ಕವಾಸಕಿ ನಿಂಜಾ 300 ಬೈಕ್‌ಗೆ ಭರ್ಜರಿ ಡಿಸ್ಕೌಂಟ್‌! ಮಾರ್ಚ್‌ ಮುಗಿಯುವುದರ ಒಳಗೆ ಬುಕ್‌ ಮಾಡಿ

Kawasaki Ninja 300: ಕವಾಸಕಿ ತನ್ನ ಜನಪ್ರಿಯ ಬೈಕ್‌ ನಿಂಜಾ 300 ಮೇಲೆ ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ. ಮಾರ್ಚ್‌ನಲ್ಲಿ ಈ ಬೈಕ್‌ ಖರೀದಿಸಿದ್ರೆ ಎಷ್ಟು ರಿಯಾಯಿತಿ ಸಿಗುತ್ತೆ? ಇಲ್ಲಿದೆ ಓದಿ.

Kawasaki Ninja 300: ಜಪಾನಿನ ಮೋಟಾರ್‌ಸೈಕಲ್ ತಯಾರಕ ಕಂಪನಿ ಕವಾಸಕಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅವುಗಳಲ್ಲಿ ಜನಪ್ರಿಯ ಕವಾಸಕಿ ನಿಂಜಾ 300 ಮೋಟಾರ್‌ ಸೈಕಲ್‌ ಕೂಡಾ ಒಂದು. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್‌ ತಿಂಗಳಿನಲ್ಲಿ ಈ ಬೈಕ್‌ ಮೇಲೆ ಬಹು ದೊಡ್ಡ ಮೊತ್ತದ ರಿಯಾಯಿತಿ ನೀಡಲಾಗುತ್ತಿದೆ. ನೀವು ಕವಾಸಕಿ ನಿಂಜಾ 300 ಬೈಕ್‌ ಖರೀದಿಸುವ ಯೋಚನೆ ಇದ್ದರೆ ನಿಮಗೆ ಎಷ್ಟು ರಿಯಾಯಿತಿ ಸಿಗಬಹುದು ಇಲ್ಲಿದೆ ಓದಿ.

ಕವಾಸಕಿ ನಿಂಜಾ 300 ಬೈಕ್‌ಗೆ ನೀಡಿರುವ ರಿಯಾಯಿತಿ ಎಷ್ಟು?

ವರದಿಯ ಪ್ರಕಾರ ಕಂಪನಿಯು ಈ ಬೈಕ್‌ ಮೇಲೆ ಮಾರ್ಚ್‌ ತಿಂಗಳ ಖರೀದಿಯಲ್ಲಿ 28,000 ರೂ. ರಿಯಾಯಿತಿ ನೀಡುತ್ತಿದೆ. ಈ ಕೊಡುಗೆ 2024 ರ ಮಾಡೆಲ್‌ ಮೇಲೆ ಮಾತ್ರ ಅನ್ವಯಿಸುತ್ತದೆ. ಜೊತೆಗೆ ಇದರೊಂದಿಗೆ ಸುರಕ್ಷಿತ ಚಾಲನೆಗಾಗಿ KYT TT ರೆವೊ ಹೆಲ್ಮೆಟ್ ಅನ್ನು ಸಹ ನೀಡುತ್ತಿದೆ.

ಕವಾಸಕಿ ನಿಂಜಾ 300 ಬೈಕ್‌ ವೈಶಿಷ್ಟ್ಯ?

ಕವಾಸಕಿ ನಿಂಜಾ 300 ಬೈಕ್‌ 293 ಸಿಸಿಯ ಪ್ಯಾರಲಲ್‌– ಟ್ವಿನ್‌ ಎಂಜಿನ್‌ ಹೊಂದಿದೆ. ಇದು 29 ಕಿಲೋವ್ಯಾಟ್ ಪವರ್ ಮತ್ತು 26.1 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದನ್ನು ಆರು-ವೇಗದ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಕಂಪನಿ ಹೇಳಿರುವ ಪ್ರಕಾರ ಇದರಲ್ಲಿ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್, ಡ್ಯುಯಲ್ ಥ್ರೊಟಲ್ ವಾಲ್ವ್‌ಗಳು, ABS, ಡ್ಯುಯಲ್ ಸೀಟುಗಳು, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಚಾನೆಲ್ ABS, ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಫ್ಲೋಟಿಂಗ್ ವಿಂಡ್‌ಸ್ಕ್ರೀನ್ ಮತ್ತು ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳು ಸೇರಿದಂತೆ ಹಲವಾರು ಅತ್ಯುತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿದೆ.

ಇದನ್ನೂ ಓದಿ: Flying Taxis : ಬೆಂಗಳೂರಿನಲ್ಲಿ ಸಂಚಾರ ಕ್ರಾಂತಿ: ಇಂದಿನಿಂದ ಆರಂಭವಾಗಲಿದೆ ಏರ್ ಟ್ಯಾಕ್ಸಿ ಪ್ರಾಯೋಗಿಕ ಸಂಚಾರ

ಬೆಲೆ ಎಷ್ಟು?
ಭಾರತದ ವಾಹನ ಮಾರುಕಟ್ಟೆಯಲ್ಲಿ ಹೆಸರುಗಳಿಸಿರುವ ಕವಾಸಕಿ ನಿಂಜಾ 300 ಬೈಕ್‌ ಅನ್ನು 3.17 ಲಕ್ಷ ರೂ. (ಎಕ್ಸ್‌ ಶೋ ರೂಂ) ಬೆಲೆಯಲ್ಲಿ ಖರೀದಿಸಬಹುದು.

ಯಾರಿಗೆ ಸ್ಪರ್ಧೆ ನೀಡುತ್ತದೆ?

ನಿಂಜಾ 300 ಬೈಕ್‌ ಅನ್ನು ತಯಾರಕು 3000cc ವಿಭಾಗದಲ್ಲಿ ಮಾರಾಟಮಾಡುತ್ತಿದೆ. ಈ ವಿಭಾಗದಲ್ಲಿ ಇದು KTM, ಬಜಾಜ್‌, ಟಿವಿಎಸ್‌ ಮುಂತಾದ ಕಂಪನಿಗಳ ಬೈಕ್‌ಗಳಿಗೆ ನೇರ ಸ್ಪರ್ಧೆ ನೀಡುತ್ತದೆ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories