ಕೈಗಟಕುವ ದರದಲ್ಲಿ ಮಾರುಕಟ್ಟೆಗೆ ಬಂದ ಮಾರುತಿ ಸುಜುಕಿಯ ಅತ್ಯಂತ ಸೇಫ್ ಕಾರು: ವಿಕ್ಟೋರಿಸ್ ಕಾರುಗಳ ದರ ಪಟ್ಟಿ ಹೀಗಿದೆ
Maruti Suzuki Victoris: ಮಾರುತಿ ಸುಜುಕಿ ತನ್ನ ಮಧ್ಯಮ ಗಾತ್ರದ SUV ವಿಕ್ಟೋರಿಸ್ ಅನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದೆ. ಕಂಪನಿಯು ಅದರ ಪರಿಚಯಾತ್ಮಕ ಬೆಲೆಯು 10.50 ಲಕ್ಷದಿಂದ (ಎಕ್ಸ್ ಶೋ ರೂಂ ದರ) ಪ್ರಾರಂಭವಾಗುತ್ತದೆ.
ಮಾರುತಿ ಸುಜುಕಿ ಬಿಡುಗಡೆ ಮಾಡಿದ ವಿಕ್ಟೋರಿಸ್ ಕಾರು ಗ್ರ್ಯಾಂಡ್ ವಿಟಾರಾ SUVಯಿಂದ ಪಡೆದ ಮೈಲ್ಡ್ ಹೈಬ್ರಿಡ್, ಸ್ಟ್ರೊಂಗ್ ಹೈಬ್ರಿಡ್ ಮತ್ತು ಸಿಎನ್‌ಜಿ ಪವರ್ ಟ್ರೇನ್ ಆಯ್ಕೆಗಳ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರುತಿ ಸುಜುಕಿಯ ಪ್ರಮುಖ ಅರೆನಾ ಮಾದರಿಯಲ್ಲಿ ಸ್ಥಾನ ಪಡೆದಿದೆ.
ಇದರ ಅಧಿಕೃತ ಮಾರಾಟವು ಸೆಪ್ಟೆಂಬರ್ 22, 2025 ರಿಂದ ಪ್ರಾರಂಭವಾಗಲಿದೆ. ಈ ಕಾರು ಗ್ಲೋಬಲ್ ಎನ್‌ಸಿಎಪಿ ಹಾಗೂ ಭಾರತ ಎನ್‌ಸಿಎಪಿ ಸ್ಕೋರ್ ಕಾರ್ಡುಗಳಲ್ಲಿ 5 ಸ್ಟಾರ್ ಕ್ರ್ಯಾಶ್ ಟೆಸ್ಟ್ ರೇಟಿಂಗ್ ಪಡೆದುಕೊಂಡಿದೆ. ಅಂದರೆ ವಿಕ್ಟೋರಿಸ್ ಸೇಫ್ ಕಾರುಗಳ ಸಾಲಿಗೆ ಸೇರಿಕೊಂಡಿದೆ.
ಮಾರುತಿ ಸುಜುಕಿ ವಿಕ್ಟೋರಿಸ್ ದರ ಪಟ್ಟಿ
1.5L NA ಸ್ಮಾರ್ಟ್ ಹೈಬ್ರಿಡ್ (ಪೆಟ್ರೋಲ್) – 5MT
LXi: 10,49,900 ರೂ.
VXi: 11,79,900 ರೂ.
ZXi: 13,56,900 ರೂ.
ZXi (O): 14,07,900 ರೂ.
ZXi+: 15,23,900 ರೂ.
ZXi+ (O): 15,81,900 ರೂ.
1.5ಲೀ NA ಸ್ಮಾರ್ಟ್ ಹೈಬ್ರಿಡ್ (ಪೆಟ್ರೋಲ್) – 6AT
VXi: 13,35,900 ರೂ.
ZXi: 15,12,900 ರೂ.
ZXi (O): 15,63,900 ರೂ.
ZXi+: 17,18,900 ರೂ.
ZXi+ (O): 17,76,900 ರೂ.
1.5L NA ಸ್ಮಾರ್ಟ್ ಹೈಬ್ರಿಡ್ (ಪೆಟ್ರೋಲ್) – ಆಲ್‌ಗ್ರಿಪ್ ಸೆಲೆಕ್ಟ್ (6AT)
ZXi+: 18,63,900 ರೂ.
ZXi+ (O): 19,21,900 ರೂ.
ಇದನ್ನೂ ಓದಿ: GST 2.0 ನಂತರ ಗ್ರಾಹಕರ ಬೇಡಿಕೆಯಿಂದ ನಂ.1 ಸ್ಥಾನಕ್ಕೇರಿದ್ದ ಸ್ಕೋಡಾ ಕಾರುಗಳ ಬೆಲೆ ಎಷ್ಟು? ಇಲ್ಲಿದೆ ಪಟ್ಟಿ
ಸ್ಟ್ರಾಂಗ್ ಹೈಬ್ರಿಡ್ (ಇ-ಸಿವಿಟಿ)
VXi: 16,37,900 ರೂ.
ZXi: 17,79,900 ರೂ.
ZXi (O): 18,38,900 ರೂ.
ZXi+: 19,46,900 ರೂ.
ZXi+ (O): 19,98,900 ರೂ.
1.5ಲೀ NA ಪೆಟ್ರೋಲ್ S-CNG – 5MT
LXi: 11,49,900 ರೂ.
VXi: 12,79,900 ರೂ.
ZXi: 14,56,900 ರೂ.
ಮಾರುತಿ ಸುಜುಕಿ ವಿಕ್ಟೋರಿಸ್ ವೈಶಿಷ್ಟ್ಯಗಳು
ಮಾರುತಿ ಸುಜುಕಿ ವಿಕ್ಟೋರಿಸ್ ಗ್ರ್ಯಾಂಡ್ ವಿಟಾರಾದಿಂದ ಪವರ್‌ಟ್ರೇನ್ ಮತ್ತು ಡ್ರೈವ್‌ಟ್ರೇನ್ ಆಯ್ಕೆಗಳನ್ನು ಎರವಲು ಪಡೆದುಕೊಂಡಿದೆ. ಇದು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಮೊದಲನೆಯದು 1.5L NA ಪೆಟ್ರೋಲ್ ಮೋಟಾರ್ ಮತ್ತು ಎರಡನೇಯದು 1.5L ಸ್ಟ್ರಾಂಗ್-ಹೈಬ್ರಿಡ್ ಸೆಟಪ್. 1.5L NA ಪೆಟ್ರೋಲ್ ಎಂಜಿನ್ 139 Nm ಗರಿಷ್ಠ ಟಾರ್ಕ್ ಮತ್ತು 103 Hp ನೀಡುತ್ತದೆ. ಇದು 5-ಸ್ಪೀಡ್ MT ತ್ತು 6-ಸ್ಪೀಡ್ AT ಎಂಬ ಎರಡು ಟ್ರಾನ್ಸ್ಮಿಷನ್ ಆಯ್ಕೆಗಳನ್ನು ಹೊಂದಿದೆ. ಇಷ್ಟೇ ಅಲ್ಲದೆ, CNG ಕಿಟ್ ನ ಆಯ್ಕೆಯನ್ನುಅಳವಡಿಸಲಾಗಿದೆ. ಇದರೊಂದಿಗೆ ಆಟೋಮೆಟಿಕ್ ಟ್ರಾನ್ಸ್ಮಿಷನ್ AWD ವಿನ್ಯಾಸದ ಆಯ್ಕೆಯಿರುತ್ತದೆ. ಆಲ್ ಗ್ರಿಪ್ ಸೆಲೆಕ್ಟ್ ಸಿಸ್ಟಮ್ ಆಟೋ, ಸ್ನೋ, ಸ್ಪೋರ್ಟ್ ಮತ್ತು ಲಾಕ್ ಡ್ರೈವ್ ಮೋಡ್‌ಗಳು ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್‌ನಂತಹ ಮಲ್ಟಿಟೆರೈನ್ ಮೋಡ್ ಸೆಲೆಕ್ಟರ್ ಅನ್ನು ಒಳಗೊಂಡಿದೆ. 1.5 ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಸೆಟಪ್ ನೇರವಾಗಿ ಗ್ರ್ಯಾಂಡ್ ವಿಟಾರಾದಿಂದ ಬಂದಿದೆ. ಇದು 92.5 Hp ಮತ್ತು 122 Nm ಅನ್ನು ಉತ್ಪಾದಿಸುತ್ತದೆ. ಇದನ್ನು e-CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಇದನ್ನೂ ಓದಿ: ಮಹೀಂದ್ರಾ XUV 700 ಖರೀದಿಯಲ್ಲಿ 1 ಲಕ್ಷಕ್ಕೂ ಅಧಿಕ ಉಳಿತಾಯ: ಹೊಸ ಜಿಎಸ್‌ಟಿ ದರದಿಂದ ಭಾರಿ ಲಾಭ
(Maruti Suzuki safest car Victoris lunched in India all variants price list is here)



