ಕಾರ್ಪೋರೇಟ್​ ಜಿಹಾದ್​ ಪ್ರಕರಣ : ಟಿಸಿಎಸ್​ ಉದ್ಯೋಗಿಗಳಿಗೆ ವರ್ಕ್​ ಫ್ರಾಂ ಹೋಂ

ನಾಸಿಕ್​ನ ಟಿಸಿಎಸ್​ ಬಿಪಿಓ ಕಂಪನಿಯಲ್ಲಿ ನಡೆದ ಕಾಪೋರೇಟ್​ ಜಿಹಾದ್​ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣ ಸಂಬಂದ ಈಗಾಗಲೇ 7 ಮಂದಿ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಈ ಪ್ರಕರಣ ಸಂಬಂಧ ಮಹಿಳಾ ಪರ ಸಂಘಟನೆಗಳು ಹಾಗೂ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ತೀವ್ರಗೊಂಡಿದೆ. ಈ ಎಲ್ಲದರ ನಡುವೆ ಟಿಸಿಎಸ್​ ಕಂಪನಿಯ ಉದ್ಯೋಗಿಗಳಿಗೆ ಸದ್ಯ ವರ್ಕ್ ಫ್ರಾಮ್​ ಹೋಂ ನೀಡಲಾಗಿದೆ.

ಇನ್ನು ತನಿಖೆಯ ಸಂದರ್ಭದಲ್ಲಿ ಕೇವಲ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ; ಇಲ್ಲಿ ಪುರುಷ ಉದ್ಯೋಗಿಗಳಿಗೂ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಕೆಲ ಉದ್ಯೋಗಿಗಳ ಬಳಿ ನಿಮಗೆ ಸಂಬಳ ಜಾಸ್ತಿ ಬೇಕು, ಮುಂಬಡ್ತಿ ಬೇಕು ಎಂದರೆ ನಿನ್ನ ಹೆಂಡತಿಯನ್ನು ನನ್ನೊಟ್ಟಿಗೆ ಕಳಿಸು ಎಂದೆಲ್ಲ ಒತ್ತಡ ಹೇರಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ರಾಮ – ಲಕ್ಷ್ಮಣರನ್ನು ಕಳ್ಳರಿಗೆ ಹೋಲಿಸಿದ ಪ್ರಕಾಶ್​ ರಾಜ್

ಸ್ವತಃ ಉದ್ಯೋಗಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ನಿನಗೆ ಮಕ್ಕಳಾಗಿಲ್ಲ. ಹೀಗಾಗಿ ನಿನಗೆ ಮಗು ಬೇಕೆಂದರೆ, ಹೆಂಡತಿಯನ್ನು ನಮ್ಮ ಬಳಿ ಕಳಿಸು ಎಂದು ಟೀಂ ಮುಖ್ಯಸ್ಥ ತೌಸಿಫ್‌ ಅಖ್ತರ್‌, ಡ್ಯಾನಿಷ್‌ ಶೇಖ್‌ ಹಾಗೂ ಇತರರು ಮಾತಾಡುತ್ತಿದ್ದರು. ಒಪ್ಪದೇ ಇದ್ದಾಗ ಮುಖ್ಯ ಕಚೇರಿಗೆ ನನ್ನ ಬಗ್ಗೆ ಸುಳ್ಳು ವರದಿ ಕಳಿಸುತ್ತಿದ್ದರು. ಮುಸ್ಲಿಂ ಟೋಪಿ ಧರಿಸುವಂತೆ, ಕಲ್ಮಾ ಪಠಿಸುವಂತೆ ಮತ್ತು ನಮಾಜ್‌ ಮಾಡುವಂತೆ ಪೀಡಿಸುತ್ತಿದ್ದರು. ಒಮ್ಮೆಯಂತೂ ಸಿಟ್ಟಿಗೆದ್ದ ಡ್ಯಾನಿಷ್‌ ನನ್ನ ಮೇಲೆ ಫ್ಯಾನ್‌ ಎಸೆದು, ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಹೇಳಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories