ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಉದ್ಯೋಗಾವಕಾಶ; ಹೀಗೆ ಅರ್ಜಿ ಹಾಕಿ
Jobs in Hubballi: ಆಸಕ್ತ ಅಭ್ಯರ್ಥಿಗಳು ತಮ್ಮ ಅಪ್ಡೇಟ್ ಆಗಿರುವ ರೆಸ್ಯೂಮೆಯನ್ನು ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು (KLE Technological University) 2026ನೇ ಸಾಲಿನಿಂದ ನೂತನವಾಗಿ ಬಿ.ಎಸ್ಸಿ. ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ಟೆಕ್ನಾಲಜಿ (B.Sc. Hotel Management & Catering Technology) ಕೋರ್ಸ್ ಅನ್ನು ಆರಂಭಿಸುತ್ತಿದ್ದು, ವಿವಿಧ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ (Jobs in Hubballi) ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ:
-
ಬೋಧಕ ವೃಂದ: ಪ್ರೊಫೆಸರ್ ಮತ್ತು ಹೆಡ್ (Professor & Head), ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್.
-
ವಿಭಾಗಗಳು: ಫುಡ್ ಪ್ರೊಡಕ್ಷನ್, ಫುಡ್ ಅಂಡ್ ಬೆವರೇಜ್ ಸರ್ವಿಸ್, ರೂಮ್ ಡಿವಿಷನ್ ಮ್ಯಾನೇಜ್ಮೆಂಟ್ ಮತ್ತು ಜನರಲ್ ಮ್ಯಾನೇಜ್ಮೆಂಟ್.
-
-
ಇತರ ಹುದ್ದೆಗಳು: ಇನ್ಸ್ಟ್ರಕ್ಟರ್ (Instructor), ಅಸಿಸ್ಟೆಂಟ್ ಇನ್ಸ್ಟ್ರಕ್ಟರ್ ಮತ್ತು ಲ್ಯಾಬ್ ಅಸಿಸ್ಟೆಂಟ್.
ಅರ್ಹತೆಗಳು:
-
ಬೋಧಕ ಹುದ್ದೆಗಳಿಗೆ: ಹೋಟೆಲ್ ಮ್ಯಾನೇಜ್ಮೆಂಟ್/ಹಾಸ್ಪಿಟಾಲಿಟಿ/ಕ್ಯಾಟರಿಂಗ್ ವಿಷಯದಲ್ಲಿ ಪ್ರಥಮ ದರ್ಜೆಯೊಂದಿಗೆ ಸ್ನಾತಕೋತ್ತರ ಪದವಿ (Master’s Degree) ಹೊಂದಿರಬೇಕು. ಪಿಎಚ್.ಡಿ (Ph.D.) ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
-
ಇತರ ಹುದ್ದೆಗಳಿಗೆ: ಹೋಟೆಲ್ ಮ್ಯಾನೇಜ್ಮೆಂಟ್ ಅಥವಾ ಕ್ಯುಲಿನರಿ ಆರ್ಟ್ಸ್ನಲ್ಲಿ ಪದವಿ ಅಥವಾ ಡಿಪ್ಲೊಮಾ ಜೊತೆಗೆ ಸಂಬಂಧಿತ ಉದ್ಯಮದಲ್ಲಿ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಅಭ್ಯರ್ಥಿಗಳು ತಮ್ಮ ಅಪ್ಡೇಟ್ ಆಗಿರುವ ರೆಸ್ಯೂಮೆಯನ್ನು (Resume) careers@kletech.ac.in ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
-
ಇಮೇಲ್ ಸಬ್ಜೆಕ್ಟ್ ಲೈನ್: “Application for Faculty Position in the Dept. of Hotel Management” ಎಂದು ನಮೂದಿಸಬೇಕು.
-
ಗಮನಿಸಿ: ಅರ್ಜಿಯಲ್ಲಿ ನಿಮ್ಮ ಆದ್ಯತೆಯ ಸಂದರ್ಶನ ಸ್ಥಳವನ್ನು (ಪಣಜಿ, ಗೋವಾ ಅಥವಾ ಹುಬ್ಬಳ್ಳಿ, ಕರ್ನಾಟಕ) ಕಡ್ಡಾಯವಾಗಿ ನಮೂದಿಸಬೇಕು.
ಪ್ರಮುಖ ದಿನಾಂಕ:
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಏಪ್ರಿಲ್, 2026.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ www.kletech.ac.in ಗೆ ಭೇಟಿ ನೀಡಬಹುದು.



