ವಿದೇಶಿ ಪ್ರವಾಸಿಗರಿಗೆ ಕೇಂದ್ರದ ಬಿಗ್ ಶಾಕ್ : 14 ವರ್ಷಗಳ ಬಳಿಕ ಪಾಸ್‌ಪೋರ್ಟ್ ಶುಲ್ಕ ಭಾರಿ ಹೆಚ್ಚಳ

ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಲು ಸಜ್ಜಾಗುತ್ತಿರುವ ಸಾರ್ವಜನಿಕರಿಗೆ ಕೇಂದ್ರ ಸರ್ಕಾರವು ಭಾರಿ ಆರ್ಥಿಕ ಶಾಕ್ ನೀಡಿದೆ. ಸುದೀರ್ಘ 14 ವರ್ಷಗಳ ನಂತರ ದೇಶದಲ್ಲಿ ಪಾಸ್‌ಪೋರ್ಟ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.

ಉದ್ಯೋಗ, ಶಿಕ್ಷಣ ಹಾಗೂ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಲು ಸಜ್ಜಾಗುತ್ತಿರುವ ಸಾರ್ವಜನಿಕರಿಗೆ ಕೇಂದ್ರ ಸರ್ಕಾರವು ಭಾರಿ ಆರ್ಥಿಕ ಶಾಕ್ ನೀಡಿದೆ. ಸುದೀರ್ಘ 14 ವರ್ಷಗಳ ನಂತರ ದೇಶದಲ್ಲಿ ಪಾಸ್‌ಪೋರ್ಟ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ವಿದೇಶಾಂಗ ಸಚಿವಾಲಯವು ಹೊರಡಿಸಿರುವ ‘ಪಾಸ್‌ಪೋರ್ಟ್‌ಗಳ (ತಿದ್ದುಪಡಿ) ನಿಯಮಗಳು, 2026’ ರ ಹೊಸ ಅಧಿಸೂಚನೆಯ ಪ್ರಕಾರ, ಪರಿಷ್ಕೃತ ದರಗಳು ಜುಲೈ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.

ಹೊಸ ನಿಯಮಾವಳಿಗಳ ಅನ್ವಯ, 18 ವರ್ಷ ಮೇಲ್ಪಟ್ಟ ಅರ್ಜಿದಾರರಿಗೆ ಸಾಮಾನ್ಯ ವಿಭಾಗದಡಿ 36 ಪುಟಗಳ ಹೊಸ ಪಾಸ್‌ಪೋರ್ಟ್ ದರವನ್ನು ₹1,500 ರಿಂದ ₹2,500 ಕ್ಕೆ ಏರಿಸಲಾಗಿದೆ. ತುರ್ತಾಗಿ ಪಾಸ್‌ಪೋರ್ಟ್ ಬಯಸುವವರಿಗೆ ತತ್ಕಾಲ್ ಯೋಜನೆಯಡಿ ಈ ಶುಲ್ಕವು ₹3,500 ರಿಂದ ₹5,000 ಕ್ಕೆ ತಲುಪಿದೆ. ಅದೇ ರೀತಿ, 60 ಪುಟಗಳ ಜಂಬೋ ಪಾಸ್‌ಪೋರ್ಟ್ ಪಡೆಯಲು ಇನ್ನು ಮುಂದೆ ಸಾಮಾನ್ಯ ವರ್ಗದಲ್ಲಿ ₹3,500 ಹಾಗೂ ತತ್ಕಾಲ್ ಅಡಿಯಲ್ಲಿ ₹6,000 ಪಾವತಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕರಿಗೆ 36 ಪುಟಗಳ ಹೊಸ ಅರ್ಜಿಗೆ ಸಾಮಾನ್ಯ ಯೋಜನೆಯಡಿ ₹1,750 ಮತ್ತು ತತ್ಕಾಲ್‌ನಲ್ಲಿ ₹4,250 ನಿಗದಿಪಡಿಸಲಾಗಿದೆ.

Also Read: ದೇಶದಲ್ಲಿ ನಕಲಿ ಔಷಧಿಗಳ ಹಾವಳಿಗೆ ಬ್ರೇಕ್​ : ಲಸಿಕೆ ಹಾಗೂ ಕ್ಯಾನ್ಸರ್ ಔಷಧಗಳ ಮೇಲೆ ‘QR Code’ ಕಡ್ಡಾಯ

ಇನ್ನು ಮುಂದೆ ಕಳೆದುಹೋದ ಅಥವಾ ಹಾನಿಗೊಳಗಾದ 36 ಪುಟಗಳ ಪಾಸ್‌ಪೋರ್ಟ್ ಬದಲಾಗಿ ಹೊಸದನ್ನು ಪಡೆಯಲು ಸಾಮಾನ್ಯ ಯೋಜನೆಗೆ ₹5,000 ಮತ್ತು ತತ್ಕಾಲ್ ವಿಭಾಗಕ್ಕೆ ₹7,500 ರಷ್ಟು ಭಾರಿ ದರ ತೆರಬೇಕಾಗುತ್ತದೆ. ಇದರೊಂದಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಹಾಗೂ ಶರಣಾಗತಿ ಪ್ರಮಾಣಪತ್ರಗಳ ದರವನ್ನು ಭಾರತದಲ್ಲಿ ₹750 ಗೆ ಪರಿಷ್ಕರಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ, ಇ-ಪಾಸ್‌ಪೋರ್ಟ್ ಸುರಕ್ಷತೆಯ ಸುಧಾರಣೆ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಸರಿದೂಗಿಸಲು ಈ ದರ ಏರಿಕೆ ಅನಿವಾರ್ಯ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಜುಲೈ ಒಂದರ ಒಳಗೆ ಅರ್ಜಿ ಸಲ್ಲಿಸುವವರು ಹಳೆಯ ದರದಲ್ಲೇ ಈ ಸೌಲಭ್ಯ ಪಡೆಯಬಹುದಾಗಿದೆ.

Centers big shock for foreign tourists Passport fees hiked after 14 years

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories