ಹೀರೋ ಗ್ಲಾಮರ್ ಎಕ್ಸ್ 125 : ಅತ್ಯಂತ ಕಡಿಮೆ ಬೆಲೆ, 1 ಲೀಟರ್ಗೆ 65 ಕಿ.ಮೀ. ಮೈಲೇಜ್

ಹೀರೋ ಮೋಟೋಕಾರ್ಪ್ ಕಂಪೆನಿ ಇದೀಗ ಹೀರೋ ಗ್ಲಾಮರ್ ಎಕ್ಸ್ 125 (Hero Glamour x 125 ) ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.
ಮಧ್ಯಮ ವರ್ಗದವರನ್ನೇ ಗಮನದಲ್ಲಿ ಇಟ್ಟು ಕೊಂಡು ಈ ಬೈಕ್ ತಯಾರಿಸಲಾಗಿದೆ. ಬಿಎಸ್6 ಮಾದರಿಯ ಈ ಬೈಕ್ನಲ್ಲಿ ಮೈಲೇಜ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗ್ಲಾಮರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಹೀರೋ ಗ್ಲಾಮರ್ ಎಕ್ಸ್ 125 ಬೈಕ್ ವಿಶೇಷತೆ ಏನು ?
ಸುಧಾರಿತ ತಂತ್ರಜ್ಞಾನ : ಗ್ಲಾಮರ್ ಎಕ್ಸ್ಟೆಕ್ನ ಮುಖ್ಯ ವಿಶೇಷತೆ ಅಂದ್ರೆ ಬೈಕ್ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್. ಇದು ಬೈಕ್ನ ವೇಗ, ಟ್ರಿಪ್ ಮೀಟರ್, ಓಡೋಮೀಟರ್ ಮತ್ತು ಇಂಧನ ಮಟ್ಟದ ಮಾಹಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.
ಬ್ಲೂಟೂತ್ ಕನೆಕ್ಟಿವಿಟಿ: ಈ ಬೈಕ್ ಬ್ಲೂಟೂತ್ ಸಂಪರ್ಕ ಸೌಲಭ್ಯವನ್ನು ಹೊಂದಿದೆ. ಇದರ ಮೂಲಕ ನಿಮ್ಮ ಫೋನ್ ಅನ್ನು ಬೈಕ್ಗೆ ಸಂಪರ್ಕಿಸಿ, ಕರೆ ಮತ್ತು ಎಸ್ಎಂಎಸ್ ನೋಟಿಫಿಕೇಶನ್ಗಳನ್ನು ಪಡೆಯಬಹುದು.
ಟರ್ನ್-ಬೈ-ಟರ್ನ್ ನ್ಯಾವಿಗೇಷನ್: ಇದು ಅತ್ಯಂತ ಉಪಯುಕ್ತ ವೈಶಿಷ್ಟ್ಯವಾಗಿದ್ದು, ಬ್ಲೂಟೂತ್ ಮೂಲಕ ನಿಮ್ಮ ಫೋನ್ನಿಂದ ಮ್ಯಾಪ್ ನ್ಯಾವಿಗೇಶನ್ ಮಾಹಿತಿ ಡಿಜಿಟಲ್ ಡಿಸ್ಪ್ಲೇಯಲ್ಲಿ ನೇರವಾಗಿ ಕಾಣಿಸುತ್ತದೆ.
ಇಂಧನ ದಕ್ಷತೆ: ಇದರ i3S ತಂತ್ರಜ್ಞಾನ (ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್) ಟ್ರಾಫಿಕ್ನಲ್ಲಿ ಇಂಜಿನ್ ಅನ್ನು ಸ್ವಯಂಚಾಲಿತವಾಗಿ ಆಫ್ ಮಾಡಿ, ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ.
ವಿನ್ಯಾಸ: ಬೈಕ್ನ ಲುಕ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಎಲ್ಇಡಿ ಹೆಡ್ಲೈಟ್, ಹೊಸ ಗ್ರಾಫಿಕ್ಸ್ ಮತ್ತು ಆಕರ್ಷಕ ಬಾಡಿ ವಿನ್ಯಾಸವು ಬೈಕ್ಗೆ ಸ್ಪೋರ್ಟಿ ಲುಕ್ ನೀಡುತ್ತದೆ. ಇದಲ್ಲದೆ, ಯುಎಸ್ಬಿ ಚಾರ್ಜಿಂಗ್ ಪೋರ್ಟ್ ಲಭ್ಯವಿದೆ.

ಹೀರೋ ಗ್ಲಾಮರ್ ಎಕ್ಸ್ 125 ಬೈಕ್ ಮೈಲೇಜ್ ಎಷ್ಟಿದೆ ?
ಹಿರೋ ಕಂಪೆನಿಯ ಬೈಕ್ ಗಳು ಅತೀ ಹೆಚ್ಚು ಮೈಲೇಜ್ ನೀಡುತ್ತಿವೆ. ಅದ್ರಲ್ಲೂ ಹೊಸ ಗ್ಲಾಮರ್ ಬೈಕ್ನಲ್ಲಿ ಮೈಲೇಜ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಂಪೆನಿ ನೀಡಿರುವ ಮಾಹಿತಿಯ ಪ್ರಕಾರ 60-65 ಕಿಲೋಮೀಟರ್/ಲೀಟರ್ ಮೈಲೇಜ್ ನೀಡುತ್ತದೆ.
ಹೀರೋ ಮೋಟೋಕಾರ್ಪ್ ಕಂಪನಿಯು ಅಧಿಕೃತವಾಗಿ ತಿಳಿಸಿರುವ ಮಾಹಿತಿಯ ಪ್ರಕಾರ, ಈ ಬೈಕ್ ಸುಮಾರು 63 kmpl ಮೈಲೇಜ್ ನೀಡುತ್ತದೆ (ARAI ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಮೈಲೇಜ್).
ಗ್ಲಾಮರ್ ಎಕ್ಸ್ಟೆಕ್ನ ಬಳಕೆದಾರರು ನೀಡಿದ ವರದಿಗಳ ಪ್ರಕಾರ, ನಗರದ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಈ ಬೈಕ್ ಸುಮಾರು 54-57 kmpl ಮತ್ತು ಹೆದ್ದಾರಿಗಳಲ್ಲಿ 57-63 kmpl ಮೈಲೇಜ್ ನೀಡುತ್ತದೆ.
ಬೈಕ್ನಲ್ಲಿರುವ i3S (Idle Start-Stop) ತಂತ್ರಜ್ಞಾನವು ಬಹಳಷ್ಟು ಸಹಾಯಕವಾಗಿದೆ. ಟ್ರಾಫಿಕ್ನಲ್ಲಿ ಬೈಕ್ ನಿಂತಾಗ, ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಆಫ್ ಮಾಡುತ್ತದೆ ಮತ್ತು ಕ್ಲಚ್ ಒತ್ತಿದ ತಕ್ಷಣ ಮತ್ತೆ ಆನ್ ಆಗುತ್ತದೆ. ಇದರಿಂದ ಇಂಧನ ವ್ಯರ್ಥವಾಗುವುದು ತಪ್ಪುತ್ತದೆ.
ಇದನ್ನೂ ಓದಿ : ಟಾಟಾ ಕರ್ವ್ ದಾಖಲೆಯ ಮಾರಾಟ ; ಬೆಲೆ ಎಷ್ಟು ಗೊತ್ತಾ ?
ಹೀರೋ ಗ್ಲಾಮರ್ ಎಕ್ಸ್ 125 ಬೆಲೆ ಎಷ್ಟು ?
ಹೀರೋ ಗ್ಲಾಮರ್ ಎಕ್ಸ್ಟೆಕ್ನ ಬೆಲೆ ನಗರದಿಂದ ನಗರಕ್ಕೆ ವ್ಯತ್ಯಾಸವಾಗುತ್ತದೆ. ದೆಹಲಿ ಮಾರುಕಟ್ಟೆಯಲ್ಲಿ ಈ ಬೈಕ್ ಬೆಲೆ ಎಷ್ಟಿದೆ ಅಂತಾ ನೋಡೋದಾದ್ರೆ, ಎಕ್ಸ್-ಶೋರೂಂ ಬೆಲೆಗಳು ಡ್ರಮ್ ಬ್ರೇಕ್ ವೇರಿಯಂಟ್ಗೆ ₹90,498 ಮತ್ತು ಡಿಸ್ಕ್ ಬ್ರೇಕ್ ವೇರಿಯಂಟ್ಗೆ ₹95,098 ರಷ್ಟಿವೆ.
ಕರ್ನಾಟಕದಂತಹ ರಾಜ್ಯಗಳಲ್ಲಿ ಆನ್-ರೋಡ್ ಬೆಲೆ (ಎಕ್ಸ್-ಶೋರೂಂ, ಆರ್ಟಿಒ, ಮತ್ತು ವಿಮೆ ಸೇರಿ) ಸುಮಾರು ₹1.10 ಲಕ್ಷದಿಂದ ₹1.17 ಲಕ್ಷದವರೆಗೆ ಇರುತ್ತದೆ. ಮೈಲೇಜ್ ವಿಷಯದಲ್ಲಿ, ಕಂಪನಿಯು ಅಧಿಕೃತವಾಗಿ ತಿಳಿಸಿದೆ.
ಇದನ್ನೂ ಓದಿ : ಹೊಂಡಾದ ಹೊಸ ಸಿಬಿ 125 ಹಾರ್ನೆಟ್ ಬೈಕ್ ಬೆಲೆ ಎಷ್ಟು ?
Hero Glamour x 125 Lowest price 65 km l mileage Sold in Five Colours Kannada news



