ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟದ ಮಾಸ್ಟರ್‌ಮೈಂಡ್ ಬಿಡಿಸಲು ಸಂಚು; 7 ಮಂದಿಗೆ ಶಿಕ್ಷೆ ಪ್ರಕಟ

ಜೀವಂತ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಎಲ್ಲ ಅಪರಾಧಿಗಳಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಜನ ಆರೋಪಿಗಳನ್ನು ದೋಷಿ ಎಂದು ಘೋಷಿಸಿ, ಎಲ್ಲ ಅಪರಾಧಿಗಳಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಎನ್‌ಐಎ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಮಂಗಳವಾರ ಮಧ್ಯಾಹ್ನಕ್ಕೆ ತೀರ್ಪು ಕಾಯ್ದಿರಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲ ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ಜೊತೆಗೆ 48 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಈ ಎಲ್ಲಾ ಆಪರಾಧಿಗಳಲ್ಲಿ ಮೂವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನದಲ್ಲಿದ್ದಾಗ ಸ್ಟೇಡಿಯಂ ಸ್ಪೋಟದ ಮಾಸ್ಟರ್‌ ಮೈಂಡ್‌ ತಡಿಯಂಟವಿಡೆ ನಸೀರ್‌ ನ ಪರಿಚಯವಾಗಿತ್ತು. ನಸೀರ್‌ನು ಕೊಡಗಿನ ಹೊಸತೋಟದಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಆಶ್ರಯ ಪಡೆದು 2008ರಲ್ಲಿ ಸ್ಟೇಡಿಯಂ ಸ್ಪೋಟದ ಸಂಚು ರೂಪಿಸಿದ್ದ. ನಂತರ ಇವನನ್ನು ಬಾಂಗ್ಲಾ ಗಡಿಯಲ್ಲಿ 2010ರಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ : ಇಂದು ರಾಜ್ಯಾದ್ಯಂತ ಎಸ್​ಎಸ್ಎಲ್‌ಸಿ ಫಲಿತಾಂಶ: ತೃತೀಯ ಭಾಷೆಗೆ ಗ್ರೇಡಿಂಗ್​ ಬದಲು ಅಂಕ..!

ಆರೋಪಿಗಳೆಲ್ಲರೂ ಸೇರಿ ನಸೀರ್‌ನನ್ನು ಜೈಲಿನಿಂದ ಹೊರಗೆ ಕೋರ್ಟಿಗೆ ಅಥವಾ ಆಸ್ಪತ್ರೆಗೆ ಕರೆದೊಯ್ಯುವಾಗ ಪೋಲೀಸ್‌ ವಾಹನದ ಮೇಲೆ ಗ್ರೆನೇಡ್‌ಗಳು ಮತ್ತು ಬಾಂಬ್‌ ಎಸೆದು ಅವನನ್ನು ಪೋಲೀಸ್‌ ಬಂಧನದಿಂದ ಬಿಡಿಸಿ ಕರೆದೊಯ್ಯಲು ಸಂಚು ರೂಪಿಸಿದ್ದರು. ಅದಕ್ಕಾಗಿ ಸ್ಪೋಟಕಗಳು , ಬಾಂಬ್‌ ಮತ್ತು ವಾಕಿ ಟಾಕಿಗಳನ್ನೂ ಸಂಗ್ರಹಿಸಿ ಇಟ್ಟಿದ್ದರು. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದ ಏಎಸ್‌ಐ ಕೂಡ ಶಾಮೀಲಾಗಿದ್ದಾರೆ.
2023ರಲ್ಲಿ ಬೇರೊಂದು ಪ್ರಕರಣದ ತನಿಖೆ ನಡೆಸುತಿದ್ದ ಸಿಸಿಬಿ ಪೋಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳ ದೂರವಾಣಿಗೆ ಕಳ್ಳಗಿವಿ ಇಟ್ಟು ಸಂಭಾಷಣೆ ಆಲಿಸಿದಾಗ ಈ ಸಂಚು ಬೆಳಕಿಗೆ ಬಂದಿತ್ತು. ಕೂಡಲೇ ಆರ್.ಟಿ ನಗರದ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಜೀವಂತ ಗ್ರೆನೇಡ್, ಪಿಸ್ತೂಲ್, ಗುಂಡುಗಳನ್ನು , ನಕಾಶೆ ಸಹಿತ ವಶಪಡಿಸಿಕೊಂಡಿದ್ದರು.
ಆರೋಪಿಗಳ ಬಂಧನ ಬಳಿಕ ಪ್ರಕರಣವನ್ನು ಎನ್‌ಐಎ ಕೈಗೆತ್ತಿಕೊಂಡು ವಿಚಾರಣೆ ಮಾಡಿತ್ತು.

ಇದನ್ನೂ ಓದಿ : ಕೌಟುಂಬಿಕ ಕಲಹಕ್ಕೆ ದಂಪತಿ ದುರಂತ ಅಂತ್ಯ..! ರಾಜ್ಯ ರಾಜಧಾನಿಯಲ್ಲಿ ದಂಪತಿ ನಿಗೂಢ ಸಾವು

ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರು ಸ್ಫೋಟದ ರೂವಾರಿ ಟಿ.ನಾಸೀರ್ ಜೊತೆ ಸಂಪರ್ಕ ಹೊಂದಿದ್ದು ಆತನನ್ನು ಬಿಡಿಸುವ ಜತೆಗೇ ಮತ್ತೆಯೂ ಬೆಂಗಳೂರಿನ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸ್ಪೋಟ ನಡೆಸಲು ಭಾರೀ ಸಂಚು ರೂಪಿಸಿದ್ದುದು ಬೆಳಕಿಗೆ ಬಂದಿತ್ತು. ಜೈಲಿನಲ್ಲಿದ್ದರೂ ನಸೀರ್‌ ಉಗ್ರವಾದವನ್ನು ಹರಡುತಿದ್ದುದೇ ಅಲ್ಲದೆ ಇತರ ಕೈದಿಗಳ ಮತಾಂತರಕ್ಕೂ ಪ್ರಯತ್ನಿಸಿದ್ದು ಈತನ ಮೇಲೆ ಪ್ರಕರಣವೂ ದಾಖಲಾಗಿದೆ.
ಈ ಸಂಚಿನ ಪ್ರಮುಖ ಆರೋಪಿ ಜುನೈದ್‌ ಇನ್ನೂ ತಲೆಮರೆಸಿಕೊಂಡಿದ್ದು ಆತನ ಸುಳಿವಿಗೆ ಎನ್‌ಐಏ ಐದು ಲಕ್ಷ ಬಹುಮಾನವನ್ನೂ ಘೋಷಿಸಿದೆ. ಆತನು ದುಬೈನಲ್ಲಿ ಅಡಗಿರಬಹುದೆಂದು ಶಂಕಿಸಲಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories