ಮಿಥುನ ರಾಶಿಯಲ್ಲಿ ಸೂರ್ಯ–ಬುಧ ಯುತಿ : ಬುಧಾದಿತ್ಯ ರಾಜಯೋಗ; ಈ 4 ರಾಶಿಯವರಿಗೆ ಗೋಲ್ಡನ್‌ ಟೈಮ್‌

ಗ್ರಹಗಳ ರಾಜನಾದ ಸೂರ್ಯನು ಜೂನ್‌ 15 ರಂದು ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಸೂರ್ಯನ ಈ ಸಂಚಾರವು ಮಿಥುನ ರಾಶಿಯಲ್ಲಿ ಸೂರ್ಯ ಮತ್ತು ಬುಧನ ಸಂಯೋಗಕ್ಕೆ ಕಾರಣವಾಗಿದೆ. ಈ ಎರಡೂ ಗ್ರಹಗಳು ಸೇರಿ ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತವೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿದೆ. ಬುದ್ಧಿಶಕ್ತಿ, ಮಾತು, ತರ್ಕ, ವ್ಯವಹಾರ ಮತ್ತು ಸಂವಹನಕ ಕಾರಕ ಎಂದು ಬುಧನನ್ನು ಕರೆಯಲಾಗುತ್ತದೆ. ಜಾತಕದಲ್ಲಿ ಬುಧ ಗ್ರಹ ಪ್ರಬಲವಾಗಿದ್ದರೆ ಆ ವ್ಯಕ್ತಿಯು ಉತ್ತಮ ಸಂವಹನ ಕೌಶಲ್ಯ, ವ್ಯಾಪಾರ, ತರ್ಕಗಳಲ್ಲಿ ಯಶಸ್ಸು ಗಳಿಸುತ್ತಾನೆ. ಅದೇ ಬುಧ ದುರ್ಬಲವಾಗಿದ್ದರೆ ಮಾನಸಿಕ ಗೊಂದಲ ವ್ಯವಹಾರದಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತಾನೆ. ಸದ್ಯ ಬುಧ ಗ್ರಹವು ತನ್ನದೇ ರಾಶಿಯಾದ ಮಿಥುನದಲ್ಲಿ ಸಂಚರಿಸುತ್ತಿದ್ದಾನೆ. ಗ್ರಹಗಳ ರಾಜನಾದ ಸೂರ್ಯನು ಜೂನ್‌ 15 ರಂದು ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಸೂರ್ಯನ ಈ ಸಂಚಾರವು ಮಿಥುನ ರಾಶಿಯಲ್ಲಿ ಸೂರ್ಯ ಮತ್ತು ಬುಧನ ಸಂಯೋಗಕ್ಕೆ ಕಾರಣವಾಗಿದೆ. ಈ ಎರಡೂ ಗ್ರಹಗಳು ಸೇರಿ ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತವೆ. ಇಷ್ಟೇ ಅಲ್ಲದೇ ಬುಧನು ತನ್ನದೇ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಭದ್ರ ರಾಜಯೋಗವೂ ರೂಪುಗೊಂಡಿದೆ. ಮಿಥುನ ರಾಶಿಯಲ್ಲಿ ಉಂಟಾದ ಬುಧಾದಿತ್ಯ ರಾಜಯೋಗವು ಜೂನ್‌ 22 ರವರೆಗೆ ಇರುತ್ತದೆ. ಈ ಸಮಯವು ಹಲವು ರಾಶಿಗಳ ಜನರಿಗೆ ಗೋಲ್ಡನ್‌ ಟೈಮ್‌ ಆಗಿ ಸಾಬೀತಾಗಲಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡೋಣ.

ಮಿಥುನ ರಾಶಿ

ಸೂರ್ಯ ಮತ್ತು ಬುಧ ಮಿಥುನ ರಾಶಿಯಲ್ಲಿ ಸಂಧಿಸಿರುವುದರಿಂದ ಈ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಬುಧಾದಿತ್ಯ ರಾಜಯೋಗ ಮತ್ತು ಭದ್ರ ರಾಜಯೋಗವು ಅವರ ಪ್ರಗತಿಯನ್ನು ಉತ್ತೇಜಿಸುತ್ತದೆ. ಕೆಲಸದಲ್ಲಿ ಬಡ್ತಿ ಸಾಧ್ಯ. ಹೊಸ ಕೆಲಸದ ಕನಸುಗಳು ಸಹ ನನಸಾಗಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದೆ.

ಸಿಂಹ ರಾಶಿ

ಸೂರ್ಯ ಮತ್ತು ಬುಧನ ಸಂಯೋಗವು ಸಿಂಹ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ನಿಮ್ಮನ್ನು ಆಶೀರ್ವದಿಸಿ ಹಣದ ಹೊಳೆಯನ್ನು ಹರಿಸುತ್ತಾಳೆ. ಇದು ನಿಮಗೆ ಆರ್ಥಿಕ ಲಾಭ ಮತ್ತು ಆದಾಯದಲ್ಲಿ ಹೆಚ್ಚಳವನ್ನು ತರುತ್ತದೆ. ನಿಮ್ಮ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವತ್ತ ಸಾಗುತ್ತವೆ. ಯಶಸ್ಸು ಗಳಿಸುವಿರಿ. ನಿಮ್ಮ ಕೆಲಸದಲ್ಲಿ ನಿಮ್ಮ ತಂದೆಯಿಂದ ಬೆಂಬಲ ಮತ್ತು ಸಲಹೆಯನ್ನು ಪಡೆಯುತ್ತೀರಿ.

ಇದನ್ನೂ ಓದಿ: ಶನಿ ಹಿಮ್ಮುಖ ಚಲನೆ 2026 : ಈ 4 ರಾಶಿಯವರಿಗೆ ಸಿಗಲಿದೆ ಕರ್ಮಫಲದಾತನ ಕೃಪಾಕಟಾಕ್ಷ

ಕನ್ಯಾ ರಾಶಿ

ಸೂರ್ಯ ಮತ್ತು ಬುಧರ ಸಂಯೋಗವು ಕನ್ಯಾ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಉದ್ಯಮಿಗಳ ಕಾರ್ಯಕ್ಷೇತ್ರ ದೊಡ್ಡದಾಗಲಿದೆ. ಇದರಿಂದ ಅವರ ಲಾಭಾಂಶವು ಹೆಚ್ಚಾಗಬಹುದು. ಉದ್ಯೋಗದಲ್ಲಿ ಸರ್ಕಾರದ ಬೆಂಬಲ ನಿಮಗೆ ಸಿಗುವ ಸಾಧ್ಯತೆಯಿದೆ. ಪ್ರಶಸ್ತಿ ಪುರಸ್ಕಾರಗಳನ್ನು ಸಹ ಪಡೆಯಬಹುದು.

ತುಲಾ ರಾಶಿ

ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗವು ತುಲಾ ರಾಶಿಯವರ ಅದೃಷ್ಟವನ್ನು ಬಲಪಡಿಸುತ್ತದೆ. ಅವರು ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಕುಟುಂಬ ಸದಸ್ಯರಿಂದ ನಿಮಗೆ ಬೆಂಬಲ ಮತ್ತು ಸಲಹೆ ಸಿಗುತ್ತದೆ. ಜೂನ್ 16 ರಿಂದ, ನೀವು ಆರ್ಥಿಕ ಲಾಭವನ್ನು ಕಾಣುತ್ತೀರಿ ಜೊತೆಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ ಕೂಡಾ ಹೆಚ್ಚಾಗಲಿದೆ. ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವುದು ನಿಮಗೆ ಶುಭವಾಗಲಿದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories