Radhika Pandit : ಸಿನಿಮಾಗಳಿಂದ ದೂರವಿದ್ದರೂ ಕರಗಿಲ್ಲ ಡಿಮ್ಯಾಂಡ್! ಸ್ಯಾಂಡಲ್‌ವುಡ್ ಕ್ವೀನ್ ರಾಧಿಕಾ ಪಂಡಿತ್ ಕ್ರೇಜ್ ಹಿಂದಿರೋ ಸೀಕ್ರೆಟ್ ಏನು?

ಕನ್ನಡ ಚಿತ್ರರಂಗದಲ್ಲಿ ಗ್ಲಾಮರ್ ಜೊತೆಗೆ ನಟನಾ ಪ್ರಾಧಾನ್ಯತೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಅಪರೂಪದ ನಟಿ ಅಂದ್ರೆ ಅದು ನಮ್ಮ ಸ್ಯಾಂಡಲ್‌ವುಡ್ ಕ್ವೀನ್ ರಾಧಿಕಾ ಪಂಡಿತ್. ಬೆಳ್ಳಿಪರದೆಗೆ ಬಂದು ವರ್ಷಗಳೇ ಕಳೆದರೂ, ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. 

ಕನ್ನಡ ಚಿತ್ರರಂಗದಲ್ಲಿ ಗ್ಲಾಮರ್ ಜೊತೆಗೆ ನಟನಾ ಪ್ರಾಧಾನ್ಯತೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ಅಪರೂಪದ ನಟಿ ಅಂದ್ರೆ ಅದು ನಮ್ಮ ಸ್ಯಾಂಡಲ್‌ವುಡ್ ಕ್ವೀನ್ ರಾಧಿಕಾ ಪಂಡಿತ್ (Radhika Pandit Yash) . ಬೆಳ್ಳಿಪರದೆಗೆ ಬಂದು ವರ್ಷಗಳೇ ಕಳೆದರೂ, ಇವತ್ತಿಗೂ ಸೋಶಿಯಲ್ ಮೀಡಿಯಾದಲ್ಲಿ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ರಾಧಿಕಾ ಪಂಡಿತ್ ಕಿರುತೆರೆಯಿಂದ ಬೆಳ್ಳಿಪರದೆಗೆ

ರಾಧಿಕಾ ಪಂಡಿತ್ ಅವರ ಬಣ್ಣದ ಪ್ರಪಂಚದ ಜರ್ನಿ ಶುರುವಾಗಿದ್ದು ಕಿರುತೆರೆಯ ಮೂಲಕ. ‘ನಂದಗೋಕುಲ’ ಮತ್ತು ‘ಸುಮಂಗಲಿ’ ಧಾರಾವಾಹಿಗಳಲ್ಲಿ ನಟಿಸುತ್ತಾ ಮನೆಮಾತಾಗಿದ್ದ ಈ ಪ್ರತಿಭೆಗೆ, 2008ರಲ್ಲಿ ಬೆಳ್ಳಿಪರದೆಯ ಬಿಗ್ ಬ್ರೇಕ್ ಸಿಕ್ತು. ಅದುವೇ ಶಶಾಂಕ್ ನಿರ್ದೇಶನದ ‘ಮೊಗ್ಗಿನ ಮನಸು’ ಚಿತ್ರ. ಮೊದಲ ಸಿನಿಮಾದಲ್ಲೇ ಇವರ ಅದ್ಭುತ ನಟನೆಗೆ ಇಡೀ ಗಾಂಧಿನಗರ ಫಿದಾ ಆಗಿತ್ತು. ಅಷ್ಟೇ ಅಲ್ಲ, ಚೊಚ್ಚಲ ಚಿತ್ರದಲ್ಲೇ ಅತ್ಯುತ್ತಮ ನಟನೆಗಾಗಿ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದ್ರು ರಾಧಿಕಾ.

ಇದನ್ನೂ ಓದಿ : ನಟಿ ಸಮಂತಾಗೆ ತಾಯಿ ಆಗುವ ಸಂಭ್ರಮ?! ವೈರಲ್ ವಿಡಿಯೋ ನೋಡಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ !

ರಾಧಿಕಾ ಪಂಡಿತ್ : ಬ್ಯಾಕ್ ಟು ಬ್ಯಾಕ್ ಹಿಟ್ಸ್

‘ಮೊಗ್ಗಿನ ಮನಸು’ ಗೆಲುವಿನ ಬೆನ್ನಲ್ಲೇ ರಾಧಿಕಾ ಪಂಡಿತ್ ಸ್ಯಾಂಡಲ್‌ವುಡ್‌ನ ಮೋಷ್ಟ್ ವಾಂಟೆಡ್ ನಟಿಯಾದ್ರು. ಆ ನಂತರ ಬಂದ ‘ಲವ್ ಗುರು’, ‘ಕೃಷ್ಣನ್ ಲವ್ ಸ್ಟೋರಿ’, ‘ಹುಡುಗರು’, ‘ಅದ್ದೂರಿ’, ‘ಬಹದ್ದೂರ್’ ನಂತಹ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ವು. ಕೇವಲ ಕಮರ್ಷಿಯಲ್ ಸಿನಿಮಾಗಳಿಗಷ್ಟೇ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯ ಪಾತ್ರಗಳನ್ನು ಆಯ್ದುಕೊಂಡು ಸತತವಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡ ಹೆಗ್ಗಳಿಕೆ ಇವರದ್ದು. ಇದೇ ಕಾರಣಕ್ಕೆ ಚಿತ್ರರಂಗ ಇವರನ್ನು ಪ್ರೀತಿಯಿಂದ ‘ಲಕ್ಕಿ ಗರ್ಲ್’ ಎಂದೇ ಕರೆಯುತ್ತಿತ್ತು.

ರೀಲ್ ಲೈಫ್ ಟು ರಿಯಲ್ ಲೈಫ್ ಲವ್ ಸ್ಟೋರಿ

ಇನ್ನು ರಾಧಿಕಾ ಪಂಡಿತ್ ಅವರ ವೈಯಕ್ತಿಕ ಜೀವನ ಸಿನಿಮಾ ಕಥೆಗಿಂತ ಕಮ್ಮಿಯೇನಿಲ್ಲ. ತಮ್ಮ ಮೊದಲ ಧಾರಾವಾಹಿ ಮತ್ತು ಮೊದಲ ಸಿನಿಮಾದ ಸಹ-ನಟನಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಬೆಳೆದ ಸ್ನೇಹ, ಆಮೇಲೆ ಪ್ರೀತಿಗೆ ತಿರುಗಿತು. ಹಲವು ವರ್ಷಗಳ ಕಾಲ ಸದ್ದಿಲ್ಲದೆ ಪ್ರೀತಿಸುತ್ತಿದ್ದ ಈ ಕ್ಯೂಟ್ ಜೋಡಿ, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಸದ್ಯ ಈ ಸ್ಟಾರ್ ದಂಪತಿಗೆ ಆಯಿರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಕೊನೆಯದಾಗಿ ‘ಆದಿಲಕ್ಷ್ಮಿ ಪುರಾಣ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಪಂಡಿತ್, ಸದ್ಯ ಸಿನಿಮಾಗಳಿಂದ ದೂರವಿದ್ದರೂ ಸಂಸಾರ ನೌಕೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮುದ್ದಾದ ಫ್ಯಾಮಿಲಿ ಫೋಟೋಗಳು ಮತ್ತು ಮಕ್ಕಳ ವಿಡಿಯೋಗಳನ್ನು ಶೇರ್ ಮಾಡ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಬೆಳ್ಳಿಪರದೆ ಮೇಲೆ ಸ್ಯಾಂಡಲ್‌ವುಡ್ ಕ್ವೀನ್ ಮತ್ತೆ ಕಂಬ್ಯಾಕ್ ಮಾಡ್ಲಿ,  ತಮ್ಮ ನಟನೆಯ ಜಾದೂ ತೋರಿಸ್ಲಿ ಅನ್ನೋದು  ಕೋಟ್ಯಂತರ ಅಭಿಮಾನಿಗಳ ಒಂದೇ ಆಸೆ.

radhika pandit craze and demand in sandalwood reasons behind her popularity

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories