ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡ್ ಅನರ್ಹ: ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳಿಗೂ ಬೀಳುತ್ತಾ ಕುತ್ತು?

ಕರ್ನಾಟಕ ಸರಕಾರ ಅನರ್ಹ ಬಿಪಿಎಲ್‌ ಕಾರ್ಡುದಾರರ ವಿರುದ್ದ ಸಮರಕ್ಕೆ ಇಳಿದೆ. ಈಗಾಗಲೇ ಲಕ್ಷಾಂತರ ಅನರ್ಹರನ್ನು ಬಿಪಿಎಲ್‌ ಪಟ್ಟಿಯಿಂದ ಕಿತ್ತು ಹಾಕಿರುವ ಕರ್ನಾಟಕ ಸರಕಾರ ಇದೀಗ ಮತ್ತೆ 14 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್‌ ಕಾರ್ಡುದಾರರ ಪಟ್ಟಿಯನ್ನು ಸಿದ್ದಪಡಿಸಿದೆ.

ಕರ್ನಾಟಕ ಸರಕಾರ ಅನರ್ಹ ಬಿಪಿಎಲ್‌ ಕಾರ್ಡುದಾರರ ವಿರುದ್ದ ಸಮರಕ್ಕೆ ಇಳಿದೆ. ಈಗಾಗಲೇ ಲಕ್ಷಾಂತರ ಅನರ್ಹರನ್ನು     ಬಿಪಿಎಲ್‌ ಪಟ್ಟಿಯಿಂದ ಕಿತ್ತು ಹಾಕಿರುವ ಕರ್ನಾಟಕ ಸರಕಾರ ಇದೀಗ ಮತ್ತೆ 14 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್‌ ಕಾರ್ಡುದಾರರ ಪಟ್ಟಿಯನ್ನು ಸಿದ್ದಪಡಿಸಿದೆ.

ಡಿಕೆ ಶಿವಕುಮಾರ್‌ ಕರ್ನಾಟಕದ ಸಿಎಂ ಆಗುತ್ತಲೇ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳ ಮರುಪರಿಷ್ಕರಣೆಗೆ ಮುಂದಾದ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಗೂ ಕುತ್ತು ಬರಲಿದೆ. ಅರ್ಹರಿಗೆ ಮಾತ್ರವೇ ಬಿಪಿಎಲ್‌ ಕಾರ್ಡ್‌ ಸೌಲಭ್ಯ ಒದಗಿಸುವ ಸಲುವಾಗಿ, ಈಗಾಗಲೇ ಅನರ್ಹರ ಪಟ್ಟಿಯನ್ನು ಸಿದ್ದಪಡಿಸಲಾಗುತ್ತಿದೆ.

ಇದನ್ನೂ ಓದಿ : ಟ್ರಾಫಿಕ್ ಫೈನ್ 50% ಡಿಸ್ಕೌಂಟ್‌ಗೆ ಮುಗಿಬಿದ್ದ ಜನರು.. 100 ಕೇಸ್‌ಗೆ 27 ಸಾವಿರ ರೂ. ಕಟ್ಟಿ ದಾಖಲೆ ಬರೆದ ಬೈಕ್ ಸವಾರ!

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್‌ ಮುನಿಯಪ್ಪ ಅವರು ಅನ್ನಭಾಗ್ಯ ಯೋಜನೆಯಡಿ ಆಗಲಿರುವ ಬದಲಾವಣೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ 13 ರಿಂದ 14 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್‌ ಕಾರ್ಡುದಾರರು ಇದ್ದು, ಅನರ್ಹ ಪಡಿತರದಾರರ ಪಟ್ಟಿಯನ್ನು ಈಗಾಗಲೇ ಸಿದ್ದಪಡಿಸಲಾಗಿದೆ. ಬಿಪಿಎಲ್‌ ಪಟ್ಟಿಯಿಂದ ಶೀಘ್ರದಲ್ಲಿಯೇ ಅನರ್ಹರ ಹೆಸರನ್ನು ಕೈಬಿಡಲಾಗುತ್ತದೆ ಎಂದಿದ್ದಾರೆ.

ಅನರ್ಹ ಬಿಪಿಎಲ್‌ ಕಾರ್ಡುದಾರರು ಸ್ವಯಂಪ್ರೇರಿತರಾಗಿ ಎಪಿಎಲ್‌ ಕಾರ್ಡಿಗೆ ಬದಲಾಯಿಸಿಕೊಳ್ಳುವಂತೆ ಈಗಾಗಲೇ ಮನವಿ ಮಾಡಲಾಗಿತ್ತು. ಆದರೂ ಕೂಡ ಎಪಿಎಲ್‌ಗೆ ಲಕ್ಷಾಂತರ ಮಂದಿ ವರ್ಗಾಯಿಸಿಕೊಂಡಿಲ್ಲ. ಈಗಾಗಲೇ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅಂತಹವರ ಬಿಪಿಎಲ್‌ ಕಾರ್ಡುಗಳನ್ನು ರದ್ದುಪಡಿಸಲಾಗುವುದು ಎಂದಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories