10ನೇ ತರಗತಿ ಪಾಸಾದವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಉದ್ಯೋಗ: 101 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!

Jobs in Karnataka High Court: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

Jobs in Karnataka High Court: ಕರ್ನಾಟಕ ಉಚ್ಚ ನ್ಯಾಯಾಲಯವು (High Court of Karnataka) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹತ್ತನೇ ತರಗತಿ ಪಾಸಾದವರಿಗೆ ಇದೊಂದು ಉತ್ತಮ ಉದ್ಯೋಗಾವಕಾಶವಾಗಿದೆ.

ಹುದ್ದೆಗಳ ವಿವರ:

  • ಒಟ್ಟು ಹುದ್ದೆಗಳು: 101

  • ಹುದ್ದೆಯ ಹೆಸರು: ಗ್ರೂಪ್-ಡಿ (ಪೀನ್, ವಾಚ್‌ಮನ್ ಮತ್ತು ಸ್ವೀಪರ್)

  • ಉದ್ಯೋಗ ಸ್ಥಳ: ಕರ್ನಾಟಕ

  • ವೇತನ ಶ್ರೇಣಿ: ತಿಂಗಳಿಗೆ ರೂ. 19,900 ರಿಂದ ರೂ. 69,100/-

ವಿದ್ಯಾರ್ಹತೆ ಮತ್ತು ವಯೋಮಿತಿ:

  • ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

  • ವಯೋಮಿತಿ: ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದಂತೆ ನಿಯಮಾನುಸಾರ ವಯೋಮಿತಿ ಇರುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 22-04-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-ಮೇ-2026

ಅರ್ಜಿ ಸಲ್ಲಿಸುವ ವಿಧಾನ:

  1. ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ judiciary.karnataka.gov.in ಗೆ ಭೇಟಿ ನೀಡಿ.

  2. ನೇಮಕಾತಿ (Recruitment) ವಿಭಾಗಕ್ಕೆ ಹೋಗಿ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಿ.

  3. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು.

  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಇಟ್ಟುಕೊಳ್ಳಿ.

    NTPC Recruitment 2026: ಎಂಜಿನಿಯರಿಂಗ್ ಪದವೀಧರರಿಗೆ 250 ಹುದ್ದೆಗಳು; 55,000 ರೂ. ವೇತನ!

ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಸೂಚನೆ:

ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಭಾವಚಿತ್ರ ಮತ್ತು ಸಹಿಯನ್ನು ನಿಗದಿತ ಗಾತ್ರಕ್ಕೆ (20KB–100KB) ರೀಸೈಜ್ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಲು ಕೊನೆಯ ಕ್ಷಣದವರೆಗೆ ಕಾಯದೆ ಶೀಘ್ರವಾಗಿ ಅರ್ಜಿಯನ್ನು ಪೂರ್ಣಗೊಳಿಸುವುದು ಉತ್ತಮ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories