Cooler Cleaning Tips: ತಿಂಗಳುಗಳ ಕಾಲ ಮೂಲೆ ಸೇರಿದ್ದ ಕೂಲರ್ ಸ್ವಚ್ಛಗೊಳಿಸಲು ಇಲ್ಲಿದೆ ಸುಲಭದ ಉಪಾಯ
ಬಹಳ ದಿನಗಳ ಕಾಲ ರೂಂನಲ್ಲಿಟ್ಟದ್ದ ಕೂಲರ್‌ನಲ್ಲಿ ಧೂಳು, ಕೊಳಕು, ತುಕ್ಕು ಮತ್ತು ಫಂಗಸ್ ಸಂಗ್ರಹವಾಗಿರುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಅದನ್ನು ಬಳಕೆ ಮಾಡುವ ಮೊದಲು ಸ್ವಚ್ಛಗೊಳಿಸುವುದು ಬಹಳ ಮುಖ್ಯ.

Cooler Cleaning Tips: ಬೇಸಿಗೆ ಪ್ರಾರಂಭವಾಗಿದೆ. ಬಿರು ಬಿಸಿಲಿಗೆ ತಂಪು ಗಾಳಿಗೆ ಮೈಯೊಡ್ಡಬೇಕೆನಿಸುವುದು ಸಹಜ. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ತಿಂಗಳುಗಳ ಕಾಲ ಸ್ಟೋರ್ ರೂಂ ನಲ್ಲಿದ್ದ ಕೂಲರ್ ಹೊರೆತೆಗೆಯುತ್ತಾರೆ. ಬಹಳ ದಿನಗಳ ಕಾಲ ರೂಂನಲ್ಲಿಟ್ಟದ್ದ ಕೂಲರ್‌ನಲ್ಲಿ ಧೂಳು, ಕೊಳಕು, ತುಕ್ಕು ಮತ್ತು ಫಂಗಸ್ ಸಂಗ್ರಹವಾಗಿರುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಅದನ್ನು ಬಳಕೆ ಮಾಡುವ ಮೊದಲು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಕೂಲರ್ ಸ್ವಚ್ಛಗೊಳಿಸಲು ಬಹಳಷ್ಟು ಕಷ್ಟ ಪಡಬೇಕೆಂದಿಲ್ಲ. ಸ್ವಲ್ವ ಸಾಮನ್ಯ ಜ್ಞಾನವಿದ್ದರೆ ಸುಲಭವಾಗಿ ಸ್ವಚ್ಛಮಾಡಬಹುದು. ಹೆಚ್ಚು ಖರ್ಚು ಮಾಡದೇ ಶುದ್ಧ ಮತ್ತು ತಂಪಾದ ಗಾಳಿ ಪಡೆಯಲು ಇಲ್ಲಿದೆ ಟಿಪ್ಸ್.
ಕೂಲರ್ ಬಳಸುವ ಮೊದಲು ಅದನ್ನು ಈ ರೀತಿಯಾಗಿ ಸ್ವಚ್ಛಮಾಡಿ
- ಮೊದಲಿಗೆ ಸ್ಟೋರ್ ರೂಂನಿಂದ ಕೂಲರ್ ಹೊರ ತಂದ ತಕ್ಷಣ ಅದನ್ನು ಆನ್ ಮಾಡಬೇಡಿ. ಒಣ ಬಟ್ಟೆಯಿಂದ ಅದರ ಮೇಲಿರುವ ಧೂಳು ಜಾಡಿಸಿ. ನಂತರ ಸೌಮ್ಯವಾದ ಶ್ಯಾಂಪೂವನ್ನು ನೀರಿಗೆ ಹಾಕಿ ಬರೆಸಿ. ಅದರಲ್ಲಿ ಬಟ್ಟೆ ಅಥವಾ ಸ್ಪೋಂಜ್ ಅದ್ದಿ, ಕೂಲರ್‌ನ ಹೊರಭಾಗವನ್ನು ಒರೆಸಿ. ನಂತರ ಒಣ ಶುಭ್ರ ಬಟ್ಟೆಯಿಂದ ಮತ್ತೊಮ್ಮೆ ಒರೆಸಿ.
-
ಕೂಲರ್‌ನಿಂದ ತಂಪು ಗಾಳಿ ಬರುವ ಸಲುವಾಗಿ ಇರುವ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ. ಹೇಗೆಂದರೆ ಮೊದಲಿಗೆ ಬಿಳಿ ವಿನೆಗರ್ ಅನ್ನು ನೀರಿನೊಂದಿಗೆ ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದು ಬ್ಯಾಕ್ಟೀರಿಯಾ, ಫಂಗಸ್ ತೊಡೆದುಹಾಕಲು ಸಹಾಯ ಮಾಡುತ್ತದೆ. ದ್ರಾವಣದ ಸಹಾಯದಿಂದ ನೀರಿನ ಟ್ಯಾಂಕ್ ಸ್ವಚ್ಛಮಾಡಿ. ಹೀಗೆ ಮಾಡುವುದರಿಂದ ಫಂಗಸ್‌ನಿಂದ ಉಂಟಾಗಬಹುದಾದ ಖಾಯಿಲೆಗಳಿಂದ ಮುಕ್ತವಾಗಬಹುದು.
-
ಈಗ ಕೂಲ್ ಪ್ಯಾಡ್‌ಗಳನ್ನು ಸ್ವಚ್ಛಗೊಳಿಸುವ ಬಾರಿ. ಅದನ್ನು ನಿಧಾನವಾಗಿ ಹೊರತೆಗೆಯಿರಿ. ಸ್ವಲ್ಪ ಬೆಚ್ಚಗಿನ ನೀರಿಗೆ ವಿನೆಗರ್ ಅಥವಾ ಅಡುಗೆ ಸೋಡಾ ಹಾಕಿ ದ್ರಾವಣ ತಯಾರಿಸಿಕೊಳ್ಳಿ. ಇದರಿಂದ ಕೂಲ್ ಪ್ಯಾಡ್‌ಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಕೊಳಕಿ ಮತ್ತು ವಾಸನೆ ದೂರವಾಗುತ್ತದೆ.
ಇದನ್ನೂ ಓದಿ: ಆಕಳಿಕೆಗೂ ಮಿದುಳಿಗೂ ಏನು ಸಂಬಂಧ? ಈ ವಿಶೇಷ ಪ್ರತಿಕ್ರೆಯೆಯ ಹಿಂದಿರುವ ಕಾರಣ ತಿಳಿಯಿರಿ
-
ಈಗ ಫ್ಯಾನ್ ಮತ್ತು ಬ್ಲೇಡ್ ಸ್ವಚ್ಛಗೊಳಿಸಿ. ಅದಕ್ಕೆ ಮೃದುವಾದ ಬ್ರೆಷ್ ತೆಗೆದುಕೊಳ್ಳಿ ಅದರ ಸಹಾಯದಿಂದ ಫ್ಯಾನ್ ಮತ್ತು ಬ್ಲೇಡ್ ಸ್ವಚ್ಛಗೊಳಿಸಿ.
-
ಕೂಲರ್ ಆನ್ ಮಾಡುವ ಮೊದಲು ನೀರಿನ ಟ್ಯಾಂಕ್‌ಗೆ ನೀರು ತುಂಬಬೇಕಾಗುತ್ತದೆ. ಅದಕ್ಕೆ ಒಂದೆರಡು ಹನಿ ಆಂಟಿಸೆಪ್ಟಿಕ್ ಹಾಕಿ. ಇದರಿಂದ ಬ್ಯಾಕ್ಟೀರಿಯಾದಿಂದಾಗುವ ಹಾನಿ ತಪ್ಪಿಸಬಹುದು.
ಈ ಮೇಲಿನ ಸರಳ 5 ಹಂತಗಳನ್ನು ಪಾಲಿಸಿ ನಿಮ್ಮ ಮನೆಯ ಕೂಲರ್ ಅನ್ನು ಹೊಸತರಂತೆ ಹೊಳೆಯುವಂತೆ ಮಾಡಿ.
air cooler cleaning tips kannada News



