PUC Result 2026 : ಉಡುಪಿ ಪ್ರಥಮ, ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್‌ನ ದೀಕ್ಷಾ ರಾಜ್ಯಕ್ಕೆ ಪ್ರಥಮ

PUC Result 2026 : ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಕರ್ನಾಟಕದಲ್ಲಿ ಒಟ್ಟಾರೆ 86.48% ಫಲಿತಾಂಶ ದಾಖಲಾಗಿದ್ದು, ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್‌  ಮೂಡಬಿದಿರೆಯ ದಿಶಾ ಹಾಗೂ ಬೆಂಗಳೂರಿನ ಅದಿತಿ 600ಕ್ಕೆ 600 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲಾ ಕಾರ್ಡೋಜಾ ಟಾಪರ್ ಆಗಿದ್ರೆ, ಕಲಾ ವಿಭಾಗದಲ್ಲಿ ಅರ್ಚನಾ ಡಿ.ಎಂ. ಹಾಗೂ ಸಂಗೀತಾ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ : ಮಂಗಳೂರಿನ ಪ್ರಿನ್ಸಿಲಾ ಕಾರ್ಡೋಜಾ ಪ್ರಥಮ 

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವಿಭಾಗಗಳ ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ದಿ ಲರ್ನಿಂಗ್‌ ಸೆಂಟರ್‌ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರಿನ್ಸಿಲಾ ಕಾರ್ಡೋಜಾ 599 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್‌ ಆಗಿದ್ರೆ, ಆಳ್ವಾಸ್‌ ಪಿಯು ಕಾಲೇಜಿನ ರಶ್ಮಿತಾ ಮಂಜುನಾಥ್‌, ಪುತ್ತೂರಿನ ವಿವೇಕಾನಂದ ಕಾಲೇಜಿನ ಅಭಿರಾಮ್‌ ವಿ ಭಟ್‌, ಬೆಂಗಳೂರಿನ ಬೇಸ್‌ ಪಿಯು ಕಾಲೇಜಿನ ಏಂಜೆಲ್‌ ತಿವಾರಿ, ಹುಕ್ಕೇರಿಯ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಅಂಕಿತ್‌ ಬಿ. ಕರಟಗಿ, ಮೂಡಬಿದಿರೆಯ ನ್ಯೂ ವೈಬ್ರೆಂಟ್‌ ಪಿಯು ಕಾಲೇಜಿನ ಧನುಷ್‌ ಗುಟ್ಟಿ, ದಿ ಲರ್ನಿಂಗ್‌ ಸೆಂಟರ್‌ ಪಿಯು ಕಾಲೇಜಿನ ಮೀನಾಕ್ಷಿ ಉನ್ನಿತನ್‌, ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ನಂದನ್‌ ನಾಯಕ್‌, ಬೆಂಗಳೂರಿನ ಆಕ್ಸ್‌ಪರ್ಡ್‌ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಸಾಯಿ ರಾಘವ ವಿಶ್ವೇಶ್‌ 598 ಅಂಕ ಪಡೆಯುವ ಮೂಲಕ ಎರಡನೇ ರಾಂಕ್‌ ಪಡೆದಿದ್ದಾರೆ.

ವಾಣಿಜ್ಯ ವಿಭಾಗ : ಆಳ್ವಾಸ್‌ ಮೂಡಬಿದಿರೆಯ ದಿಶಾ ರಾಜ್ಯಕ್ಕೆ ಪ್ರಥಮ 

ಮೂಡಬಿದಿರೆಯ ಆಳ್ವಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿಶಾ ಹಾಗೂ ಬೆಂಗಳೂರಿನ ವಿವಿ ಪುರಂ ಮಹಾವೀರ ಜೈನ್‌ ಪಿಯು ಕಾಲೇಜಿನ ಅದಿತಿ ಎ ಬಾಪು 600ಕ್ಕೆ 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಬೆಳಗಾವಿಯ ಗೋಗ್ಟೆ ವಾಣಿಜ್ಯ ಪಿಯು ಕಾಲೇಜಿನ ಧ್ವನಿ ಸಂತೋಷ್‌ ಕುಲಕರ್ಣಿ 599, ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಪಿಯು ಕಾಲೇಜಿನ ರಾಚೆಲ್‌ ಡಿಸೋಜಾ 599 ಅಂಕ ಪಡೆದು ಎರಡನೇ ರಾಂಕ್‌ ಪಡೆದಿದ್ದಾರೆ. ಉಳಿದಂತೆ ಉಡುಪಿ- ಕಾರ್ಕಳ ಕ್ರಿಯೆಟಿವ್‌ ಪಿಯು ಕಾಲೇಜಿನ ಪ್ರೇರಣಾ ಆರ್.‌ ಹೆಗಡೆ, ಆರ್.ಎನ್.ಎಸ್ ಪಿಯು ಕಾಲೇಜು ಬೆಂಗಳೂರಿನ ಸಹನಾ ಆರ್.‌, ಬೆಂಗಳೂರು ಜಯನಗರದ ಟ್ರಾನ್ಸೆಂಡ್‌ ಪಿಯು ಕಾಲೇಜಿನ ಶೃತಿ ಕುಮಾರ್‌, ಬೆಂಗಳೂರು ಜಯನಗರದ ಜೈನ್‌ ಪಿಯು ಕಾಲೇಜಿನ ಸ್ನೇಹ ರಮೇಶ್‌ ಬೆಂಗಳೂರು, ಮಂಗಳೂರಿನ ಮ್ಯಾಪ್ಸ್‌ ಪಿಯು ಕಾಲೇಜಿನ ವೃಷಾ 598 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : PUC Result : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಹೊರಬಿತ್ತು 7.10 ಲಕ್ಷ ವಿದ್ಯಾರ್ಥಿಗಳ ಭವಿಷ್ಯ, ರಿಸಲ್ಟ್‌ ನೋಡಲು ಕ್ಲಿಕ್‌ ಮಾಡಿ

ಕಲಾ ವಿಭಾಗ : ಅರ್ಚನಾ, ಸಂಗೀತ, ಸೃಷ್ಟಿ ರಾಜ್ಯಕ್ಕೆ ಪ್ರಥಮ

ವಿಜಯನಗರ ಕೊಟ್ಟೂರು ಇಂದು ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಅರ್ಚನಾ ಡಿ. ಮತ್ತು ಸಂಗೀತಾ ಹಾಗೂ ಕಲಬುರಗಿ ಶ್ರೀಮತಿ ವಿಜಿ ಮಹಿಳಾ ಪಿಯು ಕಾಲೇಜಿನ ಸೃಷ್ಟಿ ಅವರು 598 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ರಾಂಕ್‌ ಪಡೆದಿದ್ದಾರೆ. ಇನ್ನು ಸುಳ್ಯದ ಶಾರದಾ ಮಹಿಳಾ ಪಿಯು ಕಾಲೇಜಿನ ಫಾತಿಮತ್‌ ಶಹ್ಲಾ, ಜಮಖಂಡಿಯ ಬಿಎಚ್‌ಎಸ್‌ ಕಲಾ ಮತ್ತು ಟಿಜಿಪಿ ವಿಜ್ಞಾನ ಪಿಯು ಕಾಲೇಜಿನ ಮಹಮದಾಯನ್‌ ನದಾಫ್‌, ವಿಜಯಪುರದ ಎಸ್ಎಸ್‌ಪಿಯು ಕಾಲೇಜಿನ ಸಾನಿಕಾ ಮೇಟಗಾರ್‌, ಅಥಣಿಯ ಜೆ ಕಾಂಪೋಸಿಟ್‌ ಪಿಯು ಕಾಲೇಜಿನ ಶಿವಾನಂದ ಎಂ ಬುರ್ಲಾಟಿ, ಧಾರವಾಡದ ಜೆಎಸ್‌ಎಸ್‌ ಎಂ ಪಿಯು ಕಾಲೇಜಿನ ಶ್ರಾವಣಿ ಪಾಟೀಲ್ 595 ಅಂಕ ಪಡೆಯುವ ಮೂಲಕ 2ನೇ ರಾಂಕ್‌ ಹಾಗೂ ವಿಜಯಪುರದ ಎಸ್‌ಎಸ್‌ ಪಿಯು ಕಾಲೇಜಿನ ಅಕ್ಷತಾ ಚವಾಣ್‌, ಬೆಂಗಳೂರು ಜಯನಗರದ ವಿಜಯ ಪಿಯು ಕಾಲೇಜಿನ ದೀಕ್ಷಾ ಎಂ 594 ಅಂಕ ಪಡೆಯುವ ಮೂಲಕ 3ನೇ ರಾಂಕ್‌ ಗಳಿಸಿದ್ದಾರೆ.

ಯಾವ ಜಿಲ್ಲೆಗೆ ಪ್ರಥಮ ಸ್ಥಾನ

  • ಉಡುಪಿ: ಶೇ. 96.39 (ಪ್ರಥಮ)
  • ದಕ್ಷಿಣ ಕನ್ನಡ: ಶೇ. 96.35 (ದ್ವಿತೀಯ)
  • ಕೊಡಗು: ಶೇ. 92.34 (ತೃತೀಯ)
  • ವಿಜಯಪುರ: ಶೇ. 92.00
  • ಉತ್ತರ ಕನ್ನಡ: ಶೇ. 91.78
  • ಕೊನೆಯ ಸ್ಥಾನ: ಯಾದಗಿರಿ ಜಿಲ್ಲೆ (ಶೇ. 71.21).

ದ್ವಿತೀಯ ಪಿಯುಸಿ ಫಲಿತಾಂಶ : ಬಾಲಕಿಯರೇ ಮೇಲುಗೈ

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 88.70ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇ. 83.65ರಷ್ಟಿದೆ. ಒಟ್ಟು 7.10 ಲಕ್ಷ ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಕಾಲೇಜು ಶಿಕ್ಷಣದ ಹಂತವನ್ನು ಯಶಸ್ವಿಯಾಗಿ ದಾಟಿದ್ದಾರೆ.

ಸಚಿವ ಮಧು ಬಂಗಾರಪ್ಪ ಹೇಳಿದ್ದೇನು ?

ಫಲಿತಾಂಶದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವರು, “ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶದಲ್ಲಿ ಶೇ. 13ರಷ್ಟು ಏರಿಕೆ ಕಂಡಿರುವುದು ನಮ್ಮ ಶೈಕ್ಷಣಿಕ ಸುಧಾರಣೆಗಳಿಗೆ ಸಂದ ಜಯ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡಬೇಡಿ. ನಿಮಗೆ ಅಂಕ ಸುಧಾರಿಸಿಕೊಳ್ಳಲು ಪರೀಕ್ಷೆ-2 ಮತ್ತು ಪರೀಕ್ಷೆ-3ರ ಅವಕಾಶವಿದೆ” ಎಂದು ಭರವಸೆ ನೀಡಿದರು.

ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸಿ

ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಅಲ್ಲದೆ ಈ ಬಾರಿ ಡಿಜಿಲಾಕರ್ ಮೂಲಕವೂ ಅಂಕಪಟ್ಟಿಗಳನ್ನು ಲಭ್ಯಗೊಳಿಸಲಾಗಿದೆ.

Karnataka 2nd puc result 2026 Udupi tops alvas disha first

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories