ಅಕ್ಷಯ್ ಕುಮಾರ್ ಮಗಳ ಬಳಿ ಬೆತ್ತಲೆ ಫೋಟೋ ಕೇಳಿದ ಆರೋಪಿ ಬಂಧನ

Akshay Kumar Daughters Nude Image Case: ಅಕ್ಷಯ್ ಕುಮಾರ್, "ಮಕ್ಕಳು ಇಂತಹ ವಿಷಯಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುವುದು ಅತ್ಯಂತ ಮುಖ್ಯ. ಸೈಬರ್ ಲೋಕದಲ್ಲಿ ಮಕ್ಕಳು ಇಂತಹ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಅಥವಾ ಸುಲಿಗೆಯಂತಹ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ" ಎಂದು ಕಳವಳ ವ್ಯಕ್ತಪಡಿಸಿದ್ದರು.

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ 13 ವರ್ಷದ ಪುತ್ರಿಗೆ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸೈಬರ್ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ವಿಭಾಗವು ಮೊದಲ ಬಂಧನ ಮಾಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಈ ಆಘಾತಕಾರಿ ಘಟನೆಯ ಬಗ್ಗೆ (Akshay Kumar Daughters Nude Image Case) ಅಕ್ಷಯ್ ಕುಮಾರ್ ಅವರು ಸೈಬರ್ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದರು.

ಏನಿದು ಘಟನೆ?

ಅಕ್ಷಯ್ ಕುಮಾರ್ ವಿವರಿಸಿದಂತೆ, ಅವರ ಪುತ್ರಿ ಆನ್‌ಲೈನ್ ವಿಡಿಯೋ ಗೇಮ್ ಆಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಕ್ಕೆ ಬಂದಿದ್ದ. ಆರಂಭದಲ್ಲಿ ಅತ್ಯಂತ ಸಭ್ಯವಾಗಿ ಮಾತನಾಡುತ್ತಾ, “ನೀವು ಚೆನ್ನಾಗಿ ಆಡುತ್ತಿದ್ದೀರಿ” ಎಂದು ಸಂದೇಶ ಕಳುಹಿಸಿದ್ದ. ಮಾತು ಮುಂದುವರಿಸಿದ ಆತ, “ನೀವು ಹುಡುಗನೋ ಅಥವಾ ಹುಡುಗಿಯೋ?” ಎಂದು ಕೇಳಿದ್ದ. ಮಗಳು “ಹುಡುಗಿ” ಎಂದು ಉತ್ತರಿಸಿದ ಕೂಡಲೇ ಆ ವ್ಯಕ್ತಿ “ನಿನ್ನ ನಗ್ನ ಚಿತ್ರಗಳನ್ನು ಕಳುಹಿಸು” ಎಂದು ಸಂದೇಶ ಕಳುಹಿಸಿ ವಿಕೃತಿ ಮೆರೆದಿದ್ದ.

ಜಾಗೃತಿ ಮೂಡಿಸಿದ ಮಗಳು

ಈ ಸಂದೇಶದಿಂದ ಗಾಬರಿಗೊಂಡ ಮಗಳು ತಕ್ಷಣವೇ ಗೇಮ್ ಆಫ್ ಮಾಡಿ ತನ್ನ ತಾಯಿ (ಟ್ವಿಂಕಲ್ ಖನ್ನಾ) ಬಳಿ ವಿಷಯ ತಿಳಿಸಿದ್ದಳು. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅಕ್ಷಯ್ ಕುಮಾರ್, “ಮಕ್ಕಳು ಇಂತಹ ವಿಷಯಗಳನ್ನು ಪೋಷಕರೊಂದಿಗೆ ಹಂಚಿಕೊಳ್ಳುವುದು ಅತ್ಯಂತ ಮುಖ್ಯ. ಸೈಬರ್ ಲೋಕದಲ್ಲಿ ಮಕ್ಕಳು ಇಂತಹ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಅಥವಾ ಸುಲಿಗೆಯಂತಹ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದರು.

Monsoon Update : ರಾಜ್ಯದ ಜನತೆಗೆ ತಂಪು ಸುದ್ದಿ; ಈ ಬಾರಿ ವಾಡಿಕೆಗಿಂತ ಮೊದಲೇ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾನೆ ಮಳೆರಾಯ

ಶಾಲೆಗಳಲ್ಲಿ ಸೈಬರ್ ಜಾಗೃತಿ ತರಗತಿಗೆ ಆಗ್ರಹ

ಈ ಘಟನೆಯ ಬೆನ್ನಲ್ಲೇ ಅಕ್ಷಯ್ ಕುಮಾರ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಶಾಲೆಗಳಲ್ಲಿ ವಾರಕ್ಕೊಮ್ಮೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ತರಗತಿಗಳನ್ನು ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ರಸ್ತೆ ಅಪರಾಧಗಳಿಗಿಂತ ಸೈಬರ್ ಅಪರಾಧಗಳು ವೇಗವಾಗಿ ಬೆಳೆಯುತ್ತಿವೆ ಎಂದು ಅವರು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಮುಂಬೈನ ಕಾಲೇಜೊಂದರಲ್ಲಿ ನಡೆದ ಸೈಬರ್ ಜಾಗೃತಿ ಸಮಾವೇಶದಲ್ಲಿ ಅಕ್ಷಯ್ ಕುಮಾರ್ ಅವರ ಈ ವಿಡಿಯೋ ತುಣುಕನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಲಾಯಿತು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories