ಕಾಂತಾರಾ 1 : ದೈವಗಳಿಗೆ ಅಪಮಾನ, ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್
ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಣವೀರ್ ಸಿಂಗ್, ಚಾವುಂಡಿ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೇ ಕೆಟ್ಟದಾಗಿ ಮುಖಾಭಿನಯ ಮಾಡುವ ಮೂಲಕ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ನಿರ್ವಹಿಸಿದ್ದು ಚಾವುಂಡಿ ದೈವದ ಪಾತ್ರವನ್ನು ಅನುಕರಿಸಲು ಹೋಗಿ ಅಪಮಾನ ಎಸಗಿದ ಆರೋಪವನ್ನು ನಟ ರಣವೀರ್ ಸಿಂಗ್ ಎದುರಿಸುತ್ತಿರುವುದು ಗೊತ್ತೇ ಇದೆ.
ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಕೃತ್ಯಕ್ಕೆ ಬೇಷರತ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಣವೀರ್ ಸಿಂಗ್, ಚಾವುಂಡಿ ದೈವವನ್ನು ದೆವ್ವ ಎಂದು ಕರೆದಿದ್ದರು. ಅಲ್ಲದೇ ಕೆಟ್ಟದಾಗಿ ಮುಖಾಭಿನಯ ಮಾಡುವ ಮೂಲಕ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದರು.
Also Read : ನಟನೆಗೆ ಗುಡ್ ಬೈ ಹೇಳಿ ಊರಲ್ಲಿ ಕೃಷಿ ಮಾಡ್ತಾರಾ ನಟ ದಿಗಂತ್?
ಇದಾದ ಬಳಿಕ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎಫ್ಐಆರ್ ರದ್ದು ಮಾಡುವಂತೆ ಕೋಡಿ ರಣವೀರ್ ಸಿಂಗ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ರಣವೀರ್ ಸಿಂಗ್ಗೆ ಮುಂದಿನ 4 ವಾರಗಳ ಒಳಗಾಗಿ ಚಾವುಂಡಿ ದೈವ ಸನ್ನಿಧಾನಕ್ಕೆ ಭೇಟಿ ನೀಡುವಂತೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠ ಸೂಚನೆ ನೀಡುವ ಮೂಲಕ ಅರ್ಜಿ ವಿಲೇವಾರಿ ಮಾಡಿದೆ.
Also Read : ಅಕ್ಷಯ್ ಕುಮಾರ್ ಮಗಳ ಬಳಿ ಬೆತ್ತಲೆ ಫೋಟೋ ಕೇಳಿದ ಆರೋಪಿ ಬಂಧನ
ಆದರೆ ಇಲ್ಲಿಗೆ ಭೇಟಿ ನೀಡಲು ರಣವೀರ್ ಸಿಂಗ್ಗೆ ಭದ್ರತೆಯ ಸಮಸ್ಯೆಯಿದೆ ಎಂದು ಅವರ ಪರ ವಕೀಲ ವಾದಿಸಿದ್ದಾರೆ. ಈ ವೇಳೆ ದೂರುದಾರ ಪರ ವಕೀಲರು, ಪೊಲೀಸರು ರಕ್ಷಣೆಗೆ ಇರಲಿದ್ದಾರೆ ಎಂದು ಮರುವಾದಿಸಿದ್ದಾರೆ ಎನ್ನಲಾಗಿದೆ .
ranveer singh apologizes for insulting kantara daiva controversy kannada news



