಲಾಂಚ್

ಈ ಫೋನ್‌ನ ಪ್ರಮುಖ ಆಕರ್ಷಣೆಯೇ ಇದರ ಕ್ಯಾಮೆರಾ. ಇದರ ಹಿಂಭಾಗದಲ್ಲಿ ಎರಡು 200 ಮೆಗಾಪಿಕ್ಸೆಲ್ ಸಾಮರ್ಥ್ಯದ ಲೆನ್ಸ್‌ಗಳನ್ನು ನೀಡಲಾಗಿದೆ. ಒಂದು ಪ್ರೈಮರಿ ಕ್ಯಾಮೆರಾವಾಗಿದ್ದರೆ, ಮತ್ತೊಂದು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಆಗಿರಲಿದೆ.

Oppo Find X9s Pro : ಸ್ಮಾರ್ಟ್‌ಫೋನ್ ಲೋಕದ ದಿಗ್ಗಜ ಕಂಪನಿಗಳಲ್ಲಿ ಒಂದಾದ ಒಪ್ಪೋ (Oppo), ತನ್ನ ಬಹುನಿರೀಕ್ಷಿತ ‘ಫೈಂಡ್ ಎಕ್ಸ್9ಎಸ್ ಪ್ರೊ’ (Oppo Find X9s Pro) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಏಪ್ರಿಲ್ 21 ರಂದು ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ಅಧಿಕೃತವಾಗಿ ಲಾಂಚ್ ಆಗಲಿದ್ದು, ಇದರ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಗೂ ಲಗ್ಗೆ ಇಡಲಿದೆ. ಕಾಂಪ್ಯಾಕ್ಟ್ ವಿನ್ಯಾಸದ ಜೊತೆಗೆ ಈ ಫೋನ್‌ನಲ್ಲಿ ನೀಡಿರುವ ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯವು ಈಗ ಟೆಕ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ಡಿಜಿಟಲ್ ಚಾಟ್ ಸ್ಟೇಷನ್‌ನಿಂದ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಈ ಫೋನ್ ಹಲವು ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ:

ಒಪ್ಪೋ ಫೈಂಡ್ ಎಕ್ಸ್9ಎಸ್ ಪ್ರೊ : ಡ್ಯುಯಲ್ 200MP ಕ್ಯಾಮೆರಾ

ಈ ಫೋನ್‌ನ ಪ್ರಮುಖ ಆಕರ್ಷಣೆಯೇ ಇದರ ಕ್ಯಾಮೆರಾ. ಇದರ ಹಿಂಭಾಗದಲ್ಲಿ ಎರಡು 200 ಮೆಗಾಪಿಕ್ಸೆಲ್ ಸಾಮರ್ಥ್ಯದ ಲೆನ್ಸ್‌ಗಳನ್ನು ನೀಡಲಾಗಿದೆ. ಒಂದು ಪ್ರೈಮರಿ ಕ್ಯಾಮೆರಾವಾಗಿದ್ದರೆ, ಮತ್ತೊಂದು ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಆಗಿರಲಿದೆ. ಸ್ಯಾಮ್‌ಸಂಗ್‌ನ HP5 ಸೆನ್ಸಾರ್ ಅನ್ನು ಇಲ್ಲಿ ಬಳಸಲಾಗಿದ್ದು, ಇದು ಅತ್ಯುತ್ತಮ ಗುಣಮಟ್ಟದ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಸಹಕಾರಿಯಾಗಿದೆ. ಇದರ ಜೊತೆಗೆ 50MP ಅಲ್ಟ್ರಾ-ವೈಡ್ ಕ್ಯಾಮೆರಾವೂ ಇರಲಿದೆ ಎನ್ನಲಾಗಿದೆ.

Also Read : ಭಾರತದಲ್ಲಿ ರಿಯಲ್‌ ಮೀ ( Realme 16 5G) ಅಬ್ಬರ : ಅತೀ ಕಡಿಮೆ ಬೆಲೆ, ದೀರ್ಘಾವದಿ ಬ್ಯಾಟರಿ

ಒಪ್ಪೋ ಫೈಂಡ್ ಎಕ್ಸ್9ಎಸ್ ಪ್ರೊ :  7000mAh ಬ್ಯಾಟರಿ ಮತ್ತು  ಡಿಸ್‌ಪ್ಲೇ

ಸಾಮಾನ್ಯವಾಗಿ ಕಾಂಪ್ಯಾಕ್ಟ್ ಫೋನ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯ ಕಡಿಮೆ ಇರುತ್ತದೆ. ಆದರೆ ಒಪ್ಪೋ ಇಲ್ಲಿ ಮ್ಯಾಜಿಕ್ ಮಾಡಿದೆ. ಈ ಫೋನ್‌ನಲ್ಲಿ 7025mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಿದ್ದು, ಇದು ದೀರ್ಘಕಾಲದ ಬ್ಯಾಕಪ್ ನೀಡಲಿದೆ. ಇದಕ್ಕೆ ಪೂರಕವಾಗಿ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಇರಲಿದೆ. ಇನ್ನು ಡಿಸ್‌ಪ್ಲೇ ವಿಚಾರಕ್ಕೆ ಬಂದರೆ, ಇದು 6.32-ಇಂಚಿನ 1.5K ರೆಸಲ್ಯೂಶನ್ ಹೊಂದಿದ್ದು, 144Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ.

Also Read : ಶಿಯೋಮಿ 18 ಪ್ರೊ ಮ್ಯಾಕ್ಸ್ ಲೀಕ್: ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಹೊಸ ಕ್ರಾಂತಿ; ಬರಲಿದೆ ಡ್ಯುಯಲ್ 200MP ಕ್ಯಾಮೆರಾ

ಒಪ್ಪೋ ಫೈಂಡ್ ಎಕ್ಸ್9ಎಸ್ ಪ್ರೊ ಪವರ್‌ಫುಲ್ ಪ್ರೊಸೆಸರ್ ಮತ್ತು ವಿನ್ಯಾಸ

Oppo Find X9s Pro ಫೋನ್ Dimensity 9500 ಚಿಪ್‌ಸೆಟ್ ಹೊಂದಿರಲಿದ್ದು, 12GB ಇಂದ 16GB ವರೆಗೆ RAM ಹಾಗೂ 1TB ವರೆಗೆ ಸ್ಟೋರೇಜ್ ಆಯ್ಕೆಗಳನ್ನು ಹೊಂದಿರಲಿದೆ. ಇದು ಲೇಟೆಸ್ಟ್ ಆಂಡ್ರಾಯ್ಡ್ 16 ಆಧಾರಿತ ಕಲರ್ ಓಎಸ್ (ColorOS 16) ನಲ್ಲಿ ಕಾರ್ಯನಿರ್ವಹಿಸಲಿದೆ. ಟೈಟಾನಿಯಂ, ಬಿಳಿ, ಸಯಾನ್ ಮತ್ತು ಆರೆಂಜ್ ಎಂಬ ಆಕರ್ಷಕ ಬಣ್ಣಗಳಲ್ಲಿ ಈ ಫೋನ್ ಲಭ್ಯವಿರಲಿದೆ.

ಕಡಿಮೆ ಗಾತ್ರದ ಫೋನ್ ಬೇಕು ಆದರೆ ಫೀಚರ್‌ಗಳು ಮಾತ್ರ ಅತ್ಯಾಧುನಿಕವಾಗಿರಬೇಕು ಎಂದು ಬಯಸುವವರಿಗೆ ಇದು ಹೇಳಿ ಮಾಡಿಸಿದ ಫೋನ್ ಆಗಲಿದೆ.

Oppo Find X9s Pro Launch Date Price Specifications Kannada

 

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories