ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ! ವಾಣಿಜ್ಯ ಸಿಲಿಂಡರ್ ದರ ಹೆಚ್ಚಳ; ಅಕ್ರಮ ದಂಧೆಗೆ ಬೀಳಲಿದೆ ಬ್ರೇಕ್!

ವಾಣಿಜ್ಯ ಸಿಲಿಂಡರ್​ಗಳ ಅಭಾವದಿಂದಾಗಿ ಮೊದಲೇ ನಷ್ಟದಲ್ಲಿದ್ದ ಹೋಟೆಲ್​ ಉದ್ಯಮಿಗಳಿಗೆ ಇದೀಗ ಮತ್ತೊಂದು ಶಾಕ್​ ಎದುರಾಗಿದೆ.

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಉಂಟಾದ ವಾಣಿಜ್ಯ ಸಿಲಿಂಡರ್​ಗಳ ಅಭಾವದಿಂದಾಗಿ ಮೊದಲೇ ನಷ್ಟದಲ್ಲಿದ್ದ ಹೋಟೆಲ್​ ಉದ್ಯಮಿಗಳಿಗೆ ಇದೀಗ ಮತ್ತೊಂದು ಶಾಕ್​ ಎದುರಾಗಿದೆ. ಇಂದಿನಿಂದ ಅನ್ವಯವಾಗುವಂತೆ ಎಲ್​ಪಿಜಿ ವಾಣಿಜ್ಯ ಸಿಲಿಂಡರ್​ಗಳ ದರದಲ್ಲಿ ಒಂದಲ್ಲ ಎರಡಲ್ಲ ಬದಲಾಗಿ ಬರೋಬ್ಬರಿ 993 ರೂಪಾಯಿ ದರ ಏರಿಕೆ ಮಾಡಲಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಆದರೆ ಗೃಹಬಳಕೆಯ ಸಿಲಿಂಡರ್​ ದರ ಸ್ಥಿರತೆ ಕಾಯ್ದುಕೊಂಡಿದ್ದು ಜನಸಾಮಾನ್ಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಈ ಪರಿಷ್ಕೃತ ದರದಿಂದಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್​ ದರ 3000 ರೂಪಾಯಿಗಳ ಗಡಿ ದಾಟಿದೆ. ಇನ್ನುಳಿದಂತೆ ದೆಹಲಿಯಲ್ಲಿ 3071.50 ರೂಪಾಯಿ, ಮುಂಬೈನಲ್ಲಿ 3024 ರೂಪಾಯಿ, ಕೋಲ್ಕತ್ತಾದಲ್ಲಿ 3202 ರೂಪಾಯಿ, ಚೆನ್ನೈನಲ್ಲಿ 3237 ರೂಪಾಯಿ ಹಾಗೂ ಪಾಟ್ನಾದಲ್ಲಿ ವಾಣಿಜ್ಯ ಸಿಲಿಂಡರ್​ನ ಪರಿಷ್ಕೃತ ದರ 3361 ರೂಪಾಯಿ ತಲುಪಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಭರ್ಜರಿ ಗುಡ್ ನ್ಯೂಸ್! ಏನಿದು 600 ಕೋಟಿ ಪ್ಲಾನ್? ಇಲ್ಲಿದೆ ಮಾಹಿತಿ

ಇನ್ನು ಬೆಲೆ ಏರಿಕೆಯ ಜೊತೆಯಲ್ಲಿ ಇಂದಿನಿಂದ ಅನ್ವಯವಾಗುವಂತೆ ವಾಣಿಜ್ಯ ಸಿಲಿಂಡರ್​ಗಳ ಹಂಚಿಕೆಯಲ್ಲಿ ಮಹತ್ವದ ನಿಯಮ ಜಾರಿಗೊಳಿಸಲಾಗಿದೆ. ಇಂದಿನಿಂದ ವಾಣಿಜ್ಯ ಸಿಲಿಂಡರ್​ಗಳ ವಿತರಣೆಯ ಸಂದರ್ಭದಲ್ಲಿ ಡೆಲಿವರಿ ಅಥೆಂಟಿಕೇಶನ್ ಕೋಡ್ ನೀಡುವುದು ಕಡ್ಡಾಯವಾಗಿರಲಿದೆ.

ಸಿಲಿಂಡರ್ ವಿತರಣೆ ಮಾಡುವಾಗ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರಲಿದೆ. ಸಿಲಿಂಡರ್​ ವಿತರಕರಿಗೆ ಗ್ರಾಹಕರು ಈ ಒಟಿಪಿ ನೀಡದ ಹೊರತು ಸಿಲಿಂಡರ್ ವಿತರಣೆ ಪ್ರಕ್ರಿಯೆ ಸಂಪೂರ್ಣವಾಗುವುದಿಲ್ಲ. ಕಾಳಸಂತೆಗಳಲ್ಲಿ ಅಕ್ರಮ ಸಿಲಿಂಡರ್​ ವ್ಯಾಪಾರ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories